ಹೂವಿನ ಹಡಗಲಿ

ಹೂವಿನಹಡಗಲಿ : ಜೆಸಿಐ ರಾಯಲ್ ಪದಾಧಿಕಾರಿಗಳ ಪದಗ್ರಹಣ

ಹೂವಿನಹಡಗಲಿ : ಜೆಸಿಐ ರಾಯಲ್ ಪದಾಧಿಕಾರಿಗಳ ಪದಗ್ರಹಣ

ಲೋಕದರ್ಶನ ವರದಿ

ಹೂವಿನಹಡಗಲಿ : ಪಟ್ಟಣದ ಜೆಸಿಐ ರಾಯಲ್ 2023ನೇ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ನೂತನ ಸದಸ್ಯರ ಸೇರ್ಪಡೆ ಕಾರ್ಯಕ್ರಮ ಇಲ್ಲಿನ ತಾ.ಪಂ.ರಾಜೀವಗಾಂಧಿ ಸಭಾಂಗಣದಲ್ಲಿ ಸಂಜೆ 7.30ಕ್ಕೆ ಜರುಗಿತು.

ಸಾನಿಧ್ಯವಹಿಸಿದ್ದ ಗವಿಮಠದ ಡಾ.ಹಿರಿಶಾಂತವೀರ ಸ್ವಾಮೀಜಿ ಮಾತನಾಡಿ ಜೆಸಿಐ ರಾಯಲ್ ನ ಪದಾಧಿಕಾರಿಗಳು ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ,ಪರಿಸರ ಸೇರಿದಂತೆ ನಾನಾ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಮಾಜ ಮುಖಿ ಕೆಲಸ ಮಾಡುತ್ತಿದೆ ಎಂದು ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು.ಸಿಪಿಐ ಸುಧೀರ್ ಬೆಂಕಿ ಮಾತನಾಡಿದರು.

2022ನೇ ಅಧ್ಯಕ್ಷ ಕೆ.ಸಂತೋಷ, ಕಾರ್ಯದರ್ಶಿ  ಜಾನ್ ಬೆನ್ಸ್ನ್ ಅವರು ನೂತನ ಅಧ್ಯಕ್ಷ ಜಿ.ಎಫ್.ವಾರದ ನಿಯಾಜ್, ಕಾರ್ಯದರ್ಶಿ  ಜಾನ್ ಬೆನ್ಸ್ನ್ ಅವರಿಗೆ ಅಧಿಕಾರವನ್ನು ಹಸ್ತಾಂತರಿಸಲಾಯಿತು.ಹರಪನಹಳ್ಳಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಎಂಜಿನೀಯರಿಂಗ್ ನಜೀರ್ ಸಾಬ್,ಜೆಸಿಐ ರಾಯಲ್ ಮಾಜಿ ಅಧ್ಯಕ್ಷ ಎ.ಕೆ.ನಾಗರಾಜ ಮಾತನಾಡಿದರು. 2023,ವಲಯ-24ನೇ ವಲಯ ಅಧ್ಯಕ್ಷ ಅನುಷ್ಗೌಡ ನೂತನ ಅಧ್ಯಕ್ಷರಿಗೆ ಪ್ರಮಾಣ ವಚನ ಬೋಧನೆ ಮಾಡಿದರು.ಎಂ.ವಿರೇಶಸ್ವಾಮಿ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಭೋಧಿಸಿದರು.

ಈ ವೇಳೆ ಜೇಸಿ ದ್ವಾರಕೇಶ ರೆಡ್ಡಿ, ಡಾ.ಟಿ.ವೀರೇಶ, ಡಾ.ಲಕ್ಷ್ಮಣ, ಹೆಚ್.ಸ್ವಾಮಿ, ಡಾ.ಪ್ರಕಾಶ ಅಟವಾಳಗಿ, ಮಹಾಂತೇಶ ಎಸ್. ಡಾ.ಸೋಮಶೇಖರ, ಜೆಜೆಸಿ ದಿವ್ಯಶ್ರೀ ಅಟವಾಳಗಿ ಇದ್ದರು.  



ಸುದ್ದಿ ಓದಿ