ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ
ಹೂವಿನ ಹಡಗಲಿ 18: ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ದಿಟ್ಟತನ ಹೋರಾಟದ ಫಲವಾಗಿ ನಿಜಾಮರ ದುರಾಡಳಿತ ಕೊನೆಯಾಯಿತು ಎಂದು ತುಂಗಭದ್ರಾ ವಿದ್ಯಾ ಸಂಸ್ಥೆಯ ಉಪಾಧ್ಯಕ್ಷ ಡಾ.ಮಂಜುನಾಥ ಹೇಳಿದರು.
ಪಟ್ಟಣದ ತುಂಗಭದ್ರಾ ಪ್ರೌಢಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ಉತ್ಸವ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. 371ಜೆ ಸೌಲಭ್ಯ ದೊರೆತಿರುವುದು ಈ ಭಾಗದ ಶೈಕ್ಷಣಿಕ ಉದ್ಯೋಗದ ವಿಷಯದಲ್ಲಿ ಮಹತ್ವದ ಬೆಳವಣಿಗೆ ಎಂದು ತಿಳಿಸಿದರು. ಮುಖ್ಯ ಗುರುಗಳಾದ ಸುರೇಶ ಅಂಗಡಿ ಇಬ್ಬರು ಮುಖ್ಯಮಂತ್ರಿಗಳನ್ನು ನೀಡಿದ ಹೆಗ್ಗಳಿಕೆ ಕಲ್ಯಾಣ ಕರ್ನಾಟಕಕ್ಕೆ ಸಲ್ಲುತ್ತದೆ. ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟಗಾರರ ಕುರಿತು ಮಾಹಿತಿ ನೀಡಿದರು. ಶಿಕ್ಷಕರಾದ ಸ್ವಾಮಿನಾಥ ರಾಮಸ್ವಾಮಿ, ದ್ವಾರಕೀಶ್ ರೆಡ್ಡಿ,ಕೆ ಬಸವರಾಜ,ಜಿ ಆನಂದ, ಪ್ರತಿಮಾ ಎನ್,
ಗೀತಾ ಪಿ ಎಂ, ಜಿ ಲಾವಣ್ಯ ಸಂತೋಷ್ ಕುಮಾರ್ ಸೊಪ್ಪಿನ ಸಹಾಯಕ ಎಂ ಪಿ ಎಂ ವೀರಭದ್ರಯ್ಯ ಹಾಜರಿದ್ದರು.