ಜು.26 ರಂದು ಕಾರ್ಗಿಲ್, ಆಪರೇಷನ್ ಸಿಂಧೂರ್ ವಿಜಯೋತ್ಸವ: ಬೈಕ್ ರ್ಯಾಲಿ

ಜು.26 ರಂದು ಕಾರ್ಗಿಲ್, ಆಪರೇಷನ್ ಸಿಂಧೂರ್ ವಿಜಯೋತ್ಸವ: ಬೈಕ್ ರ್ಯಾಲಿ Kargil, Operation Sindoor Victory Day on July 26: Bike Rally

ಬೆಳಗಾವಿ 24: ಮಾಜಿ ಸೈನಿಕ ಸಂಘಟನೆಯ ಮಹಾ ಒಕ್ಕೂಟದಿಂದ ಜು.26 ರಂದು ಕಾರ್ಗಿಲ್ ವಿಜಯೋತ್ಸವ ಹಾಗೂ ಆಪರೇಷನ್ ಸಿಂಧೂರ್ ವಿಜಯೋತ್ಸವದ ಹಿನ್ನೆಲೆಯಲ್ಲಿ ನಗರದ ಕಿಲ್ಲಾ ಕೋಟೆಯಿಂದ ಬೈಕ್ ರ್ಯಾಲಿ ಆಯೋಜನೆ ಮಾಡಲಾಗಿದೆ ಎಂದು ಬೆಳಗಾವಿ ಜಿಲ್ಲೆ ಮಾಜಿ ಸೈನಿಕರ ಸಂಘಟನೆಯ ಜಿಲ್ಲಾಧ್ಯಕ್ಷ ಜಗದೀಶ್ ಪೂಜಾರಿ ಅವರು ಹೇಳಿದರು. 

ಕನ್ನಡ ಸಾಹಿತ್ಯ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ದೇಶಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಸೈನಿಕರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ವಿಜಯೋತ್ಸವ ಆಚರಣೆ ನಡೆಯಲಿದೆ. ನಗರದ ಧರ್ಮನಾಥ ಭವನದಲ್ಲಿ ಮಾಜಿ ಸೈನಿಕ ಸಂಘಟನೆಯ ಮಹಾ ಒಕ್ಕೂಟದಿಂದ ಕಾರ್ಯಕ್ರಮ ಜರುಗಲಿದೆ ಎಂದರು. 

ಕಿಲ್ಲಾ ಕೋಟೆಯಿಂದ ಆರಂಭವಾಗುವ ಬೈಕ್ ರ್ಯಾಲಿ ಸಂಗೊಳ್ಳಿ ರಾಯಣ್ಣ ವೃತ್ತ, ಕೇಂದ್ರ ಬಸ್ ನಿಲ್ದಾಣ, ಚನ್ನಮ್ಮ ವೃತ್ತದಿಂದ ವೇದಿಕೆ ಕಾರ್ಯಕ್ರಮದ ಧರ್ಮನಾಥ ಭವನದವರೆಗೆ ನಡೆಸಲಾಗುತ್ತಿದೆ ಎಂದರು. 

ಕಾರ್ಗಿಲ್ ವಿಜಯೋತ್ಸವದ ಕಾರ್ಯಕ್ರಮದಲ್ಲಿ ಮಾಜಿ ಸೈನಿಕರ ಮಕ್ಕಳಿಗೆ ಹಾಗೂ ಆಪರೇಷನ್ ಸಿಂಧೂರ್ ನಲ್ಲಿ ಭಾಗಿಯಾದ ಬೆಳಗಾವಿ ಯೋಧನಿಗೆ ಸನ್ಮಾನ ಮಾಡಲಾಗುವುದು ಎಂದರು. 

ಬೃಹತ್ ಬೈಕ್ ರ್ಯಾಲಿಗೆ ಬಿಜೆಪಿ ಮುಖಂಡಾದ ಮುರಗೇಂದ್ರಗೌಡ ಪಾಟೀಲ ಅವರು ಹಸಿರು ನಿಶಾನೆ ನೀಡಲಿದ್ದಾರೆ. 

ಈ ವಿಜಯೋತ್ಸವದ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಉದ್ಘಾಟಿಸಲಿದ್ದಾರೆ. ಸಂಸದ ಜಗದೀಶ ಶೆಟ್ಟರ , ಸಚಿವೆ ಲಕ್ಷ್ಮೀ ಹೆಬ್ಬಾಳಕರ್ , ಶಾಸಕರಾದ ನಿಖಿಲ ಕತ್ತಿ, ಸಂಜಯ ಪಾಟೀಲ , ಮಹಾಂತೇಶ ಕವಟಗಿಮಠ , ಜಿಲ್ಲಾಧಿಕಾರಿಗಳಾದ ಮೊಹಮ್ಮದ್ ರೋಷನ್ , ಪೊಲೀಸ್ ಆಯುಕ್ತರಾದ ಬೊರಸೆ ಭೂಷಣ್ ಗುಲಾಬರಾವ್ , ಡಾ. ಸೋನಾಲಿ ಸರ್ನೊಬತ್ , ಚೇತನ ಅಂಗಡಿ, ಡಾ. ಸತೀಶ ಚೌಲಿಗೇರಿ, ಆಪರೇಷನ್ ಸಿಂಧೂರದಲ್ಲಿ ಭಾಗವಹಿಸಿದ ಸೈನಿಕರಾದ ಈರ​‍್ಪ ಜನಕಟ್ಟಿ, ಗಂಗಾಧರ ಬೆಟಗೇರಿ, ಅಂತರಾಷ್ಟ್ರೀಯ ಕರಾಟೆಯಲ್ಲಿ ಚಿನ್ನದ ವೀಜೆತ ವೈಷ್ಟವಿ ನಿರ್ವಾಣಿ, ಚಿತ್ರ ನಟಿ ಪ್ರಿಯಾ ಸವಡಿ ಹಾಗೂ ಗಣ್ಯರು ಆಗಮಿಸಲಿದ್ದಾರೆ. ಜಿಲ್ಲಾಧ್ಯಕ್ಷ ಜಗದೀಶ್ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಯುವ ವಾಗ್ಮಿ, ಲೇಖಕಿ ಹಾರೀಕಾ ಮಂಜುನಾಥ ಆಗಮಿಸಲಿದ್ದಾರೆ. ಜಿಲ್ಲೆಯ ಶಾಸಕ, ಸಚಿವರು ಜನಪ್ರತಿನಿಧಿಗಳು ಆಗಮಿಸಲಿದ್ದಾರೆ ಎಂದರು. 

ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆ ಮಾಜಿ ಸೈನಿಕರ ಸಂಘಟನೆಯ ಜಿಲ್ಲಾಧ್ಯಕ್ಷ ಜಗದೀಶ್ ಪೂಜಾರಿ, ಉಪಾಧ್ಯಕ್ಷರಾದ ಸಂಗಪ್ಪ ಮೇಟಿ, ರಮೇಶ ಚೌಗಲಾ, ಪ್ರಧಾನ ಕಾರ್ಯದರ್ಶಿ ಶಿವಬಸಪ್ಪ ಕಾಡನ್ನವರ, ಸಂತೋಷ ಹಿರೇಮಠ,ಗಣಪತ ದೇಸಾಯಿ, ಸುರಜ ಪಾಟೀಲ, ಸುನೀತಾ ಪಟ್ಟಣಶೇಟ್ಟಿ, ಸಂತೋಷ ಮಠಪತಿ ಹಾಗೂ ಇತರರು ಇದ್ದರು.