ಭಾರತದ ಗಣಿತಜ್ಞರ ಕೊಡುಗೆ ಅಪಾರ: ಲಾವಣ್ಯ
ಹೂವಿನ ಹಡಗಲಿ 23: ಸಂಖ್ಯೆಗಳ ಬಗ್ಗೆ ಭಾರತದ ಗಣಿತಜ್ಞರ ಕೊಡುಗೆ ಅಪಾರ ಎಂದು ಗಣಿತ ವಿಷಯ ಶಿಕ್ಷಕಿ ಲಾವಣ್ಯ ಗುಡೇಕೋಟೆ ಹೇಳಿದರು.ಪಟ್ಟಣದ ತುಂಗಭದ್ರಾ ಪ್ರೌಢಶಾಲೆಯಲ್ಲಿ ಬುಧವಾರ ಅಂತಾರಾಷ್ಟ್ರೀಯ ಗಣಿತ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶ್ರೀನಿವಾಸ ರಾಮಾನುಜನ್ ತಮ್ಮ ಹನ್ನೆರಡನೇ ವಯಸ್ಸಿನಲ್ಲಿ ಸಂಖ್ಯೆಗಳ ಬಗ್ಗೆ ಮಹತ್ತರವಾದ ಸಂಶೋಧನೆ ಮಾಡಿರುವುದು ವಿಶೇಷ. ಪ್ರಾಚೀನ ಗಣಿತಜ್ಞರಾದ ಆರ್ಯಭಟ, ಭಾಸ್ಕರ, ವರಾಹಮಿಹಿರ ಮೊದಲಾದವರು ಗಣಿತಕ್ಕೆ ಸೇವೆ ಸಲ್ಲಿಸಿರುವುದನ್ನು ಸ್ಮರಿಸಿದರು. ಗಣಿತ ಕಬ್ಬಿಣದ ಕಡಲೆ ಅಲ್ಲ. ಮನಸ್ಸಿಟ್ಟು ಗಣಿತದ ಸೂತ್ರಗಳನ್ನು ಲೆಕ್ಕ ಬಿಡಿಸುವ ಕ್ರಮಗಳನ್ನು ಅರ್ಥೈಸಿಕೊಂಡರೆ ಅತ್ಯಂತ ಸುಲಭ ಎಂದು ತಿಳಿಸಿದರು.ಚಿತ್ರಕಲಾ ಶಿಕ್ಷಕ ದ್ವಾರಕೀಶ್ ರೆಡ್ಡಿ ಅಂಕಿ ಸಂಖ್ಯೆಗಳುವಿಶ್ವದ ಪ್ರತಿಯೊಬ್ಬರಿಗೂ ಅವಶ್ಯಕ. ರೇಖಾಗಣಿತದ ಮೂಲ ಪರಿಕಲ್ಪನೆಗಳುಎಲ್ಲರಿಗೂ ಉಪಯೋಗ ಎಂದು ತಿಳಿಸಿದರು. ಮುಖ್ಯ ಗುರುಗಳಾದ ಸುರೇಶ ಅಂಗಡಿ ಮಾತನಾಡಿ ಪ್ರಧಾನಿ ಮನಮೋಹನ್ ಸಿಂಗ್2012 ರಲ್ಲಿ ಶ್ರೀನಿವಾಸ ರಾಮಾನುಜನ್ ಅವರ ಕೊಡುಗೆ ನೆನಪಿಸಲು ಅಂತಾರಾಷ್ಟ್ರೀಯ ಗಣಿತ ದಿನಾಚರಣೆಗೆ ಚಾಲನೆ ನೀಡಿದರು.ಪೈಥಾಗರಸ್, ಯೂಕ್ಲಿಡ್,ಐಸಾಕ್ ನ್ಯೂಟನ್, ಆರ್ಕಿಮಿಡೀಸ್, ಥೇಲ್ಸ್ಗಣಿತಜ್ಞರ ಆವಿಷ್ಕಾರಗಣಿತದ ಪ್ರಗತಿಗೆ ನಾಂದಿಯಾಯಿತು ಎಂದರು.ಶಿಕ್ಷಕರಾದ ಸ್ವಾಮಿನಾಥ ರಾಮಸ್ವಾಮಿ, ವೈ ಜಯಮ್ಮ, ರೇಖಾ ಎಸ್ಅಕ್ಷರ ದಾಸೋಹದ ಹಮ್ಮಿಗಿ ಗಂಗಮ್ಮ ಬಿಇಡಿ ಪ್ರಶಿಕ್ಷಣಾರ್ಥಿಗಳು ಹಾಜರಿದ್ದರು.