ರೇಂಜರ್ಸ್‌ ಘಟಕ ಇವುಗಳ ಸಹಯೋಗದೊಂದಿಗೆ ವಿಶ್ವ ಪರಿಸರ ದಿನಾಚರಣೆ

ರೇಂಜರ್ಸ್‌ ಘಟಕ ಇವುಗಳ ಸಹಯೋಗದೊಂದಿಗೆ ವಿಶ್ವ ಪರಿಸರ ದಿನಾಚರಣೆ World Environment Day celebrated in collaboration with Rangers Unit

ಲೋಕದರ್ಶನ ವರದಿ 

          ಸವಣೂರ 08 : ಇಲ್ಲಿನ  ಲಲಿತಾದೇವಿ ಗುರುಸಿದ್ದಪ್ಪ ಸಿಂಧೂರ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ,ಸವಣೂರ, ಸರಕಾರಿ ಪ್ರಥಮ ದರ್ಜೆ ಕಾಲೇಜು,ಅರಣ್ಯ ಇಲಾಖೆ, ದುಂಡಶಿ.ಐಕ್ಯೂಎಸಿ,ಎನ್ ಎಸ್ ಎಸ್,ಭಾರತೀಯ ಯುಥ್ ರೆಡ್ ಕ್ರಾಸ್,ರೇಂಜರ್ಸ್‌ ಘಟಕ ಇವುಗಳ ಸಹಯೋಗದೊಂದಿಗೆ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. 

      ಹಿರಿಯ ದಿವಾಣಿ ನ್ಯಾಯಾಧೀಶರು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳು,ತಾಲ್ಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರಾದ  ಗೌರವಾನ್ವಿತ  ಸುನೀಲ ಎಸ್ ತಳವಾರ ಸಸಿಗಳನ್ನು ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 

       ಪ್ರಕೃತಿ ಜೀವನದ ಆಧಾರ,ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ.ವಿದ್ಯಾರ್ಥಿಗಳು ತಮ್ಮ ಮನೆ ಹಾಗೂ ಜಮೀನುಗಳಲ್ಲಿ ಗಿಡಗಳನ್ನು ಬೆಳೆಸುವ ಪ್ರಯತ್ನ ಮಾಡಿರಿ.ಆರೋಗ್ಯಕ್ಕೆ ಉತ್ತಮ ಪರಿಸರ ಬೇಕಾಗುತ್ತದೆ. ಪರಿಸರ ಬೆಳೆಸಲು ಎಲ್ಲರೂ ಬದ್ಧರಾಗಬೇಕು ಎಂದರು. ದಿವಾಣಿ ನ್ಯಾಯಾಧೀಶರು ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳು, ತಾಲ್ಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ಶ್ರೀನಿವಾಸ ಎಸ್‌.ಎನ್ ಕಾರ್ಯಕ್ರಮದ ಕುರಿತು ಪರಿಸರ ಜಾಗೃತಿ ಹಾಗೂ ಪರಿಸರ ಬೆಳೆಸುವ ಬಗ್ಗೆ ಮಾತನಾಡಿದರು. 

      ಈ ಸಂದರ್ಭದಲ್ಲಿ ದುಂಡಶಿ ವಲಯ ಅರಣ್ಯಾಧಿಕಾರಿ ಮಲ್ಲೇಶಪ್ಪ.ಕೆ, ಸವಣೂರ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ವಿ.ಬಿ.ತುರಕಾಣಿ,ಸಹಾಯಕ ಸಹಕಾರಿ ಅಭಿಯೋಜಕರಾದ ಎಫ್‌.ಎಮ್‌.ಹಾದಿಮನಿ,ನ್ಯಾಯವಾದಿಗಳಾದ ಎಸ್‌.ಬಿ.ಬಿಷ್ಠನಗೌಡ್ರ, ಪ್ರಾಂಶುಪಾಲರಾದ ಪ್ರೋ ಪ್ರವೀಣ ಮಹಾಬಲೇಶ್ವರ ಆನಂದಕರ,ಡಾ:ಎಂ ಎಚ್‌. ಹೆಬ್ಬಾಳ,ಅರಣ್ಯ ಇಲಾಖೆಯ ಸಿಬ್ಬಂದಿಗಳು ಮತ್ತು ಕಾಲೇಜಿನ ಬೋಧಕ, ಭೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.