ಜೋಳದರಾಶಿ ದೊಡ್ಡನಗೌಡರ 31ನೇ ಪುಣ್ಯತಿಥಿ ಕಾರ್ಯಕ್ರಮ
Joladarashi Doddanagouda's 31st death anniversary program
ಲೋಕದರ್ಶನ ವರದಿ
ಬಳ್ಳಾರಿ 12: ನಗರದಲ್ಲಿ ರಾಘವ ಮೆಮೋರಿಯಲ್ ಅಸೋಸಿಯೇಷನ್ ವತಿಯಿಂದ ನಗರದ ಬಳ್ಳಾರಿ ರಾಘವ ಕಲಾಮಂದಿರದಲ್ಲಿ ಭಾನುವಾರ ಸಂಜೆ ಡಾ. ಜೋಳದರಾಶಿ ದೊಡ್ಡನಗೌಡರ 31ನೇ ವಾರ್ಷಿಕ ಪುಣ್ಯತಿಥಿ ಕಾರ್ಯಕ್ರಮವನ್ನು ಭಾವಪೂರ್ಣವಾಗಿ ಆಚರಿಸಲಾಯಿತು.ಕಾರ್ಯಕ್ರಮವನ್ನು ಸಂಸ್ಥೆಯ ಪದಾಧಿಕಾರಿಗಳು ಹಾಗೂ ದೊಡ್ಡನಗೌಡರ ಕುಟುಂಬದವರು ಜ್ಯೋತಿ ಬೆಳಗಿಸಿ, ಪುಷ್ಪಾಂಜಲಿ ಅರ್ಿಸುವ ಮೂಲಕ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಕಾರ್ಯಕಾರಿಣಿ ಸದಸ್ಯ ಕೆ. ಪೊಂಪನಗೌಡ ಅವರು, “ಡಾ. ಜೋಳದರಾಶಿ ದೊಡ್ಡನಗೌಡರು ಬಳ್ಳಾರಿ ರಾಘವರ ಶಿಷ್ಯರಾಗಿದ್ದು ನಾಟಕ, ಸಾಹಿತ್ಯ, ಗಮಕ ಹಾಗೂ ರಂಗಭೂಮಿಗೆ ಅಪಾರ ಸೇವೆ ಸಲ್ಲಿಸಿದ್ದಾರೆ. ಅವರ ಶಿಷ್ಯರಾಗಿರುವುದೇ ಹೆಮ್ಮೆಯ ವಿಷಯ” ಎಂದು ಹೇಳಿದರು.
1910ರ ಜುಲೈ 27ರಂದು ತಾಯಿ ರುದ್ರಮ್ಮ ಹಾಗೂ ತಂದೆ ಪಂಪನಗೌಡರ ಪುತ್ರರಾಗಿ ಜನಿಸಿದ ದೊಡ್ಡನಗೌಡರು ಜೋಳದರಾಶಿಯ ಅಯ್ಯಾನವರ ಶಾಲೆಯಲ್ಲಿ ನಾಲ್ಕನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿ, ನಂತರ ಸಂಪೂರ್ಣವಾಗಿ ನಾಟಕ ಮತ್ತು ರಂಗಭೂಮಿ ಸೇವೆಯಲ್ಲಿ ತೊಡಗಿಕೊಂಡರು ಎಂದು ತಿಳಿಸಿದರು.ಗಡಿ ಭಾಗದ ಹಿನ್ನೆಲೆಯಿಂದ ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ನಾಟಕಗಳಲ್ಲಿ ಅಭಿನಯಿಸಿದ್ದು ಮಾತ್ರವಲ್ಲದೆ ಸಾಹಿತ್ಯ ರಚನೆಗೂ ಕೈಹಾಕಿ ಸುಮಾರು 40ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಗಮಕ ಕಲೆಗೆ ಅವರು ನೀಡಿದ ಕೊಡುಗೆ ಅಪಾರವಾಗಿದೆ ಎಂದು ಸ್ಮರಿಸಿದರು.“ಹೋಗಿ ಬರ್ತೀನಯ್ಯ ನಮ್ಮ ಊರಿಗೆ” ಎಂಬ ಪ್ರಸಿದ್ಧ ಗೀತೆಯನ್ನು ಕನ್ನಡದಲ್ಲಿ ಹಾಗೂ “ಪೋಯಿ ವಸ್ತಾನಂದಿ ಮಾ ಇಂಟಿಕಿ” ಎಂಬ ತೆಲುಗು ಗೀತೆಯನ್ನು ರಚಿಸಿದ ಅವರು, ಅದರಂತೆಯೇ ಮರಳಿ ಬಾರದ ಲೋಕಕ್ಕೆ ತೆರಳಿದರೂ ಅವರ ಕಲಾಸೇವೆ ಶಾಶ್ವತವಾಗಿ ಉಳಿದಿದೆ ಎಂದು ಹೇಳಿದರು.
ಡಾ. ಜೋಳದರಾಶಿ ದೊಡ್ಡನಗೌಡರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹಾಗೂ ನಾಟಕ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದು, ಗುಲ್ಬರ್ಗ ವಿಶ್ವವಿದ್ಯಾಲಯ ಮತ್ತು ಆಂಧ್ರ ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಪದವಿಗಳನ್ನು ಪಡೆದಿದ್ದರು ಎಂದು ತಿಳಿಸಿದರು.ನಂತರ ಎಸ್.ಪಿ. ಹೊಂಬಳ ಗದಗ ಅವರು ಗಮಕ ವಾಚನ ನಡೆಸಿದರು. ಕಾರ್ಯಕ್ರಮವನ್ನು ಎನ್. ಪ್ರಕಾಶ್ ನಿರೂಪಿಸಿದರು. ಸಹ ಕಾರ್ಯದರ್ಶಿ ಪಿ.ಎಂ. ನಟರಾಜ್ ವಂದನಾರೆ್ಣ ಸಲ್ಲಿಸಿದರು.ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಗೌರವಾಧ್ಯಕ್ಷ ಕೆ. ಚನ್ನಪ್ಪ, ಅಧ್ಯಕ್ಷ ಕೆ. ಕೋಟೇಶ್ವರ ರಾವ್, ಗೌರವ ಕಾರ್ಯದರ್ಶಿ ಎನ್. ಪ್ರಕಾಶ್, ಉಪಾಧ್ಯಕ್ಷ ಬಾಣಾಪುರ ರಮೇಶ್ ಗೌಡ, ಖಜಾಂಚಿ ಪಿ. ಧನಂಜಯ ಸೇರಿದಂತೆ ಬಿ. ಭಾಸ್ಕರ ನಾಯ್ಡು, ಜಿ.ಆರ್. ವೆಂಕಟೇಶಲು, ಕೆ. ಶ್ಯಾಮಸುಂದರ್, ಟಿ.ಜಿ. ವಿಠಲ್, ಪಿ. ಶ್ರೀನಿವಾಸಲು, ರಾಮಬ್ರಹಂ, ಪಿ.ಎಲ್. ಗಾದಿಲಿಂಗನಗೌಡ, ಎಂ. ರಾಮಾಂಜನೇಯಲು, ಶೇಷರೆಡ್ಡಿ, ನಿಷ್ಠಿ ರುದ್ರ್ಪ, ಕಪ್ಪಗಲ್ಲು ಪ್ರಭುದೇವ, ರಮಣಪ್ಪ ಭಜಂತ್ರಿ, ಕಲಾವಿದರು ಹಾಗೂ ದೊಡ್ಡನಗೌಡರ ಕುಟುಂಬದವರು ಭಾಗವಹಿಸಿದ್ದರು.
ಗಡಿ ಮರಾಠಿ ಶಾಲೆಗಳಲ್ಲಿ ಕನ್ನಡ ಕಹಳೆ: 7 ಕನ್ನಡ ಪ್ರಾಥಮಿಕ, 2 ಪ್ರೌಡ ಶಾಲೆಗಳಿಗೆ ರಾಜ್ಯ ಸರಕಾರ ಗ್ರಿನ್ ಸಿಗ್ನಲ್
ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ
ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ
2027ರ ಮೇ. 4ರಿಂದ ಸಂಕೇಶ್ವರ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ ಪ್ರಾರಂಭ
48 ಗಂಟೆಯಲ್ಲಿ ಮನೆಗಳ್ಳರಿಬ್ಬರ ಬಂಧನ : 21,02 ಲಕ್ಷ ಮೌಲ್ಯದ 154.6 ಗ್ರಾಂ ಚಿನ್ನಾಭರಣ ವಶಕ್ಕೆ
ಕನ್ನಡ ಭಾಷೆಯ ನಾಮಫಲಕಗಳ ಹರಿದು ಹಾಕಿದ ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳಿ 