ರೋಡ್ ಸೈಕ್ಲಿಂಗ್ ಚಾಂಪಿಯನಶಿಪ್‌ನಲ್ಲಿ ಹೊನ್ನಪ್ಪ ಧರ್ಮಟ್ಟಿ ರಾಷ್ಟ್ರಮಟ್ಟಕ್ಕೆ ಆಯ್ಕೆ
Honnappa Dharmatti selected for national level in road cycling championship
ಲೋಕದರ್ಶನ ವರದಿ
ರೋಡ್ ಸೈಕ್ಲಿಂಗ್ ಚಾಂಪಿಯನಶಿಪ್‌ನಲ್ಲಿ ಹೊನ್ನಪ್ಪ ಧರ್ಮಟ್ಟಿ ರಾಷ್ಟ್ರಮಟ್ಟಕ್ಕೆ ಆಯ್ಕೆ
ಮಹಾಲಿಂಗಪುರ 08: ಬೆಳಗಾವಿಯಲ್ಲಿ ನಡೆದ 2025-26 ನೇ ಸಾಲಿನ 16 ನೆಯ ರಾಜ್ಯಮಟ್ಟದ ರೋಡ ರೋಡ್ ಸೈಕ್ಲಿಂಗ ಚಾಂಪಿಯನಶಿಪಿನಲ್ಲಿ ದ್ವಿತೀಯ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಹೊನ್ನಪ್ಪ ಚಿದಾನಂದ ಧರ್ಮಟ್ಟಿ ಜಿಲ್ಲೆಗೆ ಕೀರ್ತಿ ತಂದಿದ್ದಾನೆ. ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಕೊನೆಯ ಪುಟ್ಟ ಗ್ರಾಮ ಮಾರಾಪುರದ ರೈತಕುಟುಂಬದ ಕುಡಿ ಹೊನ್ನಪ್ಪ ಧರ್ಮಟ್ಟಿ ಚಿಕ್ಕಂದಿನಿಂದಲೂ ಸೈಕಲ್ ಹೊಡೆಯುವದೆಂದರೆ ಆತನಿಗೆ ಅಚ್ಚುಮೆಚ್ಚು ಅದೇ ಸೈಕಲ್ ಪ್ರೀತಿ ಇಂದು ಆತನನ್ನು ರಾಜ್ಯ ಮಟ್ಟದ ರೋಡ ಸೈಕ್ಲಿಂಗಲೂ ಪಾರಮ್ಯ ಮೆರೆದು ದ್ವಿತೀಯ ಸ್ಥಾನ ಪಡೆದುಕೊಂಡು ಜಿಲ್ಲೆ ಹಾಗೂ ತಾನು ಹುಟ್ಟಿದ ಊರಿಗೆ ಕೀರ್ತಿ ತಂದಿದ್ದಾನೆ.
ಈ ಹಿಂದೆಯೂ ಕೂಡಾ ವಿಜಯಪುರದಲ್ಲಿ ನಡೆದ 28 ನೇ ರಾಷ್ಟ್ರ ಮಟ್ಟದ ರೋಡ ಸೈಕ್ಲಿಂಗದಲ್ಲಿ ಉತ್ತಮ ಪ್ರದರ್ಶನ ನೀಡಿ 14 ರ ವಯೋಮಿತಿಯ ಬಾಲಕರ ವಿಭಾಗದಲ್ಲಿ ಬೆಳ್ಳಿ ಪದಕ ಗೆದಿದ್ದ ಹೆಮ್ಮೆಯ ಹುಡುಗ. ಈ ಸಂದರ್ಭದಲ್ಲಿ ಮಾತನಾಡಿದ ಹೊನ್ನಪ್ಪ ನನಗೆ ಸೈಕ್ಲೀಂಗನಲ್ಲಿಯೇ ಹೆಚ್ಚಿನ ಸಾಧನೆ ಅಂದರೆ ರಾಷ್ಟ್ರಮಟ್ಟದಲ್ಲಿ ಸೈಕ್ಲೀಂಗ ಮಾಡಿದ ನಾನು ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಸಹ ಸೈಕ್ಲೀಂಗನಲ್ಲಿ ಉತ್ತಮ ಸಾಧನೆ ಮಾಡಬೇಕೆಂಬುದು ನನ್ನ ಗುರಿಯಾಗಿದೆ ಆದರೆ ನನ್ನ ಹತ್ತಿರ ಉತ್ತಮ ಗುಣಮಟ್ಟದ ಅತ್ಯಾದುನಿಕ ಸೈಕಲ ಇರದೆ ಇರುವುದು ನನ್ನ ಗುರಿ ತಲುಪಲು ತೊಂದರೆ ಮಾಡಿದೆ. ಆದ್ದರಿಂದ ನನಗೆ ಉತ್ತಮ ಸೈಕಲ್ ಸಿಕ್ಕರೆ ಇದಕ್ಕೂ ಮೀರಿದ ಶ್ರಮವಹಿಸಿ ಇನ್ನೂ ಹೆಚ್ಚು ಹೆಚ್ಚು ಸಾಧನೆ ಮಾಡಿ ನಮ್ಮ ನಮ್ಮ ಊರು, ತಂದೆ-ತಾಯಿಯರ ಹೆಸರಿಗೆ ಗೌರವಬರುವ ಹಾಗೆ ಸಾಧೆನ ಮಾಡಬೇಕು ಎನ್ನುವುದು ನನ್ನ ಮಹತ್ವಾಕಾಂಕ್ಷೆಯಾಗಿದೆ. ಕಾರಣ ನನ್ನ ಈ ಸಾಧೆನೆ ನನ್ನ ತಂದೆ-ತಾಯಿಯರ ಮಾರ್ಗದರ್ಶನ ಮತ್ತು ನನ್ನ ಕೋಚ ನೀಡಿರುವ ಪಾಠವೇ ಕಾರಣ ಅದಕ್ಕೆ ನಾನು ಅವರಿಗೆ ಎಂದು ಆಭಾರಿಯಾಗಿದ್ದೇನೆ ಎಂದರು. ನಾಡಿನ ಹೆಮ್ಮೆಯ ಪುತ್ರನಿಗೆ. ಜಿಲ್ಲೆಯ ಕ್ರೀಡಾ ಪ್ರೇಮಿಗಳು, ಊರಿನ ಗುರು ಹಿರಿಯರು ಹಾಗೂ ಹೊನ್ನ ಕಿರಣ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಚಿದಾನಂದ ಧರ್ಮಟ್ಟಿ ಹಾಗೂ ಸಿಬ್ಬಂದಿ ಅಭಿನಂದನೆ ಸಲ್ಲಿಸಿ ಗೌರವಿಸಿದ್ದಾರೆ.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 