ಬೆಳಗಾವಿ

ಹೊಸ ನಾನ್ - ಎಸಿ ಸ್ಲೀಪರ್ ಬಸ್ಗಳ ಲೋಕಾರೆ​‍್ಣ ಶಾಸಕ ವಿಶ್ವಾಸ ವೈದ್ಯ

ಹೊಸ ನಾನ್ - ಎಸಿ ಸ್ಲೀಪರ್ ಬಸ್ಗಳ ಲೋಕಾರೆ​‍್ಣ ಶಾಸಕ ವಿಶ್ವಾಸ ವೈದ್ಯ


ಸವದತ್ತಿ 02 : ನಗರದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸವದತ್ತಿ ಘಟಕದ ವತಿಯಿಂದ ಸಾರ್ವಜನಿಕರ ಪ್ರಯಾಣ ಅನುಕೂಲಕ್ಕಾಗಿ ಸೇರೆ​‍್ಡಗೊಳಿಸಲಾದ 2 ಹೊಸ ನಾನ್‌-ಎಸಿ ಸ್ಲೀಪರ್ ಬಸ್ಗಳಿಗೆ  ಶಾಸಕ ವಿಶ್ವಾಸ ವೈದ್ಯ ಅವರು ಹಸಿರು ನಿಶಾನೆ ತೋರುವ ಮೂಲಕ ಅಧಿಕೃತವಾಗಿ ಚಾಲನೆ ನೀಡಿದರು.  ನಗರದ  ಬಸ್ ನಿಲ್ದಾಣದ ಆವರಣದಲ್ಲಿ ನಡೆದ ಈ ಸರಳ ಹಾಗೂ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಯಾಣಿಕರಿಗೆ ಅತ್ಯುತ್ತಮ, ಸುರಕ್ಷಿತ ಹಾಗೂ ಆರಾಮದಾಯಕ ಸಾರಿಗೆ ಸೇವೆಯನ್ನು ಒದಗಿಸುವುದು ನಮ್ಮ ಸರ್ಕಾರದ ಮತ್ತು ಸಾರಿಗೆ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ.

ಸವದತ್ತಿ ಘಟಕಕ್ಕೆ ಹೊಸ ಬಸ್ಗಳು ಸೇರೆ​‍್ಡಯಾಗಿರುವುದರಿಂದ ದೂರದ ಊರುಗಳಿಗೆ ಪ್ರಯಾಣಿಸುವ ಸಾರ್ವಜನಿಕರಿಗೆ, ಅದರಲ್ಲೂ ವಿಶೇಷವಾಗಿ ರಾತ್ರಿ ವೇಳೆಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಪ್ರಯಾಣಿಕರು ಸಾರಿಗೆ ಸಂಸ್ಥೆಯ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಹಾಗೂ ಸಾರ್ವಜನಿಕ ಆಸ್ತಿಯಾದ ಈ ಬಸ್ಗಳನ್ನು ಕಾಪಾಡಿಕೊಳ್ಳುವಲ್ಲಿ ಸಾರ್ವಜನಿಕರು ಸಹಕರಿಸಬೇಕು ಎಂದರು. ಸವದತ್ತಿ ಘಟಕದ ವ್ಯವಸ್ಥಾಪಕ ಅರುಣ ಜಿ, ಗೀರೀಶ್ ಮುನವಳ್ಳಿ, ಬಸವರಾಜ ಪ್ರಭುನವರ, ಪ್ರವೀಣ್ ರಾಮಪ್ಪನವರ, ಹಮನಂತಪ್ಪ ಭೋವಿ, ಮಲ್ಲಿಕಾರ್ಜುನ ಬೇವೂರ, ಉಮೇಶ್ ಗೌಡರ, ಸುರೇಶ ತುಪ್ಪದ, ಆಸೀಫ ಬಾಗೋಜಿಕೊಪ್ಪ, ಹಾಗೂ  ಘಟಕದ ಸಿಬ್ಬಂದಿ ವರ್ಗ ಹಾಗೂ ಸ್ಥಳೀಯ ಪ್ರಮುಖರು, ಕಾಂಗ್ರೆಸ್ ಪಕ್ಷದ ಮುಖಂಡರು ಉಪಸ್ಥಿತರಿದ್ದರು. 


ಸುದ್ದಿ ಓದಿ