ಹೂ ಬಯಲ ಮಾಮರ ಪುಸ್ತಕ ಲೋಕಾರ್ಪಣೆ
ಹೂವಿನಹಡಗಲಿ 20: ಮಲ್ಲಿಗೆ ನಾಡಿನ ಪ್ರಗತಿಪರ ಚಳುವಳಿ ಮುನ್ನೆಡಿಸಿದ ಕೀರ್ತಿ ಬಂಡಾಯ ಸಾಹಿತಿ ಶೇಷಗಿರಿರಾವ್ ಹವಾಲ್ದಾರ್ ರವರಿಗೆ ಸಲ್ಲುತ್ತದೆ ಎಂದು ಹೋರಾಟಗಾರರಾದ ಜಂಬಯ್ಯನಾಯ್ಕ್ ಹೇಳಿದರು.
ಪಟ್ಟಣದ ಮಲ್ಲಿಗೆ ಸಭಾಂಗಣದಲ್ಲಿ ರವಿವಾರ ಸಮಭಾವ ಪ್ರಕಾಶನ ಆಯೋಜಿಸಿದ್ದ ಶೇಷಗಿರಿರಾವ್ ಹವಾಲ್ದಾರ್ ರವರ ಬದುಕು ಬರಹಗಳ ಸ್ಮೃತಿ ಚಿತ್ರಣ ಹೂ ಬಯಲ ಮಾಮರ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಕಾಮ್ರೇಡ್ ಎಸ್ ಎಸ್ ಹಿರೇಮಠರು ಹಾಗೂ ಶೇಷಗಿರಿರಾವ್ ಹವಾಲ್ದಾರ್ ಎಡಪಂಥೀಯ ವಿಚಾರಧಾರೆಯ ಜೀವಸೆಲೆಯನ್ನು ಬಳ್ಳಾರಿ ಜಿಲ್ಲೆಯ ಪಶ್ಚಿಮ ತಾಲೂಕುಗಳಲ್ಲಿ ಬೆಳೆಸಿದರು.ಬಂಡಾಯ ಸಾಹಿತ್ಯ ಸಂಘಟನೆ
ಸಮುದಾಯ, ಭಾರತ ಜ್ಞಾನ ವಿಜ್ಞಾನ ಸಮಿತಿ, ಅನೇಕ ಜನಪರ ಸಂಘಟನೆಗಳ ಮೂಲಕ ಜನಚಳುವಳಿ
ಜೀವಂತವಾಗಿಟ್ಟಿದ್ದರು ಎಂದರು.ಕುಷ್ಟಗಿಯ ಲೇಖಕ ಪ್ರಮೋದ್ ತುರ್ವಿಹಾಳ, ಸಂಡೂರಿನ ಬಿ ಶ್ರೀನಿವಾಸ ಕೃತಿ ಪರಿಚಯಿಸಿದವರು.ನಾಗಭೂಷಣ ಹವಾಲ್ದಾರ್ ಮಮತಾ ಹವಾಲ್ದಾರ್ ಸಮತಾ ಹವಾಲ್ದಾರ್ ಎಲ್ ಖಾದರಭಾಷಾ
ಕಲಾವತಿ ಹವಾಲ್ದಾರ ಉಪಸ್ಥಿತರಿದ್ದರು.ನಿವೃತ್ತ ಹಿಂದಿ ಪಂಡಿತ ಟಿ ವಿರುಪಾಕ್ಷಪ್ಪ ಅಧ್ಯಕ್ಷತೆ ವಹಿಸಿದ್ದರು.
ರವಿ ಯಲ್ಲಪ್ಪನವರ್ ಪ್ರಾರ್ಥಿಸಿದರು. ಗಣೇಶ ಹವಾಲ್ದಾರ್ ಸ್ವಾಗತಿಸಿದರು.ಬಿ ಪೀರ್ ಬಾಷಾ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಮಪ್ಪ ಕೋಟಿಹಾಳ ವಂದಿಸಿದರು.ಸುರೇಶ ಅಂಗಡಿ ನಿರೂಪಿಸಿದರು.ಹಿರಿಯ ಕವಿಗಳಾದ ಹುರಕಡ್ಲಿ ಶಿವಕುಮಾರ್, ಮೇಟಿ ಕೊಟ್ರಪ್ಪ, ಡಿ ರಾಮನಮಲಿ,ಇಸ್ಮಾಯಿಲ್ ಎಲಿಗಾರ್,ಡಾ ಅಂಜನಾ ಕೃಷ್ಣಪ್ಪ ತೋ ಮ ಶಂಕ್ರಯ್ಯ, ಪ್ರಕಾಶ್ ಮಲ್ಕಿಒಡೆಯರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಹಗರಿಬೊಮ್ಮನಹಳ್ಳಿ ಸಮುದಾಯ ವತಿಯಿಂದ ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಮಾಡಲಾಯಿತು.ಸುಗಮ ಸಂಗೀತ: ನಂತರ ನಡೆದ ಸುಗಮ ಸಂಗೀತ ಕಾರ್ಯಕ್ರಮದಲ್ಲಿ ನಯನ ಅಳವಂಡಿ, ಜಯಶ್ರೀ ಅಳವಂಡಿ, ಗುಲಾಬಜಾನ್ ನಗೀನಾ ಬಾವಾಜಿ, ಶ್ರೀಲತಾ ಕೆಂಪಕಟ್ಟಿ, ಕಲಾವತಿ ಹವಾಲ್ದಾರ್,ಸಮತಾ ಹವಾಲ್ದಾರ್ ಗಾಯನ ಜನಮನ ಸೆಳೆಯಿತು.ಶಿಕ್ಷಕ ಅಕ್ಕಸಾಲಿ ಚಂದ್ರಪ್ಪ ತಬಲಾ ಸಾಥ್ ನೀಡಿದರು.