ಹೂವಿನ ಹಡಗಲಿ

ಕುರುವತ್ತಿ ಬಳಿ ಅಕ್ರಮ ಮರಳು ದಂಧಗೆ ಕಡಿವಾಣ

ಕುರುವತ್ತಿ ಬಳಿ ಅಕ್ರಮ ಮರಳು ದಂಧಗೆ ಕಡಿವಾಣ

ಹೂವಿನಹಡಗಲಿ 01: ಅಕ್ರಮ ಮರಳು ದಂಧಗೆ ಕಡಿವಾಣಕ್ಕೆ ಇದೀಗ  ತಾಲ್ಲೂಕಿನ ಕುರುವತ್ತಿಬಳಿ ಶನಿವಾರ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳು ದಾಳಿ ನಡೆಸಿ, ತುಂಗಭದ್ರಾ ನದಿ ತೀರದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಮರಳನ್ನು ವಶಪಡಿಸಿಕೊಂಡಿ-ದ್ದಾರೆ. ದಂಧೆಕೋರರು ನದಿ ತೀರದಲ್ಲಿ ಮರಳನ್ನು ಅಕ್ರಮವಾಗಿ ಸಂಗ್ರಹಿಸಿ ಮಾರಾಟಕ್ಕೆ ಕಳಿಸುತ್ತಿದ್ದ ಮಾಹಿತಿ ಆಧರಿಸಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಲ್ಲಿ ಸಂಗ್ರಹವಿದ್ದ ಮರಳನ್ನುಮೈಲಾರ ಪ್ರವಾಸಿ ಮಂದಿರ ಅವರಣಕ್ಕೆ ಸಾಗಣೆ ಮಾಡಿ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಿದ್ದಾರೆ.ದಂಧೆಕೋರರು ಮರಳು ಸಾಗಣೆಗಾಗಿ ನದಿ ಪಾತ್ರದಲ್ಲಿ ಅನಧಿಕೃತವಾಗಿ ರಸ್ತೆ ನಿರ್ಮಿಸಿಕೊಂಡಿ-ರುವುದನ್ನು ಪತ್ತೆ ಹಚ್ಚಿದ ಅಧಿಕಾರಿಗಳು ಜೆಸಿಬಿ ಯಂತ್ರದಿಂದ ಕಂದಕ ತೋಡಿ ರಸ್ತೆಯನ್ನು ನಾಶಪಡಿಸಿದ್ದಾರೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಚಾಲಿತ ದಳದ ಕೀರ್ತಿ ಕುಮಾರ, ಭೂ ವಿಜ್ಞಾನಿ ಮಲ್ಲಯ್ಯ ಹಾಗೂ ಸಿಬ್ಬಂದಿ ದಾಳಿನಡೆಸಿದ್ದರು. 


ಸುದ್ದಿ ಓದಿ