ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ಕೊಟ್ಟಿರುವುದು ಶೈಕ್ಷಣಿಕ ಹಿತದೃಷ್ಠಿಯಿಂದ ಸರಿಯಾದ ಕ್ರಮವಲ್ಲಾ

ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ಕೊಟ್ಟಿರುವುದು ಶೈಕ್ಷಣಿಕ ಹಿತದೃಷ್ಠಿಯಿಂದ ಸರಿಯಾದ ಕ್ರಮವಲ್ಲಾ Isn't allowing the wearing of hijab in schools and colleges the right move from an educational persp

ಲೋಕದರ್ಶನ ವರದಿ 

      ಹಾವೇರಿ 15 : ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ಕೊಟ್ಟಿರುವುದು ಶೈಕ್ಷಣಿಕ ಹಿತದೃಷ್ಠಿಯಿಂದ ಸರಿಯಾದ ಕ್ರಮವಲ್ಲಾ.2022ರಲ್ಲಿ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿುಷೇಧಿಸಿ ಸಮವಸ್ತ್ರಕ್ಕೆ ಪ್ರಾಮುಖ್ಯತೆಯನ್ನು ನೀಡಿತ್ತು.ಆದರೆ ರಾಜ್ಯ ಕಾಂಗ್ರೇಸ್ ಸರ್ಕಾರ ಹಿಂದಿನ ಸರ್ಕಾರದ ಆದೇಶವನ್ನು ರದ್ದುಪಡಿಸಿ,ಹಿಜಾಬ್ ಧರಿಸಲು ಅವಕಾಶ ನೀಡಿರುವುದು ಕೋಮು ಭಾವನೆಯನ್ನು ಪ್ರಚೋದಿಸುತ್ತಿದೆ.ಶಿಕ್ಷಣ ಸಚಿವರು ಆದೇಶವನ್ನು ಹಿಂಪಡೆಯಬೇಕೆಂದು ಬಿಜೆಪಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಸಂತೋಷ ಆಲದಕಟ್ಟಿ ಆಗ್ರಹಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು ಶೈಕ್ಷಣಿಕ ಸಂಸ್ಥೆಗಳು ಜಾತಿ,ಧರ್ಮ,ರಾಜಕೀಯ ಭೇದಭಾವಗಳಿಂದ ದೂರವಿದ್ದು ಏಕತೆ ಹಾಗೂ ಸಮಗ್ರತೆಯ ಭಾವನೆಯನ್ನು ಬೆಳೆಸುವ ಕೇಂದ್ರಗಳಾಗಬೇಕೆ ಹೊರತು, ಧರ್ಮಕ್ಕೊಂದು ವಸ್ತ್ರ ಧರಿಸಲು ಅವಕಾಶ ನೀಡಿ ಕೋಮು ಸೌಹಾರ್ದತೆಯನ್ನು ಕೆಡಿಸುವಂತಾಗಬಾರದು, ಆದರೆ ರಾಜ್ಯ ಕಾಂಗ್ರೇಸ್ ಸರ್ಕಾರ ಹಿಜಾಬ್ ಧರಿಸಲು ಅವಕಾಶ ನೀಡಿ ಬಾಲ್ಯದಿಂದಲೆ ಮಕ್ಕಳಲ್ಲಿ ಕೋಮು ವಿಭಜನೆಯ ವಿಷಬೀಜ ಭಿತ್ತಿ ತನ್ನ ತುಷ್ಠಿಕರಣ ನೀತಿಯನ್ನು ಮುಗ್ದ ಮಕ್ಕಳಲ್ಲಿಯು ಕೋಮುಭಾವನೆಯನ್ನು ಭಿತ್ತುತ್ತಿದೆ. 

      ಹಿಜಾಬ್ ಸಂಬಂಧಿಸಿದ ವಿವಾದದ ಅರ್ಜಿ ಸುಪ್ರಿಂ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿರುವಾಗ ಕರ್ನಾಟಕ ರಾಜ್ಯದ ಶಿಕ್ಷಣ ಸಚಿವರು ನ್ಯಾಯಾಂಗದ ಪ್ರಕ್ರೀಯೆಯನ್ನು ಕಡೆಗಣಿಸಿ, ಹಿಜಾಬ್ ನಿಷೇದವನ್ನು ಹಿಂಪಡೆದಿರುವುದು ನ್ಯಾಯಾಂಗ ವ್ಯವಸ್ಥೆಗೆ ಮಾಡುವ ಅಪಮಾನವಾಗಿದೆ, ಭಾರತ ದೇಶ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತಂದು ದೇಶದ ಸರ್ವ ಪ್ರಜೆಗಳು ಸಂವಿಧಾನದ ವ್ಯವಸ್ಥೆಯಲ್ಲಿ ಸಮಾನರು ಎಂದು ಕಾನೂನು ಮಾಡುತ್ತಿರುವ ಈ ಸಂಧರ್ಭದಲ್ಲಿ ಕಾಂಗ್ರೇಸ್ ಪಕ್ಷ ಹಿಜಾಬ್‌ಗೆ ಅವಕಾಶ ನೀಡುವ ಮೂಲಕ ಸಮಾಜವನ್ನು ಧರ್ಮದ ಆಧಾರದ ಮೇಲೆ ವಿಭಜನೆ ಮಾಡುತ್ತಿರುವುದು ರಾಷ್ಟ್ರ ದ್ರೋಹದ ಕೆಲಸವಾಗಿದೆ. ಶಿಕ್ಷಣ ಸಚಿವರಾದ ಮಧು ಬಂಗಾರ​‍್ಪನವರು 1 ನೇ ತರಗತಿಯಿಂದ 12 ನೇ ತರಗತಿ ಮಕ್ಕಳಿಗೆ ಹಿಜಾಬ್ ಧರಿಸಲು ಅವಕಾಶ ನೀಡಿರುವುದು ವಿದ್ಯಾರ್ಥಿಗಳ ಏಕತೆ ಹಾಗೂ ಸೌಹಾರ್ದತೆಯ ಭಾವನೆಗೆ ಧಕ್ಕೆ ಉಂಟು ಮಾಡುತ್ತದೆ.ಮುಸ್ಲಿಂ ಸಮುದಾಯದ ಮಕ್ಕಳು ಧಾರ್ಮಿಕ ಸಂಕೇತವೆಂದು ಹಿಜಾಬ್ ಧರಿಸಿ ಬಂದರೆ ಹಿಂದೂ ಸಮುದಾಯದ ಮಕ್ಕಳು ಕೇಸರಿ ಶಾಲು ಧರಿಸಿ ಬರಲು ಪ್ರಾರಂಭಿಸಿದರೆ ಆಗ ಶೈಕ್ಷಣಿಕ ವಾತಾವರಣ ನಾಶವಾಗುತ್ತದೆ.ಶಿಕ್ಷಣ ಸಚಿವರು ಆದೇಶವನ್ನು ಹಿಂಪಡೆಯಬೇಕೆಂದು ಬಿಜೆಪಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಸಂತೋಷ ಆಲದಕಟ್ಟಿ ಅವರು ಶಿಕ್ಷಣ ಸಚಿವರನ್ನು ಆಗ್ರಹಿಸಿದ್ದಾರೆ.