ವಿಜಯಪುರ

ಎಮ್‌. ಸಿ ಮನಗೂಳಿ ವತಿಯಿಂದ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ

ಎಮ್‌. ಸಿ ಮನಗೂಳಿ ವತಿಯಿಂದ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ

ಆಲಮೇಲ 07 : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 2025-26ನೇ ಸಾಲಿನ ಮುಖ್ಯಮಂತ್ರಿಯವರ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿಯಲ್ಲಿ ಸಿಂದಗಿ ಮತಕ್ಷೇತ್ರದ ಬ್ಯಾಡಗಿಹಾಳ ಗ್ರಾಮದಲ್ಲಿ ಹನುಮಾನ್ ದೇವಸ್ಥಾನ ಹತ್ತಿರ ಸಮುದಾಯ ಭವನ ನಿರ್ಮಾಣಕ್ಕಾಗಿ ಮಂಜೂರಾದ 25 ಲಕ್ಷ ರೂ ಕಾಮಗಾರಿಗೆ ಭೂಮಿ ಪೂಜೆ ಹಾಗೂ ಎಮ್‌. ಸಿ ಮನಗೂಳಿ ಪ್ರತಿಷ್ಠಾನ ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಥಾಪಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ ಹಾಗೂ 2024-25 ನೇ ಸಾಲಿನ ಪಿ. ಎಮ್ ಯೋಜನೆಯಡಿಯಲ್ಲಿ ಸಿಂದಗಿ ಮತಕ್ಷೇತ್ರದ ಆಲಮೇಲ ತಾಲೂಕಿನ ದೇವಣಗಾಂವ ಗ್ರಾಮದ ಸರ್ಕಾರಿ ಸರ್ಕಾರಿ ಹೆಣ್ಣುಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 17 ಲಕ್ಷ ರೂ ಮೊತ್ತದಲ್ಲಿ ಮಂಜೂರಾದ ಗ್ರಂಥಾಲಯ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಹಾಗೂ ಎಮ್ ಸಿ ಮನಗೂಳಿ ಪ್ರತಿಷ್ಠಾನ ವತಿಯಿಂದ ಶಾಲೆಯಲ್ಲಿ ಸ್ಥಾಪಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಕಾರ್ಯಕ್ರಮ ಉದ್ಘಾಟಿಸಿ ಶಾಸಕರಾದ ಅಶೋಕ ಮನಗೂಳಿ ಯವರು ಮಾತನಾಡಿದರು. 

ಇದೆ ಸಂದರ್ಭದಲ್ಲಿ ಗ್ಯಾರಂಟಿ ಸಮಿತಿ ಅಧ್ಯಕ್ಷರು, ಸದಸ್ಯರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಹಿರಿಯ ಮುಖಂಡರು, ನಾಯಕರುಗಳು, ಕಾರ್ಯಕರ್ತರು, ಸೇರಿದಂತೆ, ಯುವಕ ಮಿತ್ರರು, ಸ್ಥಳೀಯರು ಉಪಸ್ಥಿತರಿದ್ದರು.ಇದೆ ಸಂದರ್ಭದಲ್ಲಿ ಮುಖ್ಯ ಗುರುಗಳಾದ ಬಸವರಾಜ ಶಿಂಪಿ, ಎಸ್ ಡಿ ಎಮ್ ಸಿ ಅಧ್ಯಕ್ಷರಾದ ರಮೇಶ ನಾಗಠಾಣ, ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಅಶೋಕ ಕೊಳಾರಿ, ಸದಸ್ಯರಾದ ಮಾಣಿಕ ಕಲಬಾ, ಆಲಮೇಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಾದಿಕ್ ಸುಂಬಡ, ಮುಖಂಡರಾದ ಅರವಿಂದ ಹಂಗರಗಿ, ಪರಶುರಾಮ ಕಾಂಬಳೆ, ಮಹಾದೇವಪ್ಪಗೌಡ ಪಾಟೀಲ, ದವಲಪ್ಪ ಸೊನ್ನ, ಮಲ್ಲು ಬ್ಯಾಡಗಿಹಾಳ, ಚಂದ್ರಶೇಖರ ಬೋರಗಿ, ವಿಠೋಬ ಕಲಬಾ, ಬಂದು ಅವಟಗಿ, ನಜಿರ ನೆಲ್ಲಗಿ, ಅಮರೇಶ ಚುಟಚುಟಿ, ಬಮ್ಮನಳ್ಳಿ ಬಸವರಾಜ ಪಾಟೀಲ, ಸಾಯಬಣ್ಣ ಸೊನ್ನ, ನಿಂಗಪ್ಪ ಅಳ್ಳಗಿ ಸೇರಿದಂತೆ ಗ್ರಾಮಸ್ಥರು, ಸ್ಥಳೀಯರು ಉಪಸ್ಥಿತರಿದ್ದರು. 


ಸುದ್ದಿ ಓದಿ