ಕನಕ ಪತ್ತಿನ ಸಹಕಾರ ಸಂಘಕ್ಕೆ ಎಂ.ಪರಮೇಶ್ವರ್ಪ ಅದ್ಯಕ್ಷರಾಗಿ ಆಯ್ಕೆ
ಹೂವಿನಹಡಗಲಿ 02- ಇಲ್ಲಿನ ಕನಕ ಪತ್ತಿನ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಹಿರಿಯ ವಕೀಲರಾದ ಎಂ.ಪರಮೇಶ್ವರ್ಪ, ಉಪಾದ್ಯಕ್ಷರಾಗಿ ವೀರಬಸಮ್ಮ ಅವರು ಸೋಮವಾರ ನಡೆದ ಚುನಾವಣೆ ಯಲ್ಲಿ ಅವಿರೋಧ ಆಯ್ಕೆಯಾಗಿದ್ದಾರೆ.ಪಟ್ಟಣದ ಕನಕ ಕೋಅಪ್ರೇಟಿವ್ ಬ್ಯಾಂಕಿಗೆ ನೂತನ ಆಡಳಿತ ಮಂಡಳಿ ಸಭೆ ಹಿನ್ನೆಲೆಯಲ್ಲಿ ಅದ್ಯಕ್ಷ ,ಉಪಾಧ್ಯಕ್ಷ ಆಯ್ಕೆಗೆ ಚುನಾವಣೆ ಸಭೆ ಕರೆಯಲಾಗಿತ್ತು.ಅದ್ಯಕ್ಷ ಸ್ಥಾನಕ್ಕೆ ಎಂ.ಪರಮೇಶ್ವರ್ಪ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ವೀರಬಸಮ್ಮ ಅವರಿಬ್ಬರೇ ಉಮೇದುವಾರಿಕೆ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯನ್ನು ಚುನಾವಣಾ ಧಿಕಾರಿ ನಾಗರಾಜ ಘೋಷಿಸಿದರು. ಸಂದರ್ಭದಲ್ಲಿ ಮುಖಂಡರಾದ ಬಿ.ಹನುಮಂತಪ್ಪ. ಸಮಾಜದ ಅಧ್ಯಕ್ಷರಾದ ಹೊಸ್ಕೇರಿ ಬೀರ್ಪ. ಪಕ್ಕೀರ್ಪ. ಶಿವಕುಮಾರ್. ಮಾಲತೇಶ್ ಒಳಗೊಂಡಂತೆ ನೂತನ ಪದಾಧಿಕಾರಿಗಳು ಸಮಾಜದ ಮುಖಂಡರು ಇದ್ದರು.