ಹಿಂದೂ ಸಮ್ಮೇಳನ ಶೋಭಾ ಯಾತ್ರೆ ಗೆ ಬೃಹತ್ ಶಕ್ತಿ ಪ್ರದರ್ಶನ
ಹೂವಿನಹಡಗಲಿ 01: ಪಟ್ಟಣದಲ್ಲಿ ಹಿಂದೂ ಸಮ್ಮೇಳನ ಅಂಗವಾಗಿ ಶನಿವಾರ ಅದ್ಧೂರಿ ಬೃಹತ್ ಶೋಭಾ ಯಾತ್ರೆ ಮೆರವಣಿಗೆ ಜರುಗಿತು.ಮೈಲಾರಲಿಂಗೇಶ್ವರ ದೇವಸ್ಥಾನ ದಿಂದ ಆರಂಭವಾದ ಭವ್ಯ ಶೋಭಾಯಾತ್ರೆ ಮದಲಗಟ್ಟಿ ವೃತ್ತ, ಮುಖ್ಯ ರಸ್ತೆಯ ಮಾರ್ಗವಾಗಿ ಲಾಲ್ ಬಹದ್ದೂರ್ ಶಾಸ್ತಿ ವೃತ್ತ, ಕಿತ್ತೂರು ರಾಣಿ ಚನ್ನಮ್ಮ ವೃತ್ತ ಮೂಲಕ ತಾಲ್ಲೂಕು ಕ್ರೀಡಾಂಗಣ ತಲುಪಿತು. ಭಾರತಮಾತೆ ಧರ್ಮದ ದಾರ್ಶನಿಕರು, ಸಂತರ ವೇಷಭೂಷಣ ತೊಟ್ಟಿದ್ದ ಮಕ್ಕಳನ್ನು ಟ್ರಾಕ್ಟರ್ ನಲ್ಲಿ ಮೆರವಣಿಗೆ ಮಾಡಲಾಯಿತು. ಹಿಂದೂಮಹಿಳೆಯರು ಪೂರ್ಣಕುಂಭದೊಂದಿಗೆ ಪಾಲ್ಗೊಂಡಿದ್ದರು. ಸಮಾಳ, ನಂದಿಕೋಲ, ಸಮಾಳ, ಚಂಡ ವಾದ್ಯ, ಹಲಗೆ, ಡೊಳ್ಳು ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ಮೆರವಣಿಗೆಯ ಮೆರಗು ಹೆಚ್ಚಿಸಿದ್ದವು.
ಶೋಭಾಯಾತ್ರೆ ಸಾಗುವ ಮಾರ್ಗಹಾಗೂ ಪಟ್ಟಣದ ಮುಖ್ಯ ವೃತ್ತಗಳಲ್ಲಿ ಕೇಸರಿ ಧ್ವಜ, ಬಂಟಿಂಗ್ಸ್ ಗಳನ್ನು ಕಟ್ಟಿದ್ದರಿಂದ ಮಲ್ಲಿಗೆ ನಗರಿ ಕೇಸರಿಮ-ಯವಾಗಿತ್ತು.ಶಾಸಕ ಕೃಷ್ಣನಾಯ್ಕ. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಸ್. ಸಂಜೀವರೆಡ್ಡಿ, ಸಮ್ಮೇಳನ ಆಚರಣೆ ಸಮಿತಿ ಅಧ್ಯಕ್ಷ ಎಂ.ಪರಮೇಶ್ವರ್ಪ, ಕಾರ್ಯಾಧ್ಯಕ್ಷ ಕೋಡಿಹಳ್ಳಿ ಮುದುಕಪ್ಪ, ಮುಖಂಡರಾದ ಓದೋ ಗಂಗಪ್ಪ, ಎಚ್.ಪೂಜಪ್ಪ, ಈಟಿ ಲಿಂಗರಾಜ, ಮಲ್ಲಿಕಾರ್ಜುನ ಪೂಜಾರ, ಡಾ. ಲಕ್ಷ್ಮಣಲಮಾಣಿ, ಮಂಜುನಾಥ ಜೈನ್, ಹಣ್ಣಿ ಶಶಿಧರ, ಕೋಡಿಹಳ್ಳಿ ಕೊಟ್ರೇಶ, ಕೆ.ಪತ್ರೇಶ, ಪುನೀಶ್ ದೊಡ್ಡಮನಿ, ಜಿ. ಶಿವರಾಜ್ ಇತರರು ಭಾಗವಹಿಸಿದ್ದರು. ತಾಲ್ಲೂಕಿನ ವಿವಿಧ ಗ್ರಾಮಗಳ ಅಪಾರ ಜನರು ಶೋಭಾಯಾತ್ರ ಮೆರವಣಿಯಲ್ಲಿ ಪಾಲ್ಗೊಂಡಿದ್ದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಾಹ್ನವಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ಕಲ್ಪಿಸಲಾಗಿತ್ತು.