ಹೂವಿನ ಹಡಗಲಿ

ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಪ್ರಗತಿ - ಶಾಸಕ ಕೃಷ್ಣನಾಯಕ

ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಪ್ರಗತಿ - ಶಾಸಕ ಕೃಷ್ಣನಾಯಕ


ಲೋಕದರ್ಶನ ವರದಿ 

ಹೂವಿನಹಡಗಲಿ: 16- ವಿಜ್ಞಾನ ತಂತ್ರಜ್ಞಾನ, ಸಂಶೋಧನೆ ಕ್ಷೇತ್ರದಲ್ಲಿ ಭಾರತ ಜಗತ್ತು ತಿರುಗಿ ನೋಡುವಂತೆ ಬೆಳೆದಿದೆ. ಶತಮಾನಗಳ ಕಾಲ ಆಳ್ವಿಕೆ ನಡೆಸಿದ್ದ ಬ್ರಿಟಿಷರನ್ನು ಮೀರಿ ಆರ್ಥಿಕತೆಯಲ್ಲಿ ಭಾರತ 4ನೇ ಸ್ಥಾನಕ್ಕೆ ಏರಿದೆ. ಸದೃಢ, ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಪ್ರತಿಯೊಬ್ಬರು ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಶಾಸಕ ಕೃಷ್ಣನಾಯಕ ಹೇಳಿದರು. ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಶನಿವಾರ ತಾಲ್ಲೂಕು ಆಡಳಿತ ಹಮ್ಮಿಕೊಂಡಿದ್ದ 80ನೇ ಸ್ವಾತಂತ್ರ್ಯ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.’ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನಗಳಿಂದ ಹೋರಾಡಿದ ಸೇನಾನಿಗಳನ್ನು ಗೌರವದಿಂದ ಸ್ಮರಿಸಿದಾಗ ಸ್ವಾತಂತ್ರ್ಯಕ್ಕೆ ಗೌರವ ಸಲ್ಲಿಸಿದಂತಾಗುತ್ತದೆ’ ಎಂದು ಶಾಸಕರು ಹೇಳಿದರು. ಧ್ವಜಾರೋಹಣ ನೆರವೇರಿಸಿ ತಹಶೀಲ್ದಾರ್ ಕೆ.ಎಂ. ಗುರುಬಸವರಾಜ ಮಾತನಾಡಿದರು.

ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ತಾ.ಪಂ. ಇಒ ಜಿ.ಪರಮೇಶ್ವರ, ಸಿಪಿಐ ಮಲ್ಲಪ್ಪ ಹೂಗಾರ, ಬಿಇಒ ಕೆ.ಮಂಗಳಾ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ.ಕೊಟ್ರಗೌಡ, ತಾಲ್ಲೂಕು ವೈದ್ಯಾಧಿಕಾರಿ ಅಶೋಕ, ಮುಖಂಡರಾದ ವಾರದ ಗೌಸ್ ಮೊಹಿದ್ದೀನ್, ಕೋಡಿಹಳ್ಳಿ ಮುದುಕಪ್ಪ, ಎನ್‌.ಕೋಟೆಪ್ಪ, ಕೋಡಿಹಳ್ಳಿ ಕೊಟ್ರೇಶ, ಬೀರಬ್ಬಿ ಬಸವರಾಜ, ಎಚ್‌.ಪೂಜಪ್ಪ, ಡಾ. ಲಕ್ಷ್ಮಣ ಲಮಾಣಿ, ಪುರಸಭೆ ಮುಖ್ಯಾಧಿಕಾರಿ ಜಿ.ಹನುಮಂತಪ್ಪ, ಪುನೀತ್ ದೊಡ್ಡಮನಿ ಉಪಸ್ಥಿತರಿದ್ದರು.ಪತ್ರಕರ್ತ ಎಸ್‌.ಎಂ.ಬಸವರಾಜ, ಸಾವಯವ ಕೃಷಿಕ ಮೈಲಾರ ಭರಮಲಿಂಗಪ್ಪ, ಸ್ಕೆಟಿಂಗ್ ಸಾಧಕ ಧನುಷ್ ಬಡಿಗೇರ ಅಶೋಕ ಲಂಬಾಣಿ ಅವರನ್ನು ಸನ್ಮಾನಿಸಲಾಯಿತು.ಪೊಲೀಸ್, ಗೃಹರಕ್ಷಕ ದಳ, ಪೌರ ಕಾರ್ಮಿಕರು, ಎನ್‌.ಸಿ.ಸಿ.ಸೇರಿದಂತೆ ಪಟ್ಟಣದ ನಾನಾ ಶಾಲಾ ವಿದ್ಯಾರ್ಥಿಗಳು ಗೌರವ ವದನೆ ಸಲ್ಲಿಸಿದರು. 


ಸುದ್ದಿ ಓದಿ