ಹೂವಿನ ಹಡಗಲಿ

" ಶಿಕ್ಷಣದ ಜತೆ ಮಕ್ಕಳಿಗೆ ಸಂಸ್ಕಾರ ಕಲಿಸಿ"

" ಶಿಕ್ಷಣದ ಜತೆ ಮಕ್ಕಳಿಗೆ ಸಂಸ್ಕಾರ ಕಲಿಸಿ"
Impart values ​​to children along with education


ಲೋಕದರ್ಶನ ವರದಿ 

ಹೂವಿನಹಡಗಲಿ ಸೆ.15- ಮಕ್ಕಳಿಗೆ ಪೋಷಕರು  ಶಿಕ್ಷಣದ ಜತೆಗೆ ಸಂಸ್ಕೃತಿ ಮತ್ತು  ಸಂಸ್ಕಾರ ಕಲಿಸಬೇಕಿದೆ, ಹೀಗಾದಾಗ ಮಾತ್ರ ಮಕ್ಕಳು ಪಡೆದ ಶಿಕ್ಷಣಕ್ಕೆ ಹೆಚ್ಚಿನ ಸಾರ್ಥಕತೆ ದೊರೆಯುತ್ತದೆ ಎಂದು ಗವಿಮಠದ ಡಾ.ಹಿರಿಶಾಂತವೀರ ಸ್ವಾಮೀಜಿ ತಿಳಿಸಿದರು.ಸಂಘ ಸಂಸ್ಥೆಗಳು ಶೈಕ್ಷಣಿಕ ನೆರವು ಒದಗಿಸುವ ಅಗತ್ಯವಿದೆ,” ಪಟ್ಟಣದ  ಪಂಚಮಸಾಲಿ ಸಮುದಾಯ ಭವನದಲ್ಲಿ ಪಂಚಮಸಾಲಿ ನೌಕರರ ಸಂಘ ಏರಿ​‍್ಡಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಭಾನುವಾರ ಮಾತನಾಡಿಸಂಘ ಸಂಸ್ಥೆಗಳು  ಬಡ ಮಕ್ಕಳಿಗೆ ಶೈಕ್ಷಣಿಕ ನೆರವು ಒದಗಿಸುವ ಅಗತ್ಯವಿದೆ ಎಂದರು. 

ಪಂಚಮಸಾಲಿ ಸಮಾಜದ ರಾಜ್ಯಾಧ್ಯಕ್ಷ ಸೋಮನಗೌಡ ಪಾಟೀಲ್ ಮಾತನಾಡಿದರು. ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ರವಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿ ಗಳಿಗೆ ಸನ್ಮಾನಿಸಲಾಯಿತು. ಹಿರೇಮಲ್ಲನಕೆರೆ ಮಠದ ಅಭಿನವ ಚನ್ನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪಂಚಮಸಾಲಿ ನೌಕರರ ಸಂಘದ ತಾಲೂಕು ಅಧ್ಯಕ್ಷ ವಿ.ಬಿ. ಜಗದೀಶ. ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಐಗೋಳ ಚಿದಾನಂದ, ಜಿ.ಎಸ್‌.ನಾಗರಾಜ, ಹಣ್ಣಿಶಶಿಧರ, ಮಲ್ಲಿ ಕಾರ್ಜುನ, ವಿ.ಸಿ.ಪಾಟೀಲ್, ಕೋಡಿಹಳ್ಳಿ ಮುದುಕಪ್ಪ, ಓಲಿ ಈಶಪ್ಪ ಟಿ.ಕೆ.ಬ್ಯಾಡಗಿ, ಕೇಶಪ್ಪ, ಬಸವರಾಜ, ವೀರಣ್ಣ,ಹೆಚ್‌.ಜಿ.ಪಾಟೀಲ್, ಬಿ.ಪ್ರಕಾಶ, ನೌಕರರ ಬ್ಯಾಂಕ್ ಅಧ್ಯಕ್ಷ ಎಚ್‌.ಕೆ.ಮಹೇಶ ಇದ್ದರು. 


ಸುದ್ದಿ ಓದಿ