ಮೀನುಗಾರರಿಗೆ ಶಾಸಕರಿಂದ ವಿವಿಧ ಸವಲತ್ತುಗಳ ವಿತರಣೆ
MLA distributes various benefits to fishermen
ಕಾರವಾರ 29: ಮೀನುಗಾರಿಕೆ ಇಲಾಖೆ ವತಿಯಿಂದ ವಿವಿಧ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಪ್ರಮಾಣ ಪತ್ರವನ್ನು ಸಾಂಕೇತಿಕವಾಗಿ ಗುರುವಾರ ತಾಲೂಕು ಪಂಚಾಯತ್ ಸಭಾಭವನದಲ್ಲಿ ತ್ರೈಮಾಸಿಕ ಕೆ.ಡಿ.ಪಿ ಸಭೆಯ ಪೂರ್ವದಲ್ಲಿ ಕರ್ನಾಟಕ ಮಾರ್ಕೇಟಿಂಗ್ ಕನ್ಸಲ್ಟೆಂಟ ಅಂಡ್ ಏಜೆನ್ಸಿಸ್ ಅಧ್ಯಕ್ಷ ಹಾಗೂ ಶಾಸಕ ಸತೀಶ ಕೆ. ಸೈಲ್ ವಿತರಿಸಿದರು.
ಮೀನುಗಾರಿಕೆ ಜೀವರಕ್ಷಕ ಸಾಧನ ಸಾಮಗ್ರಿಗಳ ಉಚಿತ ವಿತರಣೆ ಯೋಜನೆಯಡಿ 2024-25 ನೇ ಸಾಲಿನಲ್ಲಿ ಕಾರವಾರ ತಾಲೂಕಿನ 28 ಮೀನುಗಾರಿಕೆ ದೋಣಿಗಳ ಮಾಲೀಕರಿಗೆ ಉಚಿತವಾಗಿ ಲೈಫ್‌ಬಾಯ್‌ಗಳನ್ನು, ಕಾರವಾರದ ನಂದನಗದ್ದ ಅಜಯ ಸುರೇಶ ಸಾವಂತ, ಬೈತಖೋಲ್‌ನ ನಟರಾಜ ಮೋಹನ ದುರ್ಗೇಕರ ಅವರಿಗೆ ಸಂಕೇತಿಕವಾಗಿ ವಿತರಿಸಲಾಯಿತು.ಮೀನು ಮಾರಾಟಕ್ಕೆ ಮತ್ಸ್ಯ ವಾಹಿನಿಗೆ ಸಹಾಯ ಯೋಜನೆಯಡಿ 2024-25 ನೇ ಸಾಲಿನಲ್ಲಿ ಮೀನು ಮಾರಟಕ್ಕೆ ದ್ವಿ ಚಕ್ರವಾಹನ ಖರೀದಿಗೆ ಸಹಾಯ ಧನ ಪ್ರತಿ ಫಲಾನುಭವಿಗೆ ರೂ. 30,000 ರಂತೆ ಮಾಜಾಳಿಯ ದಾಂಡೇಬಾಗನ ಸೈಲೇಶ ಲಾಡು ಸೈಲ್, ದಿಲಕುಶ ಜೈವಂತ ಬೊಬ್ರೇಕರ 2 ಫಲಾನುಭವಿಗಳಿಗೆ ಹಾಗೂ ನಾಡದೋಣಿಗಳ ಮೂಲಕ ಮೀನುಗಾರಿಕೆ ಮಾಡಲು ಬಲೆ ಖರೀದಿಸಿದ 10 ಫಲಾನುಭವಿಗಳಿಗೆ ಬಲೆ ಖರೀದಿಯ ಶೇ.50 ರಷ್ಟು ರೂ. 5000 ರಂತೆ ಸಹಾಯಧನ ವಿತರಿಸಲಾಯಿತು.ಮುದಗಾ ಮೀನುಗಾರಿಕೆ ಬಂದರಿನಲ್ಲಿ ಮೀನುಗಾರಿಕೆ ಚಟುವಟಿಕೆಯಲ್ಲಿ ತೊಡಗಿರುವಾಗ ಮೃತಪಟ್ಟ ಅಮದಳ್ಳಿಯ ಬ್ರಹ್ಮದೇವರವಾಡದ ಯಶ್ವಂತ ವೆಂಕಪ್ಪ ಬೊಬ್ರುಕರ ಅವರ ಪತ್ನಿ ಮೀನಾಕ್ಷಿ ಯಶ್ವಂತ ಬೋಬ್ರುಕರ ಇವರಿಗೆ ಮೀನುಗಾರರ ಸಂಕಷ್ಟ ಪರಿಹಾರ ನಿಧಿಯಿಂದ ರೂ. 8.00.000 ಹಾಗೂ ರಭಸವಾದ ಮಳೆಗಾಳಿಗೆ ನಾರಾಯಣ ಮಂಜು ಹರಿಕಂತ್ರ, ಹರಿಕಂತ್ರವಾಡ, ಕಾರವಾರ ಇವರ ಮಾಲಕತ್ವದ ಮೀನುಗಾರಿಕೆ ನಾಡದೋಣಿ ಹಾಗೂ ಬಲೆ ಸಂಪೂರ್ಣ ಹಾನಿಯಾಗಿದ್ದು, ಹಾನಿಯ 50ಅ ರಂತೆ ರೂ.75,000 ಹಾಗೂ ಕಾರವಾರ ದೇವಬಾಗದ ಅಶ್ವಿನಿ ಗಣಪತಿ ಸಾಳಗಾಂವಕರ ಅವರ ಮೀನುಗಾರಿಕೆ ಬಲೆ ಸಂಪೂರ್ಣ ಹಾನಿಯಾಗಿದ್ದು, ಹಾನಿಯ 50ಅ ರಂತೆ ರೂ.24,190 ಮೀನುಗಾರರ ಸಂಕಷ್ಟ ಪರಿಹಾರ ನಿಧಿಯಿಂದ ಮಂಜೂರಾತಿ ಪತ್ರ ವಿತರಿಸಲಾಯಿತು.
2022-23 ನೇ ಸಾಲಿನ ಮತ್ಸ್ಯಾಶ್ರಯ ಯೋಜನೆಯಡಿ ಕಾರವಾರ ತಾಲೂಕಿನ 36 ಫಲಾನುಭವಿಗಳಿಗೆ ಮನೆ ಮಂಜೂರಾತಿ ಪ್ರಮಾಣ ಪತ್ರವನ್ನು ಸಾಂಕೇತಿಕವಾಗಿ ವಿತರಿಸಲಾಯಿತು.ಈ ಸಂದರ್ಭದಲ್ಲಿ ್ಲ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸತೀಶ ನಾಯ್ಕ, ತಾಲೂಕಾಧ್ಯಕ್ಷ ರಾಜೇಂದ್ರ ರಾಣೆ, ತಹಶೀಲ್ದಾರ ನಿಶ್ಚಲ್ ನರೋನಾ, ತಾಲೂಕು ಪಂಚಾಯತ ಆಡಳಿತ ಅಧಿಕಾರಿ ಸೋಮಶೇಖರ ಮೇಸ್ತಾ, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ವೀರನಗೌಡ ಪಿ. ಏಣಗೌಡರ , ನಗರ ಸಭೆಯ ಪೌರಾಯುಕ್ತ ಜಗದೀಶ್ ಹುಲಗಜ್ಜಿ, ಮಿನುಗಾರಿಕೆ ಇಲಾಖೆಯ ಉಪ ನಿರ್ದೆಶಕ ಪ್ರತೀಕ್ ತಾಲೂಕು ಕೆ.ಡಿ.ಪಿ ನಾಮನಿರ್ದೇಶಿತ ಸದಸ್ಯರು, ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ 