ಖಾದ್ರಿಯಾ ಹಸನೈನ್‌ಕರೈಮೀನ್ ವಿಶೇಷ ದರ್ಶನ ಕಾರ್ಯಕ್ರಮ ಯಶಸ್ವಿ
Khadriya Hasanin Karameen special darshan program a success
ಕೊಪ್ಪಳ 15: ನಗರದ ನಿರ್ಮಿತಿಕೇಂದ್ರದ ಬಡಾವಣೆಯಲ್ಲಿರುವಖಾದ್ರಿಯ ಪೀಠದಲ್ಲಿ ಹಜರತ್ ಹಸನೈನ್‌ಕರೈಮೀನ್ (ರ)ರವರ ಜಿಯಾರತ್‌ಆಸಾರೆ ಮುಬಾರಕ್ ಪವಿತ್ರ ವಿಶೇಷ ದರ್ಶನ ಕಾರ್ಯಕ್ರಮ ಸೋಮವಾರ ಸಂಜೆ ವೇಳೆಯಲ್ಲಿ ಜರುಗಿತು.
ಬಜ್ಮೆ ಫೈಜಾನೆಖಾದ್ರಿಯಾ ಧರ್ಮಗುರು ಹಾಗೂ ಬಜ್ಮೆ ಫೈಜಾನೆ ಖಾದ್ರಿಯಾ ಪೀಠದ ಹಿರಿಯ ಗುರುಗಳಾದ ಹಜರತ್ ಸೈಯದ್ ಶಾಹ್ ಮೋಹೀದೀನ್ ನಾಬೀರಾಖಾದ್ರಿ ಸಾಹೇಬ್ ಸಾಲಗುಂದ ಶರೀಫ್‌ರವರ ಕೃಪಾ ಆಶೀರ್ವಾದದೊಂದಿಗೆ ಕೊಪ್ಪಳದ ಖಾದ್ರಿಯ ಪೀಠದ ಪೀಠಾಧಿಪತಿ ಗುರುಗಳಾದ ಹಜರತ್ ಸಯ್ಯದ್ ಶಾಹ್‌ಅಬ್ದುಲ್ ವಾಹಾಬ್‌ಖಾದ್ರಿಉರ್ಫ್ ಮುದಸಿರ್ ಪಾಷಾ ಖಾದ್ರಿ ಸಾಹೇಬ್ ಸಾಲಗುಂದ ಶರೀಫ್ ರವರುಗಳ ಮಾರ್ಗದರ್ಶನದಲ್ಲಿ ಹಸನೈನ್‌ರವರ ಆಸಾರೆ ಮುಬಾರಕ್ ವಿಶೇಷ ಪವಿತ್ರದರ್ಶನಕಾರ್ಯಕ್ರಮ ಮತ್ತುಅನ್ನ ಸಂತರೆ್ಣ ಸಂಭ್ರಮದಿಂದ ಯಶಸ್ವಿಯಾಗಿ ಜರುಗಿತು ,ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ,ಸಮಾಜ ಬಾಂಧವರು ಮತ್ತು ಸರ್ವರು ಆಗಮಿಸಿ ದರ್ಶನ ಪಡೆದುಕೊಂಡರು. ಸೈಯದ್ ಸಮೀರ್‌ಖಾದ್ರಿಅಲ್ಲದೆಖಾದ್ರಿಯಾ ಪೀಠದ ಭಕ್ತ ಮಂಡಳಿಯ ಸೇವಕರಾದ ಮೊಹಮ್ಮದ್‌ಜಾಕಿರ್ ಹುಸೇನ್ ಸಾಲಗುಂದ, ಪತ್ರಕರ್ತ ಎಂ ಸಾಧಿಕ್ ಅಲಿ, ಸೈಯದ್‌ಗೌಸ್ ಪಾಷಾ ಖಾಜಿ ಮೌಲಾನ ಹಾಫೀಸ್ ಸಕ್ಲೈನ್ ಸಾಹೇಬ್, ಮೌಲಾ ಹುಸೇನ್ ಗೌಸ ಸಾಬ್, ರಜಾಕ್ ಸಾಬ್‌ಅರಗಂಜಿ, ಮುನೀರ್ ಪಾಷಾ, ಝೆಡ್ ಎಂ ಸೂಫಿ, ಅಬ್ದುಲ್‌ಖದಿರ್ ಸಾಬ್, ಸೂಫಿಜಾಕೀರ್ ಸಾಹೇಬ್ ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತ ಸಮೂಹದ ಸಾರ್ವಜನಿಕರು ವಿಶೇಷವಾಗಿ ಮಹಿಳೆಯರು ಸಹ ಪಾಲ್ಗೊಂಡುದರ್ಶನ ಮಾಡಿ ಗುರುಗಳವರ ಕೃಪಾ ಆಶೀರ್ವಾದ ಪಡೆದುಅನ್ನ ಸಂತರೆ್ಣ ಸ್ವೀಕರಿಸಿ ತೆರಳಿದರು.
ಅಸಾರೆ ಮುಬಾರಕ್ ವಿಶೇಷ ಪವಿತ್ರದರ್ಶನದ ವ್ಯವಸ್ಥೆ ಹಾಗೂ ಬರುವ ಭಕ್ತಾದಿಗಳಿಗೆ ಅನ್ನ ಸಂಪರೆ್ಣಯ ವ್ಯವಸ್ಥೆಯನ್ನು ಯಶಸ್ವಿಯಾಗಿ ನಿರ್ವಹಿಸಿದ ಖಾದ್ರಿಯಾ ಪೀಠದಎಲ್ಲಾ ಸೇವಕರಿಗೆಅವರ ಪರಿಶ್ರಮಕ್ಕೆ ಪೀಠಾಧಿಪತಿ ಗುರುಗಳಾದ ಹಜರತ್ ಸೈಯದ್ ಶಾ ಅಬ್ದುಲ್ ವಹಾಬ್ ನಾಬೀರಾಖಾದ್ರಿಉರ್ಫ್ ಮುದಸಿರ ಪಾಷಾ ಖಾದ್ರಿ ಸಾಹೇಬ್ ಸಾಲಗುಂದ ಶರೀಫ್‌ರವರು ವಿಶೇಷ ವಾಗಿ ಕೃತಜ್ಞತೆ ಸಲ್ಲಿಸಿ ಎಲ್ಲಾ ಸೇವಕರಿಗೆ ಮತ್ತು ಭಕ್ತರುಗಳಿಗೆ ಅಭಿನಂದಿಸಿ ಆಶೀರ್ವದಿಸಿದರು,
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ 