ಕಾಯಕ ನಗರ : ಅನಧಿಕೃತ ಗುಡಿಸಲು ತೆರವುಗೆ ಒತ್ತಾಯ

ಕಾಯಕ ನಗರ : ಅನಧಿಕೃತ ಗುಡಿಸಲು ತೆರವುಗೆ ಒತ್ತಾಯ  Kayak Nagar: Demand to clear unauthorized huts

ಲೋಕದರ್ಶನ ವರದಿ 

ಹೂವಿನಹಡಗಲಿ  05:  ಪಟ್ಟಣದ ಸೋಗಿ ರಸ್ತೆ ಯಲ್ಲಿ ಬರುವ  ಕಾಯನಗರದಲ್ಲಿ ಪರಿಶಿಷ್ಟ ಪಂಗಡದ ಕುಶಲಕರ್ಮಿಗಳಿಗೆ ನಿಗದಿ ಪಡಿಸಿರುವ ನೀವೇಶನಗಳಲ್ಲಿ ಅನಧಿಕೃತ ಗುಡಿಸಲುಗಳನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿ ಶುಕ್ರವಾರ ಕಾಯಕನಗರ ಪರಿಶಿಷ್ಟ ಪಂಗಡ ಹಿತಾ ರಕ್ಷಣಾ ವೇದಿಕೆ ಯಿಂದ  ಪುರಸಭೆಗೆ ಮನವಿ ಸಲ್ಲಿಸಿದರು. ಕಾಯಕನಗರ ಪರಿಶಿಷ್ಟ ಪಂಗಡದ ಕುಶಲಕರ್ಮಿಗಳಿಗೆ ಗುರುತಿಸಿರುವ ನಿವೇಶನಗಳನ್ನು ಅತಿಕ್ರಮಣ ಮಾಡುತ್ತಿದ್ದಾರೆ.ಕೂಡಲೇ ಮೂರು ದಿನಗಳಲ್ಲಿ ಅನಧಿಕೃತ ಗುಡಿಸಲು ತರೆವುಗೊಳಿಸಬೇಕೆಂದು ಆಗ್ರಹಿಸಿದರು. ಕಾಯಕ ನಗರ ಪ.ಪಂ. ಮತ್ತು ಹಿತಾ ರಕ್ಷಣಾ ವೇದಿಕೆ ಅದ್ಯಕ್ಷ  ಶಿವಾನಂದಪ್ಪ,ರೇಣುಕವ್ವ,ಉಪಾಧ್ಯಕ್ಷ ಯು.ಮಂಜುನಾಥ, ಕಾರ್ಯದರ್ಶಿ ರಾಘವೇಂದ್ರ ಸೇರಿದಂತೆ ಮಹಿಳೆಯರು ಇದ್ದರು.