ಲಾಕ್‌ಡೌನ್ ಎಫೆಕ್ಟ್: ಚೆಕ್‌ಪೋಸ್ಟ್‌ನಲ್ಲೇ ಹಸೆಮಣೆ ಏರಿದ ಜೋಡಿ
ಚಾಮರಾಜನಗರ, ಮೇ 22,ಲಾಕ್ ಡೌನ್ ಹಿನ್ನೆಲೆಯಲ್ಲಿ ಉಭಯ ರಾಜ್ಯಗಳ ಜೋಡಿಯೊಂದು ಗಡಿ ಭಾಗದ ಚೆಕ್ ಪೋಸ್ಟ್ ನಲ್ಲಿಯೇ ವಿವಾಹ ಬಂಧನಕ್ಕೆ ಒಳಗಾದ ಅಪರೂಪದ ಘಟನೆಯೊಂದು ಕರ್ನಾಟಕ - ತಮಿಳುನಾಡು ಗಡಿ ಪುಣಜನೂರಿನಲ್ಲಿ ನಡೆದಿದೆ.ಕೊಡಗು ಜಿಲ್ಲೆಯ ಗೋಣಿಕೊಪ್ಪದ ಹೊಂಬಾಳಯ್ಯ, ತ್ರಿವೇಣಿ ದಂಪತಿ ಪುತ್ರಿ ಯಶಸ್ಮಿತ ಹಾಗೂ ತಮಿಳುನಾಡಿನ ಮೆಟ್ಟುಪಾಳ್ಯಂ ನಿವಾಸಿ ಶಕ್ತಿವೇಲು-ಲತಾ ದಂಪತಿ ಪುತ್ರ ಸತೀಶ್ ಕುಮಾರ್ ಗಡಿ ದಾಟದೆ ಮದುವೆ ಮಾಡಿಕೊಂಡಿದ್ದಾರೆ.
ಕೊರೊನಾ ಲಾಕ್‍ಡೌನ್ 4.0 ನಲ್ಲಿ ಅಂತರ್ ರಾಜ್ಯಗಳ ಪ್ರವೇಶಕ್ಕೆ ನಿರ್ಬಂಧ ಇರುವುದರಿಂದ ಗಡಿಯಲ್ಲಿರುವ ಗಣೇಶ ಗುಡಿಯಲ್ಲಿ ವರ ತಮಿಳುನಾಡು ಗಡಿದಾಟದೆ, ವಧು ಕರ್ನಾಟಕ ಗಡಿ ದಾಟದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.ಅಂತರ್ ರಾಜ್ಯ ಪ್ರವೇಶ ಅನುಮತಿ ನಿರಾಕರಣೆ ಹಿನ್ನೆಲೆಯಲ್ಲಿ ಗಡಿಗೆ ಬಂದ ಜೋಡಿ ಮತ್ತು ಪೋಷಕರು ಗಡಿನಲ್ಲೇ ವಿವಾಹ ನಡೆಸಿದ್ದಾರೆ.
ಬಳಿಕ ತಮ್ಮ ತಮ್ಮ ತವರಿಗೆ ತೆರಳಿದ್ದಾರೆ. ಈ ಮದುವೆಗೆ ಚೆಕ್ ಪೋಸ್ಟ್ ನ ಕರ್ತವ್ಯ ನಿರತ ಸಿಬ್ಬಂದಿ ಸಾಕ್ಷಿಯಾದರು.ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ ನಿಗದಿ ಪಡಿಸಿದ ದಿನಾಂಕ ದಂದು ಸಾಂಸಾರಿಕ ಜೀವನಕ್ಕೆ ಈ ಇಬ್ಬರು ಅಂತರ್ ರಾಜ್ಯ ಜೋಡಿಗಳು ಕಾಲಿಟ್ಟು ಎಲ್ಲರ ಗಮನ ಸೆಳೆದಿದ್ದಾರೆ. ಲಾಕ್‌ಡೌನ್ ಹಿಂಪಡೆದ ನಂತರ ಮಧುಮಗಳು ವರನ ಮನೆಗೆ ಬರುವ ನಿರೀಕ್ಷೆ ಇದೆ.
ಒಬ್ಬರಿಗೆ ಒಂದೇ ಹುದ್ದೆ ಕಾಂಗ್ರೆಸ್ ಪಕ್ಷದ ನಿಯಮದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ : ಸಚಿವ ಸತೀಶ ಜಾರಕಿಹೊಳಿ
ಖಾತೆ ಮುಟ್ಟುಗೋಲಾದರೂ ಶಿವಂ ಸಂಸ್ಥೆಗೆ ಜನರಿಂದ ಇನ್ನೂ ದುಡ್ಡು ಠೇವಣಿ : ವಂಚನೆ ಜಾಲದಿಂದ ದೂರ ಇರಿ, ಜನರಿಗೆ ಸಿಐಡಿ ಡಿಐಜಿಪಿ ಗುಳೇದ್ ಮನವಿ
ಬಹುಕೋಟಿ ಹಣ ವಂಚನೆ : ಆದಿತ್ಯರಾಜ್ ಕೇಸು ಸಿಐಡಿಗೆ, ಸಿಇಓ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ಏರ್ಪೋರ್ಟ್ ಗಳಿಗೆ ಮಾಹಿತಿ ರವಾನೆ
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ 