ಕ್ರಾಂತಿ ಮಹಿಳಾ ಮಂಡಳ; ಉಮಾ ಸಂಗೀತ ಪ್ರತಿಷ್ಠಾನದಿಂದ ವಿಶ್ವ ಪರಿಸರ ದಿನಾಚರಣೆ
Kranti Mahila Mandal; Uma Sangeet Foundation celebrates World Environment Day
ಲೋಕದರ್ಶನ ವರದಿ
ಬೆಳಗಾವಿ 08: ತಾಲೂಕಿನ ಬಸವನ ಕುಡಚಿಯಲ್ಲಿರುವ ಚಿನ್ನಮ್ಮ ಬಸವಂತಯ್ಯ ಹಿರೇಮಠ್ ವೃದ್ಧಾಶ್ರಮದ ನಾಗನೂರು ಶ್ರೀ ಬಸವೇಶ್ವರ ಟ್ರಸ್ಟ್ ಸಹಯೋಗದೊಂದಿಗೆ ಕ್ರಾಂತಿ ಮಹಿಳಾ ಮಂಡಳ ಮತ್ತು ಉಮಾ ಸಂಗೀತ ಪ್ರತಿಷ್ಠಾನದಿಂದ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಈ ವೇಳೆ ವೃದ್ಧಾಶ್ರಮದ ಮೇಲ್ವಿಚಾರಕರಾದ ಎಂ.ಎಸ್ ಚೌಗಲಾ ಅವರು ಸಸಿಗೆ ನೀರು ಹಾಕುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಎರಡು ಸಂಸ್ಥೆಗಳ ಸಾಮಾಜಿಕ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ತಾವೆಲ್ಲರೂ ವೃದ್ಧಾಶ್ರಮಕ್ಕೆ ಭೇಟಿ ನೀಡಿರುವುದು ಹಿರಿಯರಿಗೂ ಅತೀವ ಸಂತೋಷವಾಗಿದೆ. ವೃದ್ಧಾಶ್ರಮಕ್ಕೆ ಆಗಮಿಸಿರುವುದು ಆಶಾದಾಯಕವಾಗಿದೆ. ನಾಡಿನ ಸಂಘ-ಸಂಸ್ಥೆಗಳು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದಾಗ ಮಾತ್ರ ಆಶ್ರಮಗಳಿಗೂ ಆಶ್ರಯವಾಗಲಿದೆ ಎಂದರು.
ವೃದ್ಧಾಶ್ರಮಕ್ಕೆ ಭೇಟಿ ನೀಡಿ ಹಿರಿಯರ ಆರೋಗ್ಯವನ್ನು ವಿಚಾರಿಸಿ, ಹಾಸಿಗೆ ಮತ್ತು ದಿನಸಿ ಸಾಮಗ್ರಿಗಳನ್ನು , ಹೊಸ ಸೀರೆಗಳನ್ನು ವಿತರಿಸಲಾಯಿತು. ಕೈಲಾದಷ್ಟು ಸಹಕಾರ ನೀಡುವುದು ಅತ್ಯಂತ ಶ್ರೇಷ್ಠ ಹಾಗೂ ಪುಣ್ಯದ ಕೆಲಸವಾಗಿದೆ ಎಂದು ಎರಡು ಸಂಸ್ಥೆಗಳಿಗೆ ಹಿರಿಯರು ಹಾರೈಸಿದರು.
ಆಕಾಶವಾಣಿ ದೂರದರ್ಶನ ಕಲಾವಿದರು ಮತ್ತು ನಮ್ಮೂರ ಬಾನುಲಿ ಕೇಂದ್ರದ ಸಂದರ್ಶಕರು ಹಾಗೂ ಸಂಯೋಜಕರು ಮಹಿಳಾ ಕಲ್ಯಾಣ ಸಂಸ್ಥೆ ಬೆಳಗಾವಿಯ ಡಾ. ಶ್ರೀ ರಂಗ ಜೋಷಿ ಸರ್ ಅವರು ಪ್ರಕೃತಿ ಮಾತೆಯ ಮೇಲೆ ಒಂದು ಸುಂದರ ಗೀತೆಯನ್ನು ಹಾಡಿದರು.
ಈ ವೇಳೆ ಎಂ.ಎಸ್. ಚೌಗಲಾ ಮತ್ತು ಶ್ರೀರಂಗ ಜೋಶಿ ಸರ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷಮಂಗಲಾ ಮಠದವರು ಎಲ್ಲರನ್ನೂ ಸ್ವಾಗತಿಸಿದರು. ಕಾರ್ಯದರ್ಶಿ ಭಾರತಿ ರತ್ನಪ್ಗೊಳ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಮತಾ ಆಂಟಿನ, ಶೋಭಾ ಕಾಡನ್ನವರ್, ಮೈನಾ ಕುಲಕರ್ಣಿ ರತ್ನಗುಡಗನಟ್ಟಿ ಇವರು ಪ್ರಾರ್ಥಿಸಿದರು. ಸುಶೀಲ ಗುರವ, ನಮಿತಾ ಸೊಂಟಕ್ಕಿ , ಲೀಲಾ ಶೇರಿ, ಮಂದಾಕಿನಿ ನಿರ್ಲೇಕರ್ , ಸುಶೀಲಾ ಗುರವ್ ನಿರೂಪಿಸಿದರು. ನಮಿತಾ ಸೊಂಟಕ್ಕಿ ವಂದಿಸಿದರು.
ಒಬ್ಬರಿಗೆ ಒಂದೇ ಹುದ್ದೆ ಕಾಂಗ್ರೆಸ್ ಪಕ್ಷದ ನಿಯಮದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ : ಸಚಿವ ಸತೀಶ ಜಾರಕಿಹೊಳಿ
ಖಾತೆ ಮುಟ್ಟುಗೋಲಾದರೂ ಶಿವಂ ಸಂಸ್ಥೆಗೆ ಜನರಿಂದ ಇನ್ನೂ ದುಡ್ಡು ಠೇವಣಿ : ವಂಚನೆ ಜಾಲದಿಂದ ದೂರ ಇರಿ, ಜನರಿಗೆ ಸಿಐಡಿ ಡಿಐಜಿಪಿ ಗುಳೇದ್ ಮನವಿ
ಬಹುಕೋಟಿ ಹಣ ವಂಚನೆ : ಆದಿತ್ಯರಾಜ್ ಕೇಸು ಸಿಐಡಿಗೆ, ಸಿಇಓ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ಏರ್ಪೋರ್ಟ್ ಗಳಿಗೆ ಮಾಹಿತಿ ರವಾನೆ
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ 