ಹೂವಿನಹಡಗಲಿ : ಲೋಕಾಯುಕ್ತ ಬಲೆಗೆ ಎಫ್ ಡಿಎ
ಲೋಕದರ್ಶನ ವರದಿ
ಹೂವಿನಹಡಗಲಿ 15: ಮಿನಿವಿಧಾನ ಸೌಧದ ತಹಶೀಲ್ದಾರ ಕಚೇರಿಯ ಪ್ರಥಮ ದರ್ಜೆ ಸಹಾಯಕರೊಬ್ಬರು ಪಹಣಿ ತಿದ್ದುಪಡಿಗಾಗಿ ಲಂಚ ಪಡೆಯುತ್ತಿರುವಾಗ ಮಂಗಳವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ತಾಲೂಕು ಕಚೇರಿಯ ಡಿಸಿಬಿ ವಿಭಾಗದ ಎಫ್ ಡಿಎ ವೆಂಕಟಸ್ವಾಮಿ ಬಂಧಿತ,ಹಿರೇಕೊಳಚಿ ಗ್ರಾಮದ ನಿವೃತ್ತ ಶಿಕ್ಷಕ ಲಕ್ಕಪ್ಪ ಅಂಗಡಿ ವಡ್ಡರ ಅವರಿಂದ ಲಂಚ ಪಡೆಯುವಾಗ ಲೋಕಾಯುಕ್ತರಿಗೆ ಸಿಕ್ಕಿ ಬಿದ್ದಿದ್ದಾರೆ. ಹಿರೇಕೊಳಚಿ ಗ್ರಾಮದ ವಡ್ಡರ ಚೌಡಮ್ಮ ಎಂಬುವವರಿಗೆ ಸೇರಿದ ಜಮೀನಿನ ಪಹಣಿ ತಿದ್ದುಪಡಿಗೆ ನ್ಯಾಯಾಲಯ ಆದೇಶಿಸಿತ್ತು.ಪಹಣಿ ತಿದ್ದುಪಡಿಗೆ ಸತಾಹಿಸಿದ್ದ ವೆಂಕಟಸ್ವಾಮಿ 70 ಸಾವಿರ ಲಂಚ ಕೇಳಿದ್ದ,ಲಕ್ಕಪ್ಪ ವಡ್ಡರ್ ಅವರಿಂದ ಪಟ್ಟಣದ ಬಸ್ ನಿಲ್ದಾಣ ಹತ್ತಿರ ಶ್ರೀದೇವಿ ಹೋಟೆಲ್ನಲ್ಲಿ ಗುಮಾಸ್ತ 65 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಇನ್ಸ್ಪೆಕ್ಟರ್ಗಳಾದ ಸಂಗಮೇಶ, ಸುರೇಶ ಕುಮಾರ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ನಡೆಸಿದರು.