ಹೂವಿನ ಹಡಗಲಿ

ಹೊಳಗುಂದಿ ಗ್ರಾ.ಪಂ.ತೆರಿಗೆ ವಸೂಲಾತಿ ಅಭಿಯಾನ

ಹೊಳಗುಂದಿ ಗ್ರಾ.ಪಂ.ತೆರಿಗೆ ವಸೂಲಾತಿ ಅಭಿಯಾನ

 ಹೂವಿನಹಡಗಲಿ 24: ತಾಲೂಕಿನ ನಾನಾಗ್ರಾಪಂಗಳಲ್ಲಿ ವಸೂಲಾತಿ ಅಭಿಯಾನದ ಹಿನ್ನೆಲೆಯಲ್ಲಿ ಗ್ರಾಪಂ ಪಿಡಿಒ ಮತ್ತು ಸಿಬ್ಬಂದಿ ಆಯಾ ಗ್ರಾಪಂ ವ್ಯಾಪ್ತಿಯ ಪ್ರತಿ ಮನೆಗಳಿಗೆ ಮಂಗಳವಾರ ಭೇಟಿ ನೀಡಿ ಬಾಕಿ ಉಳಿದಿರುವ ತೆರಿಗೆ ಕುರಿತು ಗ್ರಾಮಸ್ಥರಿಗೆ ಮಾಹಿತಿ ನೀಡಿದರು.  ತಾಲೂಕಿನ ಹೊಳಗುಂದಿ ಗ್ರಾಪಂನಲ್ಲಿ ಪಿಡಿಒ ಪರಮೇಶಪ್ಪ, ಉಪಾದ್ಯಕ್ಷ ಗುರುಬಸವರಾಜ, ಲೆಕ್ಕ ಸಹಾಯಕ ಪ್ರಕಾಶ, ಸಿಬ್ಬಂದಿಗಳಾದ, ಯು.ಎಂ.ಶ್ವೇತಾ, ಮಲ್ಲಪ್ಪ  ಅವರು ಬಾಕಿ ಉಳಿದಿರುವ ತೆರಿಗೆಯನ್ನು ಪ್ರತಿ ಮನೆಗೆ ತೆರಳಿ ಮಾಹಿತಿ ನೀಡುವ ಮೂಲಕ ವಸೂಲಾತಿ ಅಭಿಯಾನ ಮಾಡಿದರು. 


ಸುದ್ದಿ ಓದಿ