ರಸ್ತೆ ಕಾಮಗಾರಿ ಮೊದಲು ಭೂಸರ್ವೆಗೆ ಒತ್ತಾಯ
Land survey required before road works
ಲೋಕದರ್ಶನ ವರದಿ
ಕಂಪ್ಲಿ 29 : ತಾಲೂಕಿನ ಹೊನ್ನಹಳ್ಳಿ ಗ್ರಾಮದ ಸರ್ವೇ ನಂ.36, 38 ಹಾಗೂ 39ರ ಭೂಮಿಗಳಿಗೆ ಹೊಂದಿಕೊಂಡಿರುವ ರಸ್ತೆ ದುರಸ್ತಿ ಕಾಮಗಾರಿ ಕೈಗೊಳ್ಳುವ ಮೊದಲು ಅಧಿಕೃತ ಸರ್ವೆ ನಡೆಸಿ ರೈತರ ಪಟ್ಟ ಭೂಮಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳುವ ಜೊತೆಗೆ ಜಮೀನು ಹದ್ದುಬಸ್ತು ಮಾಡುವವರೆಗೂ ಮನೆಗಳ ತೆರವು ಮಾಡಬಾರದೆಂದು ಆಗ್ರಹಿಸಿ, ಪಿಂಜಾರ್ ನದಾಫ್ ಸಂಘದ ನೇತೃತ್ವದಲ್ಲಿ ಹೊನ್ನಳ್ಳಿ ಗ್ರಾಮಸ್ಥರು ಪಟ್ಟಣದ ತಹಶೀಲ್ದಾರ್ ಕಛೇರಿಯಲ್ಲಿ ತಹಶೀಲ್ದಾರ್ ಜೂಗಲ್ ಮಂಜುನಾಯಕಗೆ ಮನವಿ ಪತ್ರ ಸೋಮವಾರ ಸಲ್ಲಿಸಿದರು. ನಂತರ ಪಿಂಜಾರ್ ನದಾಫ್ ಸಂಘದ ಅಧ್ಯಕ್ಷ ಓ.ಎಸ್.ದಾದಾಪೀರ್ ಮಾತನಾಡಿ, ಹೊನ್ನಹಳ್ಳಿ ಗ್ರಾಮದ ಸರ್ವೇ ನಂ. 36, 38 ಹಾಗೂ 39 ರಲ್ಲಿರುವ ನಮ್ಮ ಪಟ್ಟ ಭೂಮಿಗಳು ಗ್ರಾಮದ ರಸ್ತೆಗೆ ಹೊಂದಿಕೊಂಡಿವೆ.
ಪ್ರಸ್ತುತ ಸರ್ಕಾರ ರಸ್ತೆ ದುರಸ್ತಿ ಹಾಗೂ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಂಡಿರುವುದನ್ನು ನಾವು ಸ್ವಾಗತಿಸುತ್ತೇವೆ ಮತ್ತು ಕಾಮಗಾರಿಗೆ ನಮ್ಮ ಸಂಪೂರ್ಣ ಸಹಕಾರವಿದೆ. ಆದರೆ, ರಸ್ತೆ ಅಭಿವೃದ್ಧಿ ಕಾಮಗಾರಿಯ ನೆವದಲ್ಲಿ ಗುತ್ತಿಗೆದಾರರು ರಸ್ತೆ ವ್ಯಾಪ್ತಿಯನ್ನು ಮೀರಿ ನಮ್ಮ ಪಟ್ಟ ಭೂಮಿಯನ್ನು ಬಳಸಲು ಮುಂದಾಗಿರುವುದರಿಂದ ನಮಗೆ ಅನ್ಯಾಯವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ಜೀವನೋಪಾಯವು ಈ ಅಲ್ಪ ಪ್ರಮಾಣದ ಕೃಷಿ ಭೂಮಿಯನ್ನೇ ಅವಲಂಬಿಸಿರುವುದರಿಂದ, ಯಾವುದೇ ಕಾನೂನುಬದ್ಧ ಭೂಸ್ವಾಧೀನ ಪ್ರಕ್ರಿಯೆ ಅಥವಾ ಅಧಿಕೃತ ಸರ್ವೆ ನಡೆಸದೆ ನಮ್ಮ ಭೂಮಿಯನ್ನು ರಸ್ತೆಗೆ ಬಳಸುವುದು ನಮ್ಮ ಹಕ್ಕುಗಳಿಗೆ ಧಕ್ಕೆ ಉಂಟುಮಾಡುತ್ತದೆ.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 