ಮಾಳಿ ಸಮಾಜದವರಿಂದ ಸನ್ಮಾನ

ಮಾಳಿ ಸಮಾಜದವರಿಂದ ಸನ್ಮಾನ Honored by the Mali community

ರನ್ನ ಬೆಳಗಲಿ   06:   ರನ್ನ ಬೆಳಗಲಿಯ ಪಿಕೆಪಿಎಸ್ ನ ನೂತನ ಅಧ್ಯಕ್ಷರು ಆದ  ನಿಂಗಪ್ಪ ಆರೇನಾಡ್ ಮತ್ತು  ಉಪಾಧ್ಯಕ್ಷರು ಆದ ಯಮನಪ್ಪ ಚಂದಪ್ಪನವರ ಇವರಿಗೆ  ರನ್ನ ಬೆಳಗಲಿಯ ಮಾಳಿ ಸಮಾಜದ ಹಿರಿಯರು ಸನ್ಮಾನ ಮಾಡಿದರು. ನಂತರದಲ್ಲಿ  ಸದಾಶಿವ್ ಗುರೂಜಿ ಅವರು ಮಾತನಾಡಿ ನಿಮ್ಮಿಂದ ಲೋಕ ಕಲ್ಯಾಣ ಕಾರ್ಯಗಳು ಅಂದರೆ ಬಡವರ ಮತ್ತು ರೈತರಿಗೆ ಹಾಗೂ ಶಿಕ್ಷಣಕ್ಕಾಗಿ ಅನುಕೂಲವಾಗುವಂತ ಸದಾ ಕಾರ್ಯಗಳನ್ನು ಮಾಡಿರಿ ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಹಿರಿಯರಾದ ಸದಾಶಿವ ಗುರೂಜಿ, ಮಹಾಲಿಂಗ ಲಾಗದವರ, ಹಣಮಂತ ಇಟಾಣಿ, ಜೊತೆಪ್ಪ ಕಡಪಟ್ಟಿ, ಧರೆಪ್ಪ ಮಂಟೂರ, ಮಹಾದೇವ ಚವಲಿ, ಬಸವರಾಜ ರಾವಲೋಜಿ, ಭೀಮಶಿ ಕತ್ತಿ, ಸದಾಶಿವ ಹೊಸಟ್ಟಿ, ರಾಮಲಿಂಗ ಯಾದವಾಡ, ಮುತ್ತು ಕುಲಗೋಡ, ಅರ್ಜುನ್ ಕುಲಗೋಡ, ಭೀಮಶಿ ಜಂಬಗಿ, ಪರಮಾನಂದ ಮಾಳಿ, ಶ್ರೀಶೈಲ ಕುಲಗೋಡ, ಪರಸು ಕುಡಚಿ ಹಾಜರಿದ್ದರು.