ಹೂವಿನ ಹಡಗಲಿ

ನ. 8ರಂದು ಶ್ರೀ ರಂಭಾಪುರಿ ಪೀಠದಲ್ಲಿ ಕಾರ್ತಿಕ್ ದೀಪೋತ್ಸವ

ನ. 8ರಂದು ಶ್ರೀ ರಂಭಾಪುರಿ ಪೀಠದಲ್ಲಿ ಕಾರ್ತಿಕ್ ದೀಪೋತ್ಸವ

ರಂಭಾಪುರಿ ಪೀಠ(ಬಾಳೆಹೊನ್ನೂರು) ಅಕ್ಟೋಬರ್-28: ಬಾಳೆಹೊನ್ನೂರು ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠದಲ್ಲಿ ದಿ. 8 ರಂದು ಸಂಜೆ 7 ಗಂಟೆಗೆ ಶ್ರೀಮದ್ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳ ಸಾನಿಧ್ಯದಲ್ಲಿ ಕಾರ್ತಿಕ್ ಲಕ್ಷ ದೀಪೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ರಥೋತ್ಸವ ಜರುಗುವುದು. ಸಮಾರಂಭದಲ್ಲಿ ವಿವಿಧ ಮಠಾಧೀಶರು, ಗಣ್ಯರು ಪಾಲ್ಗೊಳ್ಳುವರು. 

ಅಂದು ಬೆಳಿಗ್ಗೆ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ, ಕ್ಷೇತ್ರನಾಥ  ವೀರಭದ್ರಸ್ವಾಮಿಗೆ,  ಸೋಮೇಶ್ವರ ಮಹಾಲಿಂಗ, ಶಕ್ತಿಮಾತೆ ಚೌಡೇಶ್ವರಿ, ಪಾರ್ವತಿ ದೇವಿ, ಭದ್ರಕಾಳಿ ಅಮ್ಮನವರು ಹಾಗೂ ಲಿಂಗೈಕ್ಯ ಶ್ರೀ ಜಗದ್ಗುರುಗಳವರ ಗದ್ದುಗೆಗಳಿಗೆ ವಿಶೇಷ ಪೂಜೆ ಜರುಗುವುದು. ಕಾರ್ತಿಕ್ ದೀಪಾರಾಧನೆ ಸೇವೆಯನ್ನು ಶಿಗ್ಗಾಂವಿಯ ಲಲಿತಾಬಾಯಿ ಕೋಂ ಶಿವಪುತ್ರಯ್ಯ ಸುರಗೀಮಠ ಹಾಗೂ ವಿದ್ಯುತ್ ದೀಪಾಲಂಕಾರ ಸೇವೆಯನ್ನು ಹುಬ್ಬಳ್ಳಿಯ ವೀರೇಶ ಪಾಟೀಲ ಹಾಗೂ ಬಾಳೆಹೊನ್ನೂರು, ಬಾಸಾಪುರ, ಕಡವಂತಿ ಸದ್ಭಕ್ತರು ಮಾಡಲಿದ್ದಾರೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಶ್ರೀ ಪೀಠದ ಪ್ರಕಟಣೆ ತಿಳಿಸಿದೆ. 

 

ಸುದ್ದಿ ಓದಿ