ಒಂದು ವರ್ಷದಿಂದ ಬೆಳಗಾವಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ: ಸಂಸದ ಶೆಟ್ಟರ
I have been working hard for the development of Belgaum constituency for a year: MP Shettar
ಬೆಳಗಾವಿ 09: ಕಳೆದ ಒಂದು ವರ್ಷದಿಂದ ಬೆಳಗಾವಿ ಕ್ಷೇತ್ರದ ಸಂಸದನಾಗಿ ಅನೇಕ ಕಾರ್ಯಗಳನ್ನು ಮಾಡಿದ್ದು ಮುಂದಿನ ದಿನಗಳಲ್ಲಿ ಈ ಭಾಗದ ಎಲ್ಲ ಕ್ಷೇತ್ರಗಳ ಕಾರ್ಯಗಳನ್ನು ಗುರಿ ಇಟ್ಟುಕೊಂಡು ಕೆಲಸ ಮಾಡಿ ಪ್ರಧಾನಿ ಮೋದೀಜೀ ಅವರ ಕನಸಿನ ದೇಶ ನಿರ್ಮಾಣಕ್ಕೆ ಬೆಳಗಾವಿಯಲ್ಲಿ ಅನೇಕ ಕ್ಷೇತ್ರಗಳಲ್ಲಿ ಉನ್ನತ ಕಾರ್ಯಗಳನ್ನು ಮಾಡಲಾಗುವದೆಂದು ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಸಂಸದ ಜಗದೀಶ ಶೆಟ್ಟರ ಹೇಳಿದರು.
ಅವರು ಸೋಮವಾರದಂದು ನಗರದ ಸೆಂಟ್ರಲ್ ಹೋಟೆಲನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ 11 ವರ್ಷಗಳಲ್ಲಿ ಪ್ರಧಾನಿ ಮೋದೀಜೀ ಪ್ರಧಾನಿ ಆದಾಗ 34 ಕೋಟಿ ಕಡು ಬಡವರಿದ್ದು ಈಗ 11 ವರ್ಷಗಳಲ್ಲಿ 7.5 ಕೋಟಿ ಜನರು ಬೆಳವಣಿಗೆ ಹೊಂದಿ ಬದಲಾವಣೆ ಹೊಂದಿದ್ದಾರೆ. ಆರ್ಥಿಕವಾಗಿ ಜಗತ್ತಿನ ಬೆಳವಣಿಗೆಯಲ್ಲಿ 8 ನೇ ಸ್ಥಾನದಲ್ಲಿ ಇದ್ದ ದೇಶ ಇಂದು ಜಪಾನ್ ದೇಶ ಹಿಂಡಿಕ್ಕಿ 4 ಸ್ಥಾನಕ್ಕೆ ಬಂದಿದೆ. ಈ ಒಂದು ಸಾಧನೆಗೆ ಜನಕಲ್ಯಾಣ ಯೋಜನೆಗಳಾದ ಪಿ ಎಮ್ ಅವಾಸ, ಆಯುಷ್ಯಮಾನ, ಉಜ್ವಲ್, ಜನಧನ, ಮೂಲಭೂತ ಸೌಕರ್ಯ, ಗ್ರಾಮ ಸುಧಾರಣೆ, ಪಾಕಿಸ್ತಾನದ ಮೇಲೆ ಆಪರೇಷನ್ ಸಿಂದೂರ,ಸ್ವದೇಶೀ ವಸ್ತುಗಳ ರಫ್ತು ಹೆಚ್ಚಳ ಮಾಡಿ, ನೂತನ ರೈಲು ಮಾರ್ಗಗಳ ರಚನೆ, ವಿಮಾನ ನಿಲ್ದಾಣಗಳ ಅಭಿವೃದ್ಧಿ, ರಾಜ್ಯ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ ದೇಶದ ಅಭಿವೃದ್ಧಿಗೆ ನಿರಂತರ ಮೋದೀಜೀ ಶ್ರಮಿಸಿದ್ದಾರೆ. ನಾನು ಮಾಜಿ ಸಂಸದ ದಿ. ಸುರೇಶ ಅಂಗಡಿ ಹಾಗೂ ಮಂಗಲಾ ಅಂಗಡಿ ಅವರು ತಂದಂತ ಕೆಲಸ ಕಾರ್ಯಗಳನ್ನು ಅನುಷ್ಠಾನಕ್ಕೆ ತರುತಿದ್ದೇನೆ. ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಕ ಅವರ ಗಮನಕ್ಕೆ ತಂದು ಅನೇಕ ಕೆಲಸಗಳು ಪ್ರಾರಂಭವಾಗಿದ್ದು, ಸವದತ್ತಿ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಮೊದಲು ಪ್ರಸಾದ ನಿಲಯಕ್ಕೆ 18 ಕೋಟಿ ರೂ. ಮತ್ತು ತಿರುಪತಿ ಮಾದರಿ ದೇವಸ್ಥಾನ ನಿರ್ಮಾಣಕ್ಕೆ 100 ಕೋಟಿ ಅನುಧಾನ ಕೇಂದ್ರ ಸರ್ಕಾರ ನಿದ್ದಿದ್ದು ಈ ಅನುಧಾನ ನಮ್ಮದೇ ಎನ್ನುತ್ತಿದೆ ರಾಜ್ಯ ಕಾಂಗ್ರೆಸ್ ಸರ್ಕಾರ ಏನೇ ಆಗಲಿ ಸವದತ್ತಿ ಯಲ್ಲಮ್ಮನ ದೇವಸ್ಥಾನದ ಅಭಿವೃದ್ಧಿ ಆಗಲಿ ಮತ್ತು ಬೆಳಗಾವಿಗೆ ರಿಂಗ್ ರೋಡ್ ನಿರ್ಮಾಣಕ್ಕೆ 34 ಕಿಲೋ ಮಿಟರ್ ರಸ್ತೆ ನಿರ್ಮಾಣಕ್ಕೆ 1620 ಕೋಟಿ ರೂ. ಅನುಧಾನ, 23.73 ಕಿ ಮೀ. ರಸ್ತೆ ನಿರ್ಮಾಣಕ್ಕೆ 1630 ಕೋಟಿ, 11.17 ಕಿ ಮೀ ರಸ್ತೆ ನಿರ್ಮಾಣಕ್ಕೆ 600 ಕೋಟಿ ರೂ. ಬೆಳಗಾವಿ ಖಾನಾಪುರ ದ್ವೀಪದಿ ರಸ್ತೆ ನಿರ್ಮಾಣಕ್ಕೆ 954 ಕೋಟಿ, 30 ಕಿ ಮೀ ರಸ್ತೆ ನಿರ್ಮಾಣಕ್ಕೆ, ಗೋವಾ ಚೋರ್ಲಾ ರಸ್ತೆ ನಿರ್ಮಾಣಕ್ಕೆ 54 ಕೋಟಿ ಅನುಧಾನ ಕೇಂದ್ರ ಸರ್ಕಾರ ನೀಡಿದೆ. ಬೆಳಗಾವಿಯಿಂದ ಬೆಂಗಳೂರು ರೈಲು ವ್ಯವಸ್ಥೆ ಕಲ್ಪಿಸಲು ಹೊಸ ವಂದೇ ಭಾರತ ರೈಲು ಪ್ರಾರಂಭಿಸುತ್ತೇವೆ ಎಂದು ಕೇಂದ್ರ ರೈಲು ಸಚಿವರು ಭರವಸೆ ನೀಡಿದ್ದು, ಬೆಳಗಾವಿ ಕಿತ್ತೂರು ಧಾರವಾಡ ರೈಲು ಕಾಮಗಾರಿ ಪ್ರಾರಂಭ ಮಾಡಲು ಸರ್ವೇ, ಸಮೀಕ್ಷೆ, ಭೂಸ್ವಾದೀನ ಪ್ರಕ್ರಿಯೆ ಪ್ರಾರಂಬ ಅಗಿದ್ದು ರೈತರಿಗೆ ಪರಿಹಾರ ನೀಡುವ ಪ್ರಕ್ರಿಯೆ ಪ್ರಾರಂಭ ಅಗಿದ್ದು 6 ತಿಂಗಳಲ್ಲಿ ಕಾಮಗಾರಿ ಪ್ರಾರಂಭ ಆಗಲಿದೆ. ಬೆಳಗಾವಿ - ಹುನಗುಂದ - ರಾಯಚೂರ ರಸ್ತೆ ನಿರ್ಮಾಣಕ್ಕೆ 1457 ಕೋಟಿ ಅನುಧಾನ ಬಂದಿದ್ದು. ಮುಂದಿನ ದಿನಗಳಲ್ಲಿ ಬಳ್ಳಾರಿ ನಾಲಾ ಕಾಮಗಾರಿಗೆ ಯೋಜನೆ ಮಾಡುತ್ತಿದ್ದೇವೆ. ರಾಜ್ಯ ಸರ್ಕಾರದ ತಪ್ಪಿನಿಂದ 11 ಜನ ಮುಗ್ದರು ಪ್ರಾಣ ಕಳೆದುಕೊಂಡಿದ್ದು ಮುಖ್ಯ ಮಂತ್ರಿ ಆಗಿ ಸಿದ್ರಾಮಯ್ಯ, ಉಪ ಮುಖ್ಯ ಮಂತ್ರಿ ಡಿ ಕೆ ಶಿವಕುಮಾರ, ಗ್ರಹ ಸಚಿವರಿಗೆ ಇವರಿಗೆ ರಾಜ್ಯ ಅಳುವ ಯೋಗ್ಯತೆ ಇಲ್ಲಾ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಯಾಸ ಎನ್ ಜಿ ಒ ಅಧ್ಯಕ್ಷ ವನಿಷ ಗುಪ್ತ, ಶಾಸಕ ಅಭಯ ಪಾಟೀಲ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸುಭಾಷ ಪಾಟೀಲ, ರಾಜ್ಯ ಉಪಾಧ್ಯಕ್ಷ ಅನಿಲ ಬೆನಕೆ, ರಾಜ್ಯ ಪ್ರಧಾನ ಕಾರ್ಯದರ್ಶಿ ಎಮ್ ಬಿ ಜಿರಲಿ, ಮಾಜಿ ಶಾಸಕರಾದ ಸಂಜಯ ಪಾಟೀಲ, ವಿಶ್ವನಾಥ ಪಾಟೀಲ, ಎಮ್ ಎಲ್ ಮುತ್ತೇನ್ನವರ, ಡಾ. ರವಿ ಪಾಟೀಲ, ಮುರುಘೇಂದ್ರಗೌಡ ಪಾಟೀಲ, ಮಹಾನಗರ ಅಧ್ಯಕ್ಷ ಗೀತಾ ಸುತಾರ, ಹಣಮಂತ ಕೊಂಗಾಲಿ, ಮಾಧ್ಯಮ ವಕ್ತಾರ ಸಚಿನ ಕಡಿ ರಾಷ್ಟ್ರೀಯ ಪದಾಧಿಕಾರಿಗಳು, ಜಿಲ್ಲಾ ಪದಾಧಿಕಾರಿಗಳು, ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
ಒಬ್ಬರಿಗೆ ಒಂದೇ ಹುದ್ದೆ ಕಾಂಗ್ರೆಸ್ ಪಕ್ಷದ ನಿಯಮದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ : ಸಚಿವ ಸತೀಶ ಜಾರಕಿಹೊಳಿ
ಖಾತೆ ಮುಟ್ಟುಗೋಲಾದರೂ ಶಿವಂ ಸಂಸ್ಥೆಗೆ ಜನರಿಂದ ಇನ್ನೂ ದುಡ್ಡು ಠೇವಣಿ : ವಂಚನೆ ಜಾಲದಿಂದ ದೂರ ಇರಿ, ಜನರಿಗೆ ಸಿಐಡಿ ಡಿಐಜಿಪಿ ಗುಳೇದ್ ಮನವಿ
ಬಹುಕೋಟಿ ಹಣ ವಂಚನೆ : ಆದಿತ್ಯರಾಜ್ ಕೇಸು ಸಿಐಡಿಗೆ, ಸಿಇಓ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ಏರ್ಪೋರ್ಟ್ ಗಳಿಗೆ ಮಾಹಿತಿ ರವಾನೆ
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ 