ಹೂವಿನ ಹಡಗಲಿ

ಭಾರತ ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಪುಲೆ: ದ್ವಾರಕೇಶ ರೆಡ್ಡಿ

ಭಾರತ ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಪುಲೆ: ದ್ವಾರಕೇಶ ರೆಡ್ಡಿ

ಹೂವಿನಹಡಗಲಿ 04: ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಪುಲೆ ಅವರ ಹೋರಾಟದ ಫಲವಾಗಿ ಭಾರತದಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ಸಹಕಾರ ಸಿಕ್ಕಿದೆ ಎಂದು ಚಿತ್ರಕಲಾ ಶಿಕ್ಷಕ ಎಸ್‌.ದ್ವಾರಕೇಶ ರೆಡ್ಡಿ ಹೇಳಿದರು. 

ಪಟ್ಟಣದ ತುಂಗಭದ್ರಾ ಪ್ರೌಢ ಶಾಲೆಯಲ್ಲಿ ಮಂಗಳವಾರ ಸಾವಿತ್ರಿಬಾಯಿ ಪುಲೆ ಜನ್ಮದಿನಾಚರಣೆಯಲ್ಲಿ ಮಾತನಾಡಿದ ಅವರು ಹೆಣ್ಣು ಮಕ್ಕಳು ಶಾಲೆಗೆ ಪ್ರವೇಶವಿಲ್ಲದ ದಿನಗಳಲ್ಲಿ ಸಮಾನತೆ ಅಕ್ಷರದಿಂದ ಯಾರೂ ವಂಚಿತರಾಗಬಾರದು ಎಂದು ದೃಢವಾದ ಹೆಜ್ಜೆ ಇಟ್ಟು ಮುಂದೆ ಸಾಗಿದರು.ದೇಶದಲ್ಲಿ ಮಹಿಳಾ ಸಾಧಕರಿಗೆ ಪುಲೆ ಸ್ಪೂರ್ತಿಯಾಗಿದ್ದರು ಎಂದ ಅವರು ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀಸಿದ್ದೇಶ್ವರ ಸ್ವಾಮಿಯ ಸರಳ ಜೀವನ ಬಗ್ಗೆ ಹೇಳಿದರು. 

ಶಾಲೆಯ ಮುಖ್ಯಗುರು ಸುರೇಶ ಅಂಗಡಿ ,ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಕೋಶಾಧ್ಯಕ್ಷ ಬಸಪ್ಪ ಕೆ., ಶಿಕ್ಷಕರಾದ ಸ್ವಾಮಿನಾಥ ರಾಮಸ್ವಾಮಿ,ಜಯಮ್ಮ ವೈ, ಪ್ರತಿಮಾ ಎನ್‌.ಆನಂದ ಜಿ, ಲಂಬಾಣಿ ಗಿಡ್ಡಾನಾಯ್ಕ, ಸಂತೋಷ ಕುಮಾರ ಎಸ್ ಇದ್ದರು. 



ಸುದ್ದಿ ಓದಿ