ಸಮರ್ಪಕ ಬಸ್ ಸೌಲಭ್ಯಕ್ಕೆ ಆಗ್ರಹಿಸಿ ಕೊಂಡೊಸಕೊಪ್ಪ ವಿದ್ಯಾರ್ಥಿಗಳ ಪ್ರತಿಭಟನೆ
Kondosakoppa students protest demanding adequate bus facilities
ಬೆಳಗಾವಿ 16: ತಾಲೂಕಿನ ಕೊಂಡೊಸಕೊಪ್ಪ ಗ್ರಾಮಕ್ಕೆ ಸಮರ್ಪಕ ಬಸ್ ಸೌಲಭ್ಯ ಒದಗಿಸಬೇಕೆಂದು ಒತ್ತಾಯಿಸಿ ವಿದ್ಯಾರ್ಥಿಗಳು ಶಾಲೆಗೆ ಹೋಗುವುದನ್ನು ಬಿಟ್ಟು ನೇರವಾಗಿ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ತೆರಳಿ ಪ್ರತಿಭಟನೆ ನಡೆಸಿದರು.
ಸುವರ್ಣಸೌಧ ನಿರ್ಮಾಣ, ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಈ ಗ್ರಾಮದ ರೈತರು ತಮ್ಮ ಕೃಷಿ ಜಮೀನನ್ನೇ ನೀಡಿದ್ದಾರೆ. ಆದರೇ, ಕೊಂಡೊಸಕೊಪ್ಪ ಗ್ರಾಮಕ್ಕೆ ಅನುಕೂಲಕರ ಬಸ್ ಸೌಲಭ್ಯವಿಲ್ಲದೆ ವಿದ್ಯಾರ್ಥಿಗಳು ಪರದಾಡುವ ಪರಿಸ್ಥಿತಿ ಪ್ರತಿನಿತ್ಯ ಸಾಮಾನ್ಯವಾಗಿದೆ. ವಿದ್ಯಾರ್ಥಿಗಳಿಗೆ ಬಸ್ಸಿನ ಸೌಕರ್ಯವಿಲ್ಲದೇ, ಶಾಲಾ ಕಾಲೇಜುಗಳಿಗೆ ಸಮಯಕ್ಕೆ ಸರಿಯಾಗಿ ತೆರಳಿ ಶಿಕ್ಷಣ ಪಡೆಯಲು ಅನಾನುಕೂಲವಾಗುತ್ತಿದೆ. ಇದು ಅವರ ಶೈಕ್ಷಣಕ ಭವಿಷ್ಯಕ್ಕೆ ಅಡ್ಡಿ ಉಂಟು ಮಾಡುತ್ತಿದೆ. ಆದ್ದರಿಂದ ಇಂದು ಗ್ರಾಮದಲ್ಲಿ ಹೆದ್ದಾರಿ ತಡೆದು ಪ್ರತಿಭಟಿಸಿದ ವಿದ್ಯಾರ್ಥಿಗಳು ಶಾಲೆ ಬಿಟ್ಟು ನೇರವಾಗಿ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ತೆರಳಿ ಬಸ್ಸು ಬೇಕೆಂದು ಪ್ರತಿಭಟನೆಯನ್ನು ನಡೆಸಿದರು.
ಗ್ರಾಮದ ಹಲವಾರು ರೈತರು ಇಂದು ಕೊಂಡೂಸಕೊಪ್ಪ ಬಳಿ ಹೆದ್ದಾರಿ ತಡೆದು ವಿದ್ಯಾರ್ಥಿಗಳು ಬಸ್ಸಿಗಾಗಿ ಪ್ರತಿಭಟನೆ ನಡೆಸಿದರು. ಪರಿಣಾಮ ಗಂಟೆಗಳ ಕಾಲ ಸಂಚಾರ ಸ್ಥಗಿತಗೊಂಡಿತು. ಸ್ಥಳಕ್ಕಾಗಮಿಸಿದ ಹಿರೇಬಾಗೇವಾಡಿ ಪೊಲೀಸ್ ಬಸ್ಸಿನ ಸಮಸ್ಯೆ ನೀಗಿಸುವುದಾಗಿ ಭರವಸೆ ನೀಡಿ ಮಕ್ಕಳನ್ನು ಬಸ್ಸಿಗೆ ಹತ್ತಿಸಿ ಶಾಲೆಗೆ ಕಳುಹಿಸಿದರು. ಆದರೇ, ಬಸ್ಸಿನ ಮೂಲಕ ಶಾಲೆಗೆ ತೆರಳದೇ ನೇರವಾಗಿ ಬೆಳಗಾವಿ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಆಗಮಿಸಿದ ವಿದ್ಯಾರ್ಥಿಗಳು, ಬಸ್ಸಿನ ಕೊರತೆ ಮತ್ತು ಶೈಕ್ಷಣಿಕ ನಷ್ಟದ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದರು. ಶಾಲಾ ಮಕ್ಕಳೇ ಮನವಿಯನ್ನು ಬರೆದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು.
ಕೊಂಡೊಸಕೊಪ್ಪಿನ ವಿದ್ಯಾರ್ಥಿನಿ ಮಾತನಾಡಿ ನಮ್ಮ ಊರಿಗೆ ಬೆಳಗಿನ ಜಾವ 8 ಗಂಟೆಗೆ ಒಂದೇ ಒಂದು ಬಸ್ಸಿದ್ದು ಇದ್ದು ಇಲ್ಲದಂತಾಗಿದೆ. ಇಷ್ಟು ದಿನ ಬೇರೆ ಬಸ್ಸಿನ ಮೂಲಕ ಶಾಲೆಗೆ ಹೋಗುತ್ತಿದ್ದೇವು. ಆದರೇ, ಈಗ ಬೇರೆ ಬಸ್ಸಿನಲ್ಲಿ ವಿದ್ಯಾರ್ಥಿನಿಯರನ್ನು ಅವಾಚ್ಯವಾಗಿ ನಿಂದಿಸುತ್ತಿದ್ದಾರೆ. ಅಲ್ಲದೇ, ವಿದ್ಯಾರ್ಥಿಗಳಿಗೆ ಹೊಡೆಯುತ್ತಿದ್ದಾರೆ. ಇದರಿಂದಾಗಿ ಶಾಲೆಗೆ ಪರೀಕ್ಷೆಯಿದ್ದರೂ ಹೋಗಲಾರದೇ, ಶೈಕ್ಷಣಿಕ ನಷ್ಟವಾಗುತ್ತಿದೆ. ಹಲವು ಬಾರಿ ಗ್ರಾಮದ ಪ್ರಮುಖರು ಹೇಳಿದರೂ ಯಾವುದೇ ಪ್ರಯೋಜವಾಗಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡಳು.
ಕೊಂಡಸಕೊಪ್ಪ ಗ್ರಾಮಕ್ಕೆ ಒಂದು-ಎರಡು ಕಿಲೋ ಮೀಟರ್ ಹೊರಗೆ ಬಸ್ಸ್ ಇಳಿಸಿ ಹೋಗುತ್ತಿದೆ. ಮಳೆ ಬಿಸಿಲು ಎನ್ನದೇ, ನಡೆದುಕೊಂಡು ಹೋಗುವ ಪರಿಸ್ಥಿತಿ ಎದುರಾಗಿದೆ. ಬಸ್ಸಿನಲ್ಲಿ ನೂಕೂ ನೂಗ್ಗಾಟ ನಡೆಸಲಾಗುತ್ತದೆ. ನಮ್ಮ ಗ್ರಾಮಕ್ಕೆ ತಾಸಿಗೊಂದು ಬಸ್ಸು ಬೇಕೆ ಬೇಕು. ನಮ್ಮ ಸಮಸ್ಯೆಯನ್ನು ನೀಗಿಸಲೇಬೇಕು ಎಂದು ವಿದ್ಯಾರ್ಥಿಗಳು ಪರಿಪರಿಯಾಗಿ ಹೇಳಿಕೊಂಡರು. ಪ್ರತಿಭಟನೆಯಲ್ಲಿ ಶಾಲಾ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು.
ಬಹುಕೋಟಿ ಹಣ ವಂಚನೆ : ಆದಿತ್ಯರಾಜ್ ಕೇಸು ಸಿಐಡಿಗೆ, ಸಿಇಓ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ಏರ್ಪೋರ್ಟ್ ಗಳಿಗೆ ಮಾಹಿತಿ ರವಾನೆ
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ 