ಕ್ಷೇತ್ರಕ್ಕೆ ಮಂತ್ರಿ ಗಿರಿ ಸಿಕ್ಕಿಲ್ಲ ಎಂಬ ಶಬ್ದ ಅಳಿಯಲಿ ಕೊಪ್ಪಳದ ಹ್ಯಾಟ್ರಿಕ್ ಶಾಸಕ ಹಿಟ್ನಾಳ ಗೆ ಸಚಿವ ಸ್ಥಾನ ಸಿಗಲಿ ಇತಿಹಾಸ ಸೃಷ್ಟಿಯಾಗಲಿ -ಪಟೇಲ್

ಕ್ಷೇತ್ರಕ್ಕೆ ಮಂತ್ರಿ ಗಿರಿ ಸಿಕ್ಕಿಲ್ಲ ಎಂಬ ಶಬ್ದ ಅಳಿಯಲಿ ಕೊಪ್ಪಳದ ಹ್ಯಾಟ್ರಿಕ್ ಶಾಸಕ ಹಿಟ್ನಾಳ ಗೆ ಸಚಿವ ಸ್ಥಾನ ಸಿಗಲಿ ಇತಿಹಾಸ ಸೃಷ್ಟಿಯಾಗಲಿ -ಪಟೇಲ್ Let the rumour that the constituency has not got a ministerial berth be dispelled, let Koppal's hat-

ಕೊಪ್ಪಳ 06: ಜಿಲ್ಲಾ ಕೇಂದ್ರವಾದ ಕೊಪ್ಪಳ  ವಿಧಾನಸಭಾ ಕ್ಷೇತ್ರದಿಂದ ಮೂರನೇ ಬಾರಿಗೆ ಗೆಲುವು ಸಾಧಿಸಿ ಹ್ಯಾಟ್ರಿಕ್ ಹೀರೋ ಎನಿಸಿಕೊಂಡಿರುವ ನಮ್ಮ ಕೊಪ್ಪಳದ ಶಾಸಕ ಕೆ ರಾಘವೇಂದ್ರ ಹಿಟ್ನಾಳ ರವರಿಗೆ ಈ ಬಾರಿ ಸಚಿವ ಸ್ಥಾನ ನೀಡಬೇಕೆಂದು ಕೊಪ್ಪಳ ನಗರಸಭೆಯ ಮಾಜಿ ಅಧ್ಯಕ್ಷ ಹಾಗೂ ಅಲ್ಪಸಂಖ್ಯಾತ ಸಮುದಾಯದ ಹಿರಿಯ ಮುಖಂಡ ಅಮ್ಜದ್ ಪಟೇಲ್ ಕಾಂಗ್ರೆಸ್ ಹೈಕಮಾಂಡ್ ಗೆ ಮನವಿ ಮಾಡಿಕೊಂಡು ಒತ್ತಾಯಪಡಿಸಿದ್ದಾರೆ,

ಈ ಕುರಿತು ಹೇಳಿಕೆ ನೀಡಿದ ಅವರು ಸಚಿವ ಸಂಪುಟ ರಚನೆ ಸಂದರ್ಭದಲ್ಲಿ ಕೊಪ್ಪಳ ಶಾಸಕ ಕೆ ರಾಘವೇಂದ್ರ ಹಿಟ್ನಾಳ ರವರಿಗೆ ಸಚಿವ ಸ್ಥಾನ ಸಿಗಲಿ, ಜಿಲ್ಲಾ ಕೇಂದ್ರ ಮತ್ತಷ್ಟು ಅಭಿವೃದ್ಧಿ ಕಾಣಲಿ ಕೊಪ್ಪಳ ವಿಧಾನ ಸಭಾ ಕ್ಷೇತ್ರಕ್ಕೆ ಮಂತ್ರಿ ಗಿರಿ ಸಿಕ್ಕಿಲ್ಲ ಎಂಬ ಶಬ್ದ ಅಳಿಯಲಿ, ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ  ಹೊಸ ಇತಿಹಾಸ ಸೃಷ್ಟಿಯಾಗಲೀ, ಐತಿಹಾಸಿಕ ಬದಲಾವಣೆ ನಮ್ಮ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಈ ದಿಸೆಯಲ್ಲಿ ಹೈಕಮಾಂಡ್ ಸೂಕ್ತ ನಿರ್ಣಯ ತೆಗೆದುಕೊಂಡು ಕೊಪ್ಪಳ ಕ್ಷೇತ್ರದಿಂದ ಮೂರನೇ ಬಾರಿಗೆ ಗೆಲುವು ಸಾಧಿಸಿ ಇತಿಹಾಸ ನಿರ್ಮಿಸಿದ ನಮ್ಮ ಶಾಸಕ ಕೆ ರಾಘವೇಂದ್ರ ಹಿಟ್ನಾಳ ರವರಿಗೆ ಸಚಿವ ಸ್ಥಾನ ನೀಡಿದರೆ ಸದರಿ ವಿಷಯದಲ್ಲಿಯೂ ಸಹ ಐತಿಹಾಸಿಕ ನಿರ್ಣಯ ಕಾಂಗ್ರೆಸ್ ಪಕ್ಷ ಮಾತ್ರ ತೆಗೆದುಕೊಳ್ಳಲು ಸಾಧ್ಯ.

ಹೆಗ್ಗಳಿಕೆ ಪಡೆದುಕೊಳ್ಳಲು ಕಾಂಗ್ರೆಸ್ ಹೈಕಮಾಂಡ್ ಗೆ ಇದೊಂದು ಸುವರ್ಣ ಅವಕಾಶ ಇದನ್ನು ಕಳೆದುಕೊಳ್ಳದೆ ಐತಿಹಾಸಿಕ ನಿರ್ಣಯ ತೆಗೆದುಕೊಳ್ಳಲಿ ಯಾವುದೇ ಕಾರಣಕ್ಕೂ ಐತಿಹಾಸಿಕ ನಿರ್ಣಯ ತೆಗೆದುಕೊಳ್ಳುವಲ್ಲಿ ವಂಚಿತಗೊಳ್ಳುವುದು ಬೇಡ ಜನಸಾಮಾನ್ಯರು ಕ್ಷೇತ್ರದ ಸಾಮಾನ್ಯ ಜನರು ಮತ್ತು ಪಕ್ಷದ ಸಕ್ರಿಯ ಕಾರ್ಯಕರ್ತರು ದೃಢವಾದ ವಿಶ್ವಾಸವನ್ನು ಕಾಂಗ್ರೆಸ್ ಹೈಕಮಾಂಡ್ ಮೇಲೆ ಇಟ್ಟಿದ್ದಾರೆ,

ಶಾಸಕ ಕೆ ರಾಘವೇಂದ್ರ ಹಿಟ್ನಾಳ ರವರು ಕುರುಬ ಸಮಾಜದ ಒಬ್ಬ ಉತ್ಸಾಹಿ ಯವ ನಾಯಕರಾಗಿದ್ದು ಎಲ್ಲಾ ಸಮಾಜದವರೊಂದಿಗೆ ಇವರು ಬೆರೆತುಕೊಂಡು ಅವರ ವಿಶ್ವಾಸ ಗಳಿಸುವಲ್ಲಿ ಯಶಸ್ವಿ ಯಾಗಿರುವ ಇವರು ಹೈದರಾಬಾದ್ ಕರ್ನಾಟಕ ಈಗಿನ ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಅತಿ ಹೆಚ್ಚು ಜನಸಂಖ್ಯೆವುಳ್ಳ ಕುರುಬ ಸಮಾಜದ ಏಕೈಕ ಅಭ್ಯರ್ಥಿಯಾಗಿದ್ದು ಸದರಿಯವರಿಗೆ ಸಚಿವ ಸ್ಥಾನ ನೀಡಿದರೆ ಇಡೀ ಅಹಿಂದ ಸಮುದಾಯಕ್ಕೆ ಮನ್ನಣೆ ನೀಡದಂತಾಗುತ್ತದೆ,

ಈ ದಿಶೆಯಲ್ಲಿ ನಮ್ಮ ಕಾಂಗ್ರೆಸ್ ಪಕ್ಷದ ವರಿಷ್ಠ ಮಂಡಳಿ ಅತ್ಯಂತ ಮುತುವರ್ಜಿ ಮತ್ತು ಕಾಳಜಿ ವಹಿಸಿ ಈ ಭಾಗದ ಬಹುದಿನದ ಬೇಡಿಕೆ ಈಡೇರಿಕೆಯಾಗುವಲ್ಲಿ ಸೂಕ್ತವಾದಂತಹ ಅಗತ್ಯ ಕ್ರಮ ಕೈಗೊಂಡು ಸದರಿಯವರಿಗೆ ಸಚಿವ ಸ್ಥಾನ ನೀಡಬೇಕೆಂದು ಅಲ್ಪಸಂಖ್ಯಾತ ಸಮುದಾಯದ ಹಿರಿಯ ಮುಖಂಡರಾಗಿರುವ ಕೊಪ್ಪಳ ನಗರಸಭೆಯ ಮಾಜಿ ಅಧ್ಯಕ್ಷ ಅಮ್ಜದ್ ಪಟೇಲ್ ಅತ್ಯಂತ ಕಳಕಳಿಯ ಮನವಿಯನ್ನು ಕಾಂಗ್ರೆಸ್ ವರಿಷ್ಠ ಮಂಡಳಿಯವರಲ್ಲಿ ಮಾಡಿಕೊಂಡು ಪ್ರಕಟಣೆಯ ಮೂಲಕ ಒತ್ತಾಯಪಡಿಸಿದ್ದಾರೆ,