ಹೂವಿನ ಹಡಗಲಿ

ಫೆ, 28ಕ್ಕೆ ಬೃಹತ್ ಹಿಂದೂ ಸಮ್ಮೇಳನ

ಫೆ, 28ಕ್ಕೆ  ಬೃಹತ್ ಹಿಂದೂ ಸಮ್ಮೇಳನ

ಹೂವಿನ ಹಡಗಲಿ  23:  ಹಿಂದೂ ಸಮ್ಮೇಳನ ಅಂಗವಾಗಿ ಫೆ.28ರಂದು ಪಟ್ಟಣದ ಪ್ರಮುಖ ರಸ್ತೆಯಲ್ಲಿ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಅದ್ಯಕ್ಷರು,ವಕೀಲರಾದ ಎಂ.ಪರಮೇಶ್ವರ​‍್ಪ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿ ಗಾರರೊಂದಿಗೆ ಮಾತನಾಡಿ  ಹಿಂದೂ ಧರ್ಮದ ಜಾಗೃತಿ ಗಾಗಿ ಫೆ.28ರಂದು ಪಟ್ಟಣದ ತಾಲೂಕು ಕ್ರೀಡಾಂಗಣ ದಲ್ಲಿ ಮಧ್ಯಾಹ್ನ 3ಗಂಟೆಗೆ ಹಮ್ಮಿಕೊಳ್ಳಲಾಗಿದೆ  ಎಂದರು.  ಗೌರವಾಧ್ಯಕ್ಷ ಬೀರಬ್ಬಿ ಬಸವರಾಜ, ಕಾರ್ಯಧ್ಯಕ್ಷ  ಕೋಡಿಹಳ್ಳಿ ಮುದುಕಪ್ಪ,  ಹಿಂದೂ ಸಮ್ಮೇಳನ ರಾಷ್ಟ್ರ ಜಾಗೃತಿಯ ಕುರಿತು  ಸಭೆಯಲ್ಲಿ  ಮಾತನಾಡಿದರು.

ಉಪಾಧ್ಯಕ್ಷ ಹೆಚ್‌. ಪೂಜಪ್ಪ ಮಾತನಾಡಿ ಹಿಂದೂ ಸಮ್ಮೇಳನದಲ್ಲಿ 500ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಲಿದ್ದಾರೆ ಎಂದರು.  ಸಮ್ಮೇಳನ ಸಂಚಲನ ಸಮಿತಿ ಅಧ್ಯಕ್ಷ  ಪೂಜಾರ ಮಲ್ಲಿಕಾರ್ಜುನ, ಕಾರ್ಯದರ್ಶಿ  ಡಾ. ಲಕ್ಷ್ಮಣ್ ನಾಯ್ಕ್‌, ಸಹ ಕಾರ್ಯದರ್ಶಿ ಈಟಿ. ಲಿಂಗರಾಜ,  ಖಜಾಂಚಿ  ಮಂಜುನಾಥ ಜೈನ್, ಸಮಿತಿಯ ಮುಖಂಡರಾದ ಹಣ್ಣಿ ಶಶಿಧರ, ತಳಕಲ್ ಕರಿಬಸಪ್ಪ, ವಿಲ್ಸನ್ ಸ್ವಾಮಿ, ಆರ್‌. ಟಿ. ನಾಗರಾಜ, ಜೆ. ಶಿವರಾಜ, ಲಂಕೇಶ್, ಪರಶುರಾಮ್ ಕಲಾಲ್, ಅಕ್ಕಸಾಲಿ ಹನುಮೇಶ್, ಈಶ್ವರಗೌಡ, , ಹಿಂದೂ ಕಾರ್ಯಕರ್ತರು ಇದ್ದರು. ಹಿಂದೂ ಸಮ್ಮೇಳನದ ಸಹ ಸಂಚಾಲಕ  ಪುನೀತ್ ದೊಡ್ಮನೆ  ಕಾರ್ಯಕ್ರಮವನ್ನು ನಿರ್ವಹಿಸಿದರು. 


ಸುದ್ದಿ ಓದಿ