ಕ್ರಾಂತಿ ಮಹಿಳಾ ಮಂಡಳಿ ಸದಸ್ಯರಿಂದ ವೃದ್ಧಾಶ್ರಮದಲ್ಲಿ ವನಮಹೋತ್ಸವ

ಕ್ರಾಂತಿ ಮಹಿಳಾ ಮಂಡಳಿ ಸದಸ್ಯರಿಂದ ವೃದ್ಧಾಶ್ರಮದಲ್ಲಿ ವನಮಹೋತ್ಸವ  Vanamahotsava celebrated at old age home by Kranti Mahila Mandali members

ಲೋಕದರ್ಶನ ವರದಿ 

ಬೆಳಗಾವಿ 08 : ಸಮಾಜ ಸೇವೆ ಮತ್ತು ಮಾನವೀಯ ಮೌಲ್ಯಗಳನ್ನು ಉತ್ತೇಜಿಸುವ ಉದ್ದೇಶದಿಂದ ಕ್ರಾಂತಿ ಮಹಿಳಾ ಮಂಡಳಿ ಹಾಗೂ ಉಮಾ ಸಂಗೀತ ಪ್ರತಿಷ್ಠಾನದ ಸದಸ್ಯರು ನಗರದ ದೇವರಾಜ್ ಅರಸ್ ಕಾಲೊನಿಯಲ್ಲಿರುವ ನಾಗನೂರು ಶಿವಬಸವೇಶ್ವರ ಟ್ರಸ್ಟ್‌ ವೃದ್ಧಾಶ್ರಮದಲ್ಲಿ ವನಮಹೋತ್ಸವ ಆಚರಣೆ ಮಾಡಿನಿವಾಸಿಗಳಿಗೆ ಆಹಾರ ಧಾನ್ಯಗಳನ್ನು ವಿತರಿಸಿದರು.  

ವನಮಹೋತ್ಸವ ನೆರವೆರಿಸಿ ಮಾತನಾಡಿದ ಕ್ರಾಂತಿ ಮಹಿಳಾ ಮಂಡಳಿಯ ಮುಖ್ಯಸ್ಥೆ ಮಂಗಳ ಮಠದಹಿರಿಯ ನಾಗರಿಕರಲ್ಲಿ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಿ ಗಿಡ  ನೆಡುವ ಅಭ್ಯಾಸವನ್ನು ಉತ್ತೇಜಿಸಿ, ಪ್ರಕೃತಿಯೊಂದಿಗೆ ಮಾನಸಿಕ ನೆಮ್ಮದಿ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಬೆಳೆಸುವ ಪ್ರಯತ್ನ ಮಾಡಲಾಗುತ್ತಿದೆ.  ಜೊತೆಗೆ ಹಿರಿಯ ನಾಗರಿಕರು ಸಮಾಜದೊಂದಿಗೆ ತೊಡಗಿಸಿಕೊಳ್ಳುವ ಅವಕಾಶ ದೊರೆಯುವುದರೊಂದಿಗೆ ಪರಿಸರ ಸಂರಕ್ಷಣೆಯಲ್ಲಿ ತಮ್ಮ ಕೊಡುಗೆಯನ್ನು ನೀಡಲು ಪ್ರೇರಣೆ  ಸಿಗಲಿದೆ ಎಂದರು  

ಕಾರ್ಯಕ್ರಮದ ಅಂಗವಾಗಿ ವೃದ್ಧಾಶ್ರಮದ ಹಿರಿಯ ನಾಗರಿಕರ ಯೋಗಕ್ಷೇಮಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿರುವ ಸಮಾಜಸೇವಕ ಎಂ.ಎಸ್‌. ಚೌಗಲಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಹಿರಿಯ ನಾಗರಿಕರ ಕಲ್ಯಾಣ ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ಅವರು ಸಲ್ಲಿಸುತ್ತಿರುವ ಸೇವೆಯನ್ನು ಸಂಘಟನೆಯ ಪದಾಧಿಕಾರಿಗಳು ಪ್ರಶಂಸಿಸಿದರು.  ಈ ಸಂದರ್ಭದಲ್ಲಿ , ಆಕಾಶವಾಣಿ ಕಲಾವಿದ ಡಾ. ಶ್ರೀರಂಗ ಜೋಶಿ, ಸಂಘಟನೆಯ ಸದಸ್ಯರು ಹಾಗೂ ವೃದ್ಧಾಶ್ರಮದ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.