ಇಟ್ಟಿಗಿಯಲ್ಲಿ ಶಾಸಕ ಪಿಟಿ.ಪಿಗೆ ಪ್ರತಿಭಟನೆ ಸ್ವಾಗತ
ಹೂವಿನಹಡಗಲಿ ಫೆ.22- ಶಾಸಕರಾದ ಪಿ.ಟಿ.ಪರಮೇಶ್ವರನಾಯ್ಕ ಮತ್ತು ಅಧಿಕಾರಿಗಳಿಗೆ ತಾಲೂಕಿನ ಇಟ್ಟಿಗಿ ಗ್ರಾಮದ ಬಿಜೆಪಿ ಸ್ಥಳೀಯ ಕಾರ್ಯಕರ್ತರು,ಕೆಲ ಗ್ರಾಮ ಪಂಚಾಯ್ತಿ ಸದಸ್ಯರು ಬುಧವಾರ ಧಿಕ್ಕಾರ ಕೂಗಿ ಪ್ರತಿಭಟನೆ ಸ್ವಾಗತ ಕೋರಿ ಕಪ್ಪು ಪಟ್ಟಿ ಪ್ರದರ್ಶಿಸಿದ್ದಾರೆ.
ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಆಸ್ಪತ್ರೆಕಟ್ಟಡ ಭೂಮಿ ಪೂಜೆಗೆ ಬಿಜೆಪಿ ಪಕ್ಷದ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ, ಸಂಸದ ವೈ.ದೇವೇಂದ್ರ್ಪ ನವರಿಗೆ ಅಭಿವೃದ್ಧಿ ಕಾಮಗಾರಿಗಳಿಗೆ ಆಹ್ವಾನ ನೀಡದೇ ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದಾರೆಂದು ಸ್ಥಳೀಯ ಬಿಜೆಪಿಯವರು ಶಾಸಕರ ವಿರುದ್ಧ ಪ್ರತಿಭಟನೆ ಮಾಡಿ ಕಪ್ಪುಪಟ್ಟಿ ಪ್ರದರ್ಶಿಸಿದ್ದಾರೆ.
ಅಭಿವೃದ್ಧಿ ಸಹಿಸದೇ ಬಿಜೆಪಿ ಪ್ರತಿಭಟನೆ : ಹೂವಿನಹಡಗಲಿ ಕ್ಷೇತ್ರದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಟಿಕೆಟ್ ಬಹಿರಂಗಗೊಂಡಿದೆ ಜತೆಗೆ ಈ ಬಾರಿ ಸರ್ವೆ ಪ್ರಕಾರ ಗೆಲುವು ನಿಶ್ಚಿತವಾಗಿದ್ದು ಕ್ಷೇತ್ರದ ಅಭಿವೃದ್ಧಿಯನ್ನು ಕೆಲ ಬಿಜೆಪಿಯವರು ಸಹಿಸದೇ ಕಪ್ಪುಪಟ್ಟಿ ಪ್ರದರ್ಶನ ಪ್ರತಿಭಟನೆ ಹಾಸ್ಯಾಸ್ಪದ ಎಂದು ಶಾಸಕರಾದ ಪಿ.ಟಿ.ಪರಮೇಶ್ವರನಾಯ್ಕ ಟೀಕಿಸಿದರು.
ತಾಲೂಕಿನ ಉತ್ತಂಗಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಇಟ್ಟಿಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 6ಹೆಚ್ಚುವರಿ ಕೊಠಡಿಗಳು ಉದ್ಘಾಟನೆ, 1ಕೋಟಿ ರೂ.ವೆಚ್ಚದಲ್ಲಿ ಆಸ್ಪತ್ರೆಗೆ ಭೂಮಿ ಪೂಜೆ ಮಾಡಲಾಗಿದೆ. ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ತುಂಗಭದ್ರಾ ನದೀನೀರನ್ನು ಸರಣಿ ಚಕ್ ಡ್ಯಾಂ ಗಳಿಗೆ ಬಿಡಲಾಗುತ್ತದೆ ಅಭಿವೃದ್ಧಿಯನ್ನು ಕೆಲವರು ಸಹಿಸದೇ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಶಾಸಕರು ಆರೋಪಿಸಿದರು. ಈ ವೇಳೆ ಮುಖಂಡರಾದ ಬಸವನಗೌಡ ಪಾಟೀಲ, ಅಟವಾಳಗಿ ಕೊಟ್ರೇಶ ಇದ್ದರು.