ಪಂಚಮಸಾಲಿ ಮೀಸಲಾತಿ ಆಯೋಗಕ್ಕೆ ಮಾಹಿತಿ ನೀಡಿ
ಲೋಕದರ್ಶನ ವರದಿ
ಹೂವಿನಹಡಗಲಿ 02: ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸುವ ವಿಚಾರವಾಗಿ ಹಿಂದುಳಿದ ವರ್ಗಗಳ ಆಯೋಗ ಅ. 7ಮತ್ತು 8ರಂದು ತಾಲೂಕಿಗೆ ಸಮೀಕ್ಷೆಗೆ ಆಗಮಿಸಲಿದ್ದು, ಸಮಾಜ ಬಾಂಧವರು ಮಾಹಿತಿ ನೀಡಬೇಕು ಎಂದು ಮೀಸಲಾತಿ ಹೋರಾಟ ಸಮಿತಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ತಿಳಿಸಿದ್ದಾರೆ.
ಪಟ್ಟಣದಲ್ಲಿ ಪತ್ರಿಕಾ ಹೇಳಿಕೆಯಲ್ಲಿ ಪಂಚಮಸಾಲಿ ಸಮುದಾಯದ ಬಹುತೇಕರು ಕೃಷಿ, ಕೂಲಿ ಅವಲಭಿಸಿದ್ದಾರೆ. ಶೇ.5ರಷ್ಟು ಸರ್ಕಾರಿ , ಆರೆ ಸರ್ಕಾರಿ ಖಾಸಗಿ ಕಂಪನಿಗಳಲ್ಲಿ ದುಡಿಯುತ್ತಿದ್ದಾರೆ. ಕೃಷಿ ಅವಲಂಬಿತ ಪಂಚಮಸಾಲಿ ಸಮುದಾಯದ ಆರ್ಥಿಕವಾಗಿ ಹಿಂದುಳಿದಿದೆ.
ಸರ್ಕಾರ 2ಎ ಮೀಸಲಾತಿ ಕಲ್ಪಿಸಿದಲ್ಲಿ ಮುಂದಿನ ಯುವ ಪೀಳಿಗೆಗೆ ಅನುಕೂಲವಾಗಲಿದೆ.ಸಮೀಕ್ಷೆ ವೇಳೆ ಸಮಾಜ ಬಾಂಧವರು ವೃತ್ತಿ ಕಾಲಂನಲ್ಲಿ ಕೃಷಿ ಮತ್ತು ಕೂಲಿ ನಮೂದಿಸಬೇಕು ಎಂದು ನಂದಿಹಳ್ಳಿ ಹಾಲಪ್ಪನವರು ಹೇಳಿದರು