2023ರ ಚುನಾವಣೆಯಲ್ಲಿ ಧಮ್,ತಾಕತ್ತುನ್ನು ತೋರಿಸಲಿ: ಶಾಸಕ ಪಿಟಿ.ಪಿ
ಲೋಕದರ್ಶನ ವರದಿ
ಹೂವಿನಹಡಗಲಿ 05 : ಮುಂಬರುವ 2023ರ ವಿಧಾನ ಸಭೆ ಚುನಾವಣೆಯಲ್ಲಿ ಮಾಜಿ ಶಾಸಕರು ಧಮ್.ತಾಕತ್ತುನ್ನು ತೋರಿಸಲಿ ಎಂದು ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಸವಾಲು ಹಾಕಿದರು.
ಪಟ್ಟಣದ ತಮ್ಮ ನಿವಾಸದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ ಮಾಜಿ ಶಾಸಕ ಚಂದ್ರನಾಯ್ಕ ಇವರ ಆರೋಪಗಳಿಗೆ ಸ್ಪಷ್ಟಪಡಿಸಿ ಯಾವ ಸರ್ಕಾರ ಅವಧಿಯಲ್ಲಿ ಎಷ್ಟು ಅನುದಾನ ಬಂದಿರುವುದು ದಾಖಲೆ ಇವೆ.ಲಾಟರಿ ಶಾಸಕ ಎಂದು ಆರೋಪಿಸಿರುವ ಮಾಜಿ ಶಾಸಕರಿಗೆ ಚುನಾವಣೆ ಆಯೋಗದ ಕಾನೂನು ಗೊತ್ತಿಲ್ಲ ಇಂತ ಹೇಳಿಕೆಗೆ ಮತದಾರರಿಗೆ ಅವಮಾನ ಮಾಡಿದ್ದಾರೆ ಎಂದು ಟೀಕಿಸಿದರು.
2013ರಲ್ಲಿ ಅತ್ಯಧಿಕ 42ಸಾವಿರ, ಎರಡನೇ ಬಾರಿ 9ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಕ್ಷೇತ್ರದ ಜನ ಗೆಲ್ಲಿಸಿದ್ದಾರೆ.ಎರಡು ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ 3ನೇ ಸ್ಥಾನ ಪಡೆದುಕೊಂಡಿದ್ದರು.ಮಾಜಿ ಶಾಸಕರ ಬಹಿರಂಗ ಸವಾಲಿಗೆ ನಾನು ಸಿದ್ದನಿದ್ದೇನೆ.ವೇದಿಕೆಗೆ ಬಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಉತ್ತರ ಕೊಡುತ್ತಾರೆ ಎಂದರು.
ಕಾಮಗಾರಿಗಳಲ್ಲಿ ಭ್ರಷ್ಟಾಚಾರ,ಅವ್ಯವಹಾರ,ಬೋಗಸ್ ಬಿಲ್ ಆಗಿದ್ದರೇ ಅವರದೇ ಡಬಲ್ ಇಂಜನ್ ಸರ್ಕಾರ ಇದೆ.ಯಾವ ಕಾಮಗಾರಿ ಬೇಕಾದರೂ ದಾಖಲೆಗಳನ್ನು ಪಡೆದು ತನಿಖೆ ಮಾಡಿಸಲಿ ಇದಕ್ಕೆ ನಮ್ಮ ಸಹಕಾರವಿದೆ.ಚುನಾವಣೆ ಸಮೀಪ ಬಂದಾಗ ಇಲ್ಲ,ಸಲ್ಲದ ಹೇಳಿಕೆ ನೀಡಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ ಎಂದು ದೂರಿದ ಅವರು ಕಳೆದ 10ವರ್ಷದಲ್ಲಿ ಸಾಕಷ್ಟು ಅಭಿವೃದ್ದಿಯಾಗಿವೆ ಜತೆಗೆ ಹೂವಿನಹಡಗಲಿ ಕೋಮು,ಗಲಾಭೆ,ಗೂಂಡಾಗಿರಿಗೆ ಅವಕಾಶ ಕೊಡದೇ ಶಾಂತಿ,ನೆಮ್ಮದಿ ಇದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶಿವಯೋಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಪರಮೇಶ್ವರಪ್ಪ,ಐಗೋಳ ಚಿದಾನಂದ, ಬಿ.ಹನುಮಂತಪ್ಪ,ಅಟವಾಳಗಿ ಕೊಟ್ರೇಶ, ಪುರಸಭೆ ಅಧ್ಯಕ್ಷ ಜ್ಯೋತಿಮಲ್ಲಣ್ಣ, ಉಪಾಧ್ಯಕ್ಷ ಎಸ್.ತಿಮ್ಮಣ್ಣ, ಬಿ.ಎಲ್.ಶ್ರೀಧರ, ಎಲ್.ಜಿ.ಹೊನ್ನಪ್ಪ ಇದ್ದರು.