ಫೆ.24 ರಂದು ಕನಕದುರ್ಗಮ್ಮ ಸಿಡಿಬಂಡಿ ರಥೋತ್ಸವ: ವಿವಿಧೆಡೆ ಪಾರ್ಕಿಂಗ್ ವ್ಯವಸ್ಥೆ
Kanakadurgamma Sidibandi Chariot Festival on Feb. 24: Parking arrangements at various locations
ಬಳ್ಳಾರಿ 21: ಇದೇ ಫೆ.24 ರಂದು ಬಳ್ಳಾರಿ ನಗರದ ಶ್ರೀ ಕನಕ ದುರ್ಗಮ್ಮ ಸಿಡಿಬಂಡಿ ರಥೋತ್ಸವ ಜರುಗಲಿದ್ದು, ರಥೋತ್ಸವ ವೀಕ್ಷಿಸಲು ಆಗಮಿಸುವ ಸಾರ್ವಜನಿಕರಿಗೆ ನಗರದ ವಿವಿಧೆಡೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್ ಅವರು ತಿಳಿಸಿದ್ದಾರೆ.
ಮೋಕ ಭಾಗದಿಂದ ರಥೋತ್ಸವಕ್ಕೆ ಆಗಮಿಸುವ ಸಾರ್ವಜನಿಕ ವಾಹನಗಳಿಗೆ ಗಾಂಧಿನಗರ 1ನೇ ಕ್ರಾಸ್ ಹತ್ತಿರವಿರುವ ಅಲ್ಲಂ ಸುಮಂಗಳಮ್ಮ ಕಾಲೇಜು ಆವರಣದಲ್ಲಿ, ಕಪ್ಪಗಲ್ ಕಡೆಯಿಂದ ರಥೋತ್ಸವಕ್ಕೆ ಆಗಮಿಸುವ ಸಾರ್ವಜನಿಕ ವಾಹನಗಳಿಗೆ ಕಪ್ಪಗಲ್ ರಸ್ತೆಯಲ್ಲಿರುವ ಕಿತ್ತೂರುರಾಣಿ ಚೆನ್ನಮ್ಮ ಶಾಲೆಯ ಆವರಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ಸಿರುಗುಪ್ಪ ಹಾಗೂ ಹೊಸಪೇಟೆ ಭಾಗದಿಂದ ರಥೋತ್ಸವಕ್ಕೆ ಆಗಮಿಸುವ ಸಾರ್ವಜನಿಕ ವಾಹನಗಳಿಗೆ ಬಸವ ಭವನ ಹಾಗೂ ಜಿಲ್ಲಾ ಕೇಂದ್ರ ಕಾರಾಗೃಹದ ಮುಂದಿನ ಖಾಲಿ ಜಾಗದಲ್ಲಿ, ಬೆಂಗಳೂರು ರಸ್ತೆ ಹಾಗೂ ಅನಂತಪುರ ಕಡೆಯಿಂದ ರಥೋತ್ಸವಕ್ಕೆ ಆಗಮಿಸುವ ಸಾರ್ವಜನಿಕ ವಾಹನಗಳಿಗೆ ಕಮ್ಮಾ ಭವನದ ಮುಂದಿನ ಖಾಲಿ ಜಾಗ ಹಾಗೂ ಮುನಿಸಿಪಲ್ ಕಾಲೇಜು ಅವರಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ಬಳ್ಳಾರಿ ನಗರದ ಯು.ಬಿ ಸರ್ಕಲ್, ಜಿಲ್ಲಾ ಕೇಂದ್ರ ಕಾರಾಗೃಹದ ಗೇಟ್, ಜಿಮ್‌ಖಾನ ಕ್ರಾಸ್, ತಾಳೂರು ರಸ್ತೆಯ ಬಾಲಾಜಿ ನರ್ಸಿಂಗ್ ಹೋಂ ಕ್ರಾಸ್, ಕಪ್ಪಗಲ್ ರಸ್ತೆಯ ಸಂಜೀವಿನಿ ಅಸ್ಪತ್ರೆಯ ಕ್ರಾಸ್ ಹಾಗೂ ಮೋಕಾ ರಸ್ತೆಯ ಗಾಂಧಿನಗರ 1ನೇ ಕ್ರಾಸ್ ಗಳ ಮೂಲಕ ದುರ್ಗಮ್ಮ ಗುಡಿ ಸರ್ಕಲ್‌ಗೆ ಬರುವ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 