ಕಾರಹುಣ್ಣಿಮೆ ಬಸವಣ್ಣನ ಪೂಜೆಯ ಕೃಷಿ ಸಂಸ್ಕೃತಿಯ ಸಂಕೇತ: ಗೌಡಶಿವಣ್ಣನವರ
Karahunnime is a symbol of the farming culture of worshiping Basavanna: Gaudashivannavara
ರಾಣೇಬೆನ್ನೂರು 17 : ಕಾರ ಹುಣ್ಣಿಮೆ ರೈತಾಪಿ ವರ್ಗದವರ ಮತ್ತು ರೈತ ಸಮುದಾಯದ ಭಕ್ತಿ ಭಾವ ಮತ್ತು ಸಂಭ್ರಮದ ಹಬ್ಬವಾಗಿ ಆಚರಿಸುವುದು ನಾಡಿನ ಸಂಸ್ಕೃತಿಯ ಪ್ರತೀಕವಾಗಿದೆ ಎಂದು, ನಗರದ ಯುವ ರೈತ, ಜೆಡಿಎಸ್ ಜಿಲ್ಲಾಧ್ಯಕ ಮಂಜುನಾಥ ಗೌಡ ಶಿವಣ್ಣನವರ್ ಹೇಳಿದರು.
ಅವರು, ಸೋಮವಾರ ಇಲ್ಲಿನ ಕುರುಬಗೆರೆಯ, ತಮ್ಮ ಕೃಷಿ ಕಾಯಕದ ಮನೆ ಮುಂದೆ, ರೈತರ ಜೀವನಾಡಿ, ಬಸವಣ್ಣನಿಗೆ ಅತ್ಯಂತ ಭಕ್ತಿ ಭಾವದಿ ಪೂಜಿಸಲ್ಲಿಸಿ, ಸಂಭ್ರಮಿಸಿ, ಮಾತನಾಡಿದರು. ಓದು ವಕ್ಕಾಲು, ಬುದ್ಧಿ ಮುಕ್ಕಾಲು, ರೈತ ವಕ್ಕಿದರೇ ಜಗವೆಲ್ಲ ನಕ್ಕು ನಲಿಯುವುದು ಎನ್ನುವ ನಮ್ಮ ಪೂರ್ವಜರ ವಾಣಿ ಇಂದಿಗೂ ಸತ್ಯವಾಗಿದೆ ಎನ್ನುವುದಕ್ಕೆ, ನಾಡಿನ ರೈತರ ಕಾರ ಹುಣ್ಣಿಮೆಯ ದಿವಸ ಅತ್ಯಂತ ಸಡಗರ ಮತ್ತು ಸಂಭ್ರಮದಿ ಆಚರಿಸುವ ಹಬ್ಬವೇ ಇಂದಿಗೂ ಸಾಕ್ಷಿಯಾಗಿದೆ ಎಂದರು.
ಪ್ರಸ್ತುತ ರೈತರ ಮೊಗದಲ್ಲಿ ನಗೆಯ ಮಂದಹಾಸ ಬೀರಿದೆ. ನೆಲಕಪ್ಪಳಿಸಿರುವ ಮಳೆ, ಇಳೆವರೆಗೂ ಬಂದಿದೆ. ಇದೇ ರೀತಿ ಸಂದರ್ಭ ಕ್ಕನುಸಾರವಾಗಿ, ಮಳೆ ಬೀಳಬೇಕು, ಹಚ್ಚ ಹಸಿರಿನ ಫೈರು ರೈತನ ಮೊಗದಲ್ಲಿ ನಗು ತರುವಂತೆ ಇರಬೇಕು ಎನ್ನುವ ಪ್ರಾರ್ಥನೆ ನಮ್ಮದಾಗಿದೆ ಎಂದು ಪೂಜೆಯ ಮಹತ್ವವನ್ನು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದರು. ಬಹು ವಿಜೃಂಭಣೆಯಿಂದ ನಡೆದ ಕಾರ ಹುಣ್ಣಿಮೆಯ ಬಸವಣ್ಣನ ಪೂಜೆಯ ಈ ಸಂದರ್ಭದಲ್ಲಿ ಕುಟುಂಬದ ಎಲ್ಲಾ ಹಿರಿಯ ಮತ್ತು ಕಿರಿಯ ಸದಸ್ಯರು, ಬಂಧುಗಳು, ರೈತರು ಉಪಸ್ಥಿತರಿದ್ದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 