ನಾನು ಬದುಕು ಕಲಿತಿದ್ದು ಅಪ್ಪುವಿನಿಂದ:ಜೀವನದ ಮಾರ್ಗ ತೋರಿಸಿದ ಭಾಗ್ಯವಂತ, ಭೂಮಿಗೆ ಬಂದ ಭಗವಂತ!
I learned life from my father: the fortunate one who showed me the way of life, the Lord who came to
ಲೋಕದರ್ಶನ ವರದಿ
ಮುಂಡಗೋಡ 16 : ಎಷ್ಟೋ ಸೆಲೆಬ್ರಿಟಿಗಳು ಬಂದು ಹೋಗ್ತಾರೆ, ಐಶಾರಾಮಿ ಜೀವನ ಬದುಕಿ ಸಾಗ್ತಾರೆ. ಆದರೆ ಜನರಿಗೆ ಆದರ್ಶವಾಗಿರುವ ಸ್ಟಾರ್ಗಳು ತುಂಬಾ ಕಮ್ಮಿ! ನಾನೂ ಬದುಕಿದರೆ ನನ್ನ ಹೀರೋ ತರಹ ಬದುಕಬೇಕು ಎಂದು ಯೋಚಿಸಿದಾಗ ಅದು ಸಮಾಜಕ್ಕೂ ಹಿತ ಉಂಟು ಮಾಡೋ ಹಾಗೆ ಇದ್ದರೆ ಅಂತಹವರನ್ನು ‘ಅಪ್ಪು ಅಭಿಮಾನಿಗಳು’ ಎನ್ನಬಹುದು. ಅಪ್ಪು ನಮ್ಮನ್ನು ಅಗಲಿ ವರ್ಷಗಳೇ ಉರುಳಿದವು. ಆದರೂ ಕೂಡ ಯಾವುದೇ ಚಿಕ್ಕ ಊರಿನ ಸರ್ಕಲ್, ಟೀ ಸ್ಟಾಲ್ನಿಂದ ಹಿಡಿದು ಮಹಾನಗರದ ದೊಡ್ಡ ಕಟ್ಟಡಗಳಲ್ಲೂ ಅಪ್ಪು ಫೋಟೋ ರಾರಾಜಿಸುತ್ತಿದೆ.
ಮನೆ-ಮನೆಗೂ ಅಪ್ಪು ನಗು ಖಾಯಂ ಆಗಿದೆ, ಅದರ ಜೊತೆ ಹಳ್ಳಿಯಲ್ಲಿ ಕೂಲಿ ಮಾಡುವವರಿಂದ ಹಿಡಿದು ಸಿಟಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ವರೆಗೂ ತಮ್ಮ ಜೀವನದ ಟರ್ನಿಂಗ್ ಪಾಯಿಂಟ್ ಅಂದ್ರೆ ‘ಅಪ್ಪು ಮತ್ತವರ ಅಭಿಮಾನ’ ಇಂತಹ ಅನನ್ಯ ಸಾಧಕ ಸಾಮಾನ್ಯರಲ್ಲಿ ಜೀವನೋತ್ಸಾಹ ತುಂಬಿದ ಕಥೆ ಇದು. ಕಾಲದ ಸುಳಿಯಲ್ಲಿ ಎಷ್ಟೋ ನಕ್ಷತ್ರಗಳು ಬಂದು ಹೋಗುತ್ತವೆ, ಆದರೆ ಕೆಲವು ಧ್ರುವತಾರೆಗಳು ಮಾತ್ರ ಮರೆಯಾದರೂ ದಾರಿ ತೋರಿಸುತ್ತಲೇ ಇರುತ್ತವೆ.
ಅಂತಹ ಅಪರೂಪದ ವ್ಯಕ್ತಿತ್ವವೇ ನಮ್ಮ ಪ್ರೀತಿಯ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್. ಅವರು ದೇಹತ್ಯಾಗ ಮಾಡಿ ನಾಲ್ಕು ವರ್ಷಗಳಾಗುತ್ತಾ ಬಂದರೂ, ಕನ್ನಡಿಗರ ಪಾಲಿಗೆ ಅವರು ಇಂದಿಗೂ ’ಜೀವಂತ’. ನಮ್ಮೂರು ಮುಂಡಗೋಡಿನ ಬೀದಿಗಳಿಂದ ಹಿಡಿದು ಜಗದಗಲದ ಕನ್ನಡಿಗರ ತನಕ, ಅಪ್ಪು ಎನ್ನುವುದು ಕೇವಲ ಹೆಸರಲ್ಲ; ಅದೊಂದು ಅಪ್ಪಟ ಪ್ರೀತಿಯ ಭಾವನೆ. ಬೆಳ್ಳಿಪರದೆಯ ಮೇಲೆ ಸಾಹಸಗೈದ ನಾಯಕನಿಗಿಂತ ಹೆಚ್ಚಾಗಿ,
ಸಾವಿರಾರು ಬಡಮಕ್ಕಳ ಶಿಕ್ಷಣಕ್ಕೆ ಆಸರೆಯಾದ, ಮೌನವಾಗಿಯೇ ಹಸಿದ ಹೊಟ್ಟೆಗೆ ಅನ್ನವಿಕ್ಕಿದ ಆ ’ಮನುಷ್ಯತ್ವ’ಕ್ಕೆ ಸಾವಿಲ್ಲ. ಅವರ ನಗು ನಿಷ್ಕಲ್ಮಶವಾಗಿತ್ತು, ಅವರ ಸರಳತೆ ಅಹಂಕಾರವನ್ನು ಅಳಿಸಿಹಾಕಿತ್ತು. ಅಪ್ಪು ಅವರ ಪರಮ ಅಭಿಮಾನಿ ಸಚಿನ್ ಕೊರವರ ಭಾವುಕರಾಗಿ ಹೇಳುವ ಮಾತುಗಳು ಪ್ರತಿಯೊಬ್ಬ ಅಭಿಮಾನಿಯ ಅಂತರಾಳದ ಧ್ವನಿಯಂತಿದೆ: "ಅಪ್ಪು ಬಾಸ್ ಅಂದ್ರೆ ಕೇವಲ ನಟನಲ್ಲ, ಅವರು ನಮ್ಮ ಬದುಕಿನ ದಾರೀದೀಪ. ಅವರ ಸರಳತೆ ನಮಗೆ ಜೀವನ ಪಾಠ ಹೇಳಿಕೊಟ್ಟಿದೆ. ಅವರು ನಮ್ಮನ್ನು ಅಗಲಿದ್ದಾರೆ ಎನ್ನುವುದನ್ನು ಇಂದಿಗೂ ನಂಬಲಾಗುತ್ತಿಲ್ಲ.
ಪ್ರತಿಬಾರಿ ಕನ್ನಡಿಗರ ಕಷ್ಟಕ್ಕೆ ಯಾರಾದರೂ ಧಾವಿಸಿದಾಗ, ಅಲ್ಲಿ ಅಪ್ಪು ಬಾಸ್ ಅವರ ಪ್ರೇರಣೆ ಕಾಣಿಸುತ್ತದೆ." ಅಪ್ಪು ಅವರ ಅಗಲಿಕೆ ಚಿತ್ರರಂಗಕ್ಕೆ ಮಾತ್ರವಲ್ಲ, ಇಡೀ ಮಾನವಕುಲಕ್ಕೆ ತುಂಬಲಾರದ ನಷ್ಟ. ಆದರೆ ಅವರು ಬಿಟ್ಟುಹೋದ ಸಾಮಾಜಿಕ ಮೌಲ್ಯಗಳು, ಅವರು ತೋರಿದ ಮಾನವೀಯ ಹಾದಿ ಎಂದೆಂದಿಗೂ ನಂದಾದೀಪದಂತೆ ಬೆಳಗುತ್ತಿರುತ್ತದೆ. ಅಪ್ಪುಗೆ ಸಾವಿಲ್ಲ... ಅವರು ನಮ್ಮ ನಗುವಿನಲ್ಲಿ, ನಮ್ಮ ಒಳ್ಳೆಯ ಕೆಲಸಗಳಲ್ಲಿ ಮತ್ತು ನಮ್ಮ ಉಸಿರಿನಲ್ಲಿ ಸದಾ ಜೀವಂತ!
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 