ಶನೈಶ್ವರ ದೇವಸ್ಥಾನದಲ್ಲಿ ಲೋಕ ಕಲ್ಯಾಣಕ್ಕಾಗಿ ಹೊಮ ಹವನ
Homa Havan for the welfare of the world at Shanaishwar Temple
ಕಾಗವಾಡ 27: ಸಮೀಪದ ಮಧಬಾವಿ ಗ್ರಾಮದ ಪ್ರಸಿದ್ಧ ಉತ್ತರ ಕರ್ನಾಟಕದ ವಿಶೇಷ ದೇವಸ್ಥಾನವಾದ ಶ್ರೀ ಧನಶ್ರೀ ಶನೇಶ್ವರ ದೇವಸ್ಥಾನದಲ್ಲಿ ವಿಶೇಷ ಬಾದಮಿ ಅಮವಾಸ್ಯೆ ನಿಮಿತ್ತ ಹಾಗೂ ಶನಿ ಜಯಂತಿ ಅಂಗವಾಗಿ ಲೋಕ ಕಲ್ಯಾಣಕ್ಕಾಗಿ ಧಾರ್ಮಿಕ ಕಾರ್ಯಕ್ರಮ ನಡೆದವು.
ದೇವಸ್ಥಾನ ಪ್ರಧಾನ ಅರ್ಚಕ ಪ್ರವೀಣ ಶಾಸ್ತ್ರೀ ಹಿರೇಮಠ ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವು ಬಾದಮಿ ಅಮವಾಸ್ಯೆ ನಿಮಿತ್ತ ಹಾಗೂ ಶನಿ ಜಯಂತಿ ಲೋಕ ಕಲ್ಯಾಣಕ್ಕಾಗಿ ಸಾಮೂಹಿಕವಾಗಿ ಬೆಳಿಗ್ಗೆ ಪ್ರಾರ್ಥಕಾಲದಲ್ಲಿ ಶನಿ ದೇವರಿಗೆ ತೈಲಾಭಿಷೇಕ,ಪಂಚಾಮೃತ ಅಭಿಷೇಕ, ತೈಲಾಭಿಷೇಕ, ಫಲ ಪಂಚಾಮೃತ ಅಭಿಷೇಕಗಳನ್ನು ನಡೆಸಿ ನಂತರ ಗಣ ಹೊಮ, ನವಗ್ರಹ ಹೊಮ, ಮಹಾ ಮೃತುಂಜಯ ಹೊಮ,ಶನಿ ಹೊಮ ಅವನ್ನು ನೇರವೇರಿಸಿ ಸಾರ್ವಜನಿಕವಾಗಿ ದೇವರು ಓಳ್ಳಯದನ್ನು ಮಾಡಲಿ ಎಂದು ಪ್ರಾರ್ಥನೆ ಮಾಡಲಾಯಿತು.
ಸನಾತನ ಧರ್ಮದ ವಿಶೇಷತೆ ಎನೆಂದರೆ ದೇವತೆಗಳನ್ನು ಆರಾಧನೆ ಮತ್ತು ಪರೋಪಕಾರ ಎಷ್ಟು ನಾವುಗಳು ದೇವತೆಗಳನ್ನು ಆರಾಧನೆ ಮಾಡುತ್ತಾ ಬರುತ್ತೆವೊ ಅಷ್ಟು ನಮಗೆ ಪುಣ್ಯ ಫಲಗಳು ಪ್ರಾಪ್ತಿ ಯಾಗುತ್ತದೆ ಹೋಗುತ್ತವೆ ಬರುವಂತಹ ದಿನಗಳು ಜನರಿಗೆ ಸುಖ ಶಾಂತಿ ನೆಮ್ಮದಿ ಕರುಣಿಸಲಿ ಎಂದು ಕೇಳಿಕೊಳ್ಳುತ್ತೆನೆ ಎಂದು ಹೇಳಿದರು.
ಶನಿ ದೇವರಿಗೆ ಅಮವಾಸ್ಯೆ ನಿಮಿತ್ತ ವಿಶೇಷ ದಾಳಿಂಬೆ ಹಣ್ಣಿನ ಅಲಂಕಾರ ಮಾಡಲಾಗಿತ್ತು ಹೊಮ ಹವನ ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ಜಿಲ್ಲೆಗಳ ಹಾಗೂ ನೆರೆ ಮಹಾರಾಷ್ಟ್ರ ರಾಜ್ಯದ ಸುಮಾರು ಐದು ಸಾವಿರ ಭಕ್ತರು ಪಾಲ್ಗೊಂಡ ಪುನಿತರಾದರು.
ಈ ವೇಳೆ ಧರ್ಮಾಧಿಕಾರಿ ಮಾರುತಿ ಭಂಡಾರ ಪ್ರಧಾನ ಅರ್ಚಕರು ಎಸ್ ಪ್ರವೀಣ್ ಶಾಸ್ತ್ರಿ ಹಿರೇಮಠ, ಇಂದುಧರಸ್ವಾಮಿ, ಶಾಂತೀವೀರಯ್ಯ ಹಿರೇಮಠ ಹಿರೇಮಠ, ಫಕ್ಕೀರಯ್ಯ ಹಿರೇಮಠ, ಮಹೇಶ್ ಹೆಬ್ಬಾಳಮಠ ಸೋಮಯ್ಯ ಹಿರೇಮಠ, ವಿಠಲ್ ಭಂಡಾರಿ, ರಮೇಶ ಭಂಡಾರಿ ನಂದಕುಮಾರ, ಅಜಟರಾವ, ಮೋಹನ್ ದೇವಮಾನಿ ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಇದ್ದರು.
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ 