ವಿದ್ಯಾರ್ಥಿಗಳು ವೀರ ಸೇನಾನಿಗಳನ್ನು ಸ್ಮರಿಸಬೇಕು: ಡಾ. ಎಚ್. ಎಸ್. ಮೇಲಿನಮನಿ
Kargil Victory Day celebrated at Lingaraja College
ಲಿಂಗರಾಜ ಕಾಲೇಜಿನಲ್ಲಿ ಕಾರ್ಗಿಲ್ ವಿಜಯ ದಿವಸ ಆಚರಣೆ
ಬೆಳಗಾವಿ 26: ಭಾರತ ಶಾಂತೀಶೀಲ ದೇಶ. ಸಹಬಾಳ್ವೆ ದೇಶ. ಆದರೆ ತನ್ನ ಮೇಲೆ ದಾಳಿ ಮಾಡಿದ ವೈರಿಗಳನ್ನು ತಿರುಗಿ ನೋಡುವಂತೆ ಪಾಠ ಕಲಿಸಿದೆ. ಕಾರ್ಗಿಲ್ ಯುದ್ಧದ ಮೂಲಕ ಪಾಕಿಸ್ತಾನಕ್ಕೆ ತಕ್ಕಪಾಠ ಕಲಿಸಿದ್ದು ಇಂದು ಇತಿಹಾಸ. ಹುತಾತ್ಮರಾದ ಎಲ್ಲ ಯೋಧವೀರರನ್ನು ಸ್ಮರಿಸಬೇಕು ಎಂದು ಪ್ರಾಚಾರ್ಯ ಡಾ.ಎಚ್.ಎಸ್.ಮೇಲಿನಮನಿ ಹೇಳಿದರು. ಅವರು ಲಿಂಗರಾಜ ಕಾಲೇಜಿನಲ್ಲಿ ಎನ್ಸಿಸಿ ಘಟಕದಿಂದ ಆಯೋಜಿಸಲಾಗಿದ್ದ ಕಾರ್ಗಿಲ್ ವಿಜಯ ದಿವಸ್ದ 26ನೇ ವರ್ಷಾಚರಣೆ ನಿಮಿತ್ತ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದರು. ನಾವು ಇಲ್ಲಿಯವರೆಗೆ ನಮ್ಮ ಮೇಲೆ ದಾಳಿ ಮಾಡಿದವರ ಇತಿಹಾಸವನ್ನು ಓದುತ್ತಾ ಬಂದಿದ್ದೇವೆ. ಹಾಗಲ್ಲ, ನಮ್ಮ ದೇಶದ ವೀರರು ತಮ್ಮ ಪ್ರಾಣದ ಹಂಗು ತೊರೆದು ಭಾರತ ಮಾತೆಯನ್ನು ಸಂರಕ್ಷಿಸಿದ ಪಾಠವನ್ನು ಓದುವ ಕಾಲವಿದು. ಪಾಕಿಸ್ತಾನದ ಸೈನ್ಯಕ್ಕೆ ತಕ್ಕ ಪಾಠವನ್ನು ಕಲಿಸಿ ವಿಜಯ ಪತಾಕೆಯನ್ನು ಹಾರಿಸಿದ ಶ್ರಮದ ದಿನವಿಂದು ಹೇಳಿದರು.
ನಮ್ಮಲ್ಲಿ ದೇಶ ಪ್ರೇಮವನ್ನು ರಾಷಿೊಥಯ ಪ್ರಜ್ಞೆಯನ್ನು ಮೂಡಿಸಿಕೊಳ್ಳಬೇಕಾದ ಸಂದರ್ಭವಿದು. ಅನೇಕ ವೀರರು ಈ ದೇಶಕ್ಕಾಗಿ ಹೋರಾಡಿ ಹುತಾತ್ಮರಾಗಿ ಸಂರಕ್ಷಿಸಿದ್ದಾರೆ. ಅಂತಹ ಭಾರತೀಯ ಯೋಧರಿಗೆ ನಾವು ನಮನಗಳನ್ನು ಸಲ್ಲಿಸಲೇಬೇಕೆಂದು ಕರೆನೀಡಿದರು. ಎನ್ಸಿಸಿ ಅಧಿಕಾರಿ ಮೇಜರ್ ಡಾ.ಮಹೇಶ ಗುರನಗೌಡರ ಮಾತನಾಡಿ ಭಾರತ ನಾಲ್ಕು ಮಹತ್ವದ ಯುದ್ಧದಲ್ಲಿ ಸೋಲಿಸಿ ಪಾಠ ಕಲಿಸಿದೆ ಆದರೂ ಬುದ್ಧಿ ಬಂದಿಲ್ಲ. ಆಫರೇಷನ್ ಸಿಂಧೂರದಲ್ಲಿಯೂ ಕೊಟ್ಟ ಏಟು ಅಷ್ಟಿಷ್ಟಲ್ಲ. ವೈರಿ ರಾಷ್ಟೊಕ್ಕೆ ಭಾರತೀಯ ಯೋಧರು ಕಾಲಕಾಲಕ್ಕೆ ತಕ್ಕ ಉತ್ತರವನ್ನು ಕೊಟ್ಟಿದ್ದಾರೆ. ಅಂತಹ ಎಲ್ಲ ವೀರರನ್ನು ನಾವೆಲ್ಲ ಸ್ಮರಿಸಬೇಕು. ದೇಶಕ್ಕಾಗಿ ಯುವಜನಾಂಗ ಹೋರಾಡುವಂತಾಗಬೇಕು. ಭಾರತ ಭೂಮಿಯನ್ನು ಸಂರಕ್ಷಿಸುವುದು ಎಲ್ಲರ ಕರ್ತವ್ಯ. ದೇಶಾಭಿಮಾನ ಬಹುಮುಖ್ಯವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೆಡೆಟ್ ವಿವೇಕ ರಾಜಕಟ್ಟಿ ನಿರೂಪಿಸಿದರು. ಮಾಜಿ ಸೈನಿಕ್ ಮಲ್ಲಿಕಾರ್ಜುನ ದೊಡರಾಯಿ, ಸಿನಿಯರ್ ಆಫೀಸರ್ ಧೀರಜ್ ಭಾವಿಮನೆ, ವೈಷ್ಣವಿ ಮಾಳಿ, ಕೆಡೆಟ್ ಕಾಂತೇಶ್, ಕೆಡೆಟ್ ಮಹೇಂದ್ರ, ಕೆಡೆಟ್ ಶ್ರೇಯಾಂಕ ಚುಂಚನೂರ, ಕೆಡೆಟ್ ಮೊದಲಾದವರು ಉಪಸ್ಥಿತರಿದ್ದರು.
ಬಹುಕೋಟಿ ಹಣ ವಂಚನೆ : ಆದಿತ್ಯರಾಜ್ ಕೇಸು ಸಿಐಡಿಗೆ, ಸಿಇಓ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ಏರ್ಪೋರ್ಟ್ ಗಳಿಗೆ ಮಾಹಿತಿ ರವಾನೆ
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ 