ವಿಜಯಪುರ

ವಿಜಯಪುರದಲ್ಲಿ ಗಾಣದೇವತೆ ಉತ್ಸವಕ್ಕೆ ಚಾಲನೆ: ನ್ಯಾಯವಾದಿ ಶ್ರಿಶೈಲ ಸಜ್ಜನ

ವಿಜಯಪುರದಲ್ಲಿ ಗಾಣದೇವತೆ ಉತ್ಸವಕ್ಕೆ ಚಾಲನೆ: ನ್ಯಾಯವಾದಿ ಶ್ರಿಶೈಲ ಸಜ್ಜನ

ವಿಜಯಪುರ   29: ಗಾಣದೇವತಾ ಉತ್ಸವ ಸಮಿತಿ ಹಾಗೂ ವಿಜಯಪುರ ಜಿಲ್ಲಾ ಗಾಣಿಗ ಸಮಾಜದ ಸಂಯುಕ್ತ ಆಶ್ರಯದಲ್ಲಿ ನಗರದ ವನಶ್ರೀ ಮಠದ ಆವರಣದಲ್ಲಿ ಹಮ್ಮಿಕೊಡಿದ್ದ ಗಾಣದೇವತಾ ಉತ್ಸವದಲ್ಲಿ ನಾಡಿಗೆ ಮಳೆ ಬೆಳೆ ಬರಲಿ, ವಿದೇಶಗಳಲ್ಲಿರುವವರು ಸುರಕ್ಷಿತವಾಗಿ ತಾಯಿ ನಾಡಿಗೆ ಮರಳಲಿ ಎಂದು, ಸಮಾಜ ಬಂಧುಗಳಿಗೆ ಒಳಿತನ್ನುಂಟು ಮಾಡಲಿಯೆಂದು, ಅಥಣಿ ಶಾಸಕರಾದ ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ಹಾಗೂ ಧಾರವಾಡ ಕೃಷಿ ವಿ ವಿ ಗೆ ಡಾ ಅಶೋಕ ಸಜ್ಜನ ಅವರಿಗೆ ಉಪಕುಲಪತಿ ಹುದ್ದೆ ದೊರೆಯಲಿ ಎಂದು ಗಾಣದೇವತೆಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಲಾಯಿತು. 

ಈ ಸಂದರ್ಭದಲ್ಲಿ ಕಾರ್ಯಕ್ರಮದ ಸಂಚಾಲಕರಾದ ನ್ಯಾಯವಾದಿ ಶಿಶೈಲ ಸಜ್ಜನ ಅವರು ಮಾತನಾಡಿ ಗ್ರಾಮದೇವತೆ ಗ್ರಾಮಕ್ಕೆ ಒಳಿತನ್ನುಂಟು ಮಾಡಿದರೆ ಗಾಣದೇವತೆ ತನ್ನ ಒಡಲೊಳಗಿನ ಎಣ್ಣೆಯನ್ನು ಧಾರೆಯೆರೆದು ಬೆಳಕು ನೀಡಿ ಲೋಕಕ್ಕೆ ಒಳಿತನ್ನುಂಟು ಮಾಡುತ್ತಾಳೆ ಎಂದು ಹೇಳಿದರು. ಗಾಣದೇವತೆಗೆ ಪುರಾತನ ಕಾಲದಿಂದ ಪೂಜಿಸುತ್ತಾ ಬರಲಾಗುತ್ತಿದೆ. ಕಾಲ ಬದಲಾದಂತೆ ಧಾರ್ಮಿಕ ಆಚರಣೆಗಳಿಂದ ಜನ ದೂರ ಸರಿಯುತ್ತಿದ್ದಾರೆ ನಮ್ಮ ಜನಪದ ಆಚರಣೆ,ಧಾರ್ಮಿಕ ಪರಂಪರೆಯಾದ ಗಾಣದೇವತೆ ಉತ್ಸವ ಮುಂದುವರೆಸಿಕೊಂಡು ಹೋಗುವುದು ಇಂದು ಅತ್ಯಂತ ಅವಶ್ಯಕವಾಗಿದೆ ಎಂದರು. 


ಸುದ್ದಿ ಓದಿ