ವಕೀಲ ವೃಂದದ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲಾಗುವದು: ವಿಭು ಭಾಕ್ರು
High Court Chief Justice Vibhu Bhakru felicitated
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಭಾಕ್ರುಗೆ ಸನ್ಮಾನ
ಧಾರವಾಡ 06: 4/8/2025 ಉತ್ತರ ಕರ್ನಾಟಕ ಭಾಗದ ವಕೀಲ ವೃಂದದ ಬೇಡಿಕೆಗಳನ್ನು ಆದ್ಯತೆ ಮೇರೆಗೆ ಹಂತ ಹಂತವಾಗಿ ಈಡೇರಿಸಲಾಗುವದು ಎಂದು ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಭಾಕ್ರು ಅವರು ಭರವಸೆ ನೀಡಿದರು.
ಅವರು ಸೋಮವಾರ ಧಾರವಾಡ ಹೈಕೋರ್ಟ್ ಪೀಠಕ್ಕೆ ಪ್ರಥಮ ಬಾರಿ ಭೆಟ್ಟಿ ನೀಡಿ ನ್ಯಾಯಾಲಯ ಕಲಾಪ ನಡೆಸಿ ನಂತರ ಹೈಕೋರ್ಟ್ ಪೀಠ ವಕೀಲರ ಸಂಘ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು. ಮುಖ್ಯ ನ್ಯಾಯಮೂರ್ತಿ ಗಳಿಗೆ ಕರ್ನಾಟದ ಸಾಂಸ್ಕೃತಿಕ ನಾಯಕ ಶ್ರೀ ಗುರು ಬಸವಣ್ಣನವರ ಪ್ರತಿಮೆ ನೀಡಿ ಸನ್ಮಾನಿಸಲಾಯಿತು, ಹೈಕೋರ್ಟ್ ಪೀಠ ವಕೀಲರ ಸಂಘದ ಅಧ್ಯಕ್ಷ ವಿ.ಎಂ.ಶೀಲವಂತ ಅಧ್ಯಕ್ಷತೆ ವಹಿಸಿ ಮಾತನಾಡಿ " ಧಾರವಾಡ ಹೈಕೋರ್ಟ್ ಪೀಠದ ನ್ಯಾಯವಾದಿಗಳನ್ನೂ ಸಹ ಪದಾಠತ ಹಿರಿಯ ನ್ಯಾಯವಾದಿ, ಹಾಗೂ ನ್ಯಾಯಮೂರ್ತಿ ಹುದ್ದೆಗೆ ಪರಿಗಣಿಸಬೇಕು, ವಕೀಲರ ಸಂಘಕ್ಕೆ ಉತ್ತಮ ಭವನ ನಿರ್ಮಾಣ ಜಾಗ ಮಂಜೂರು ಆಗಿದ್ದು ನ್ಯಾಯಾಂಗದ ಅನುಮೋದನೆ ಬೇಕಾಗಿದೆ, ಈ ಭಾಗಕ್ಕೆ ಜನಪ್ರತಿನಿಧಿಗಳ ಕೋರ್ಟ, ಹಸಿರು ಪೀಠ ಮತ್ತು ಪ್ರಕರಣಗಳ ತ್ವರಿತ ವಿಚಾರಣೆಗೆ ಇನ್ನೂ ಕೆಲವು ನ್ಯಾಯಮೂರ್ತಿಗಳು ಬೇಕು ಮಾತ್ರವಲ್ಲ ವಕೀಲರ ಕಚೇರಿಗಳು ಸೇರಿದಂತೆ ಇನ್ನೂ ಕೆಲವು ಬೇಡಿಕೆಗಳನ್ನು ಮುಖ್ಯ ನ್ಯಾಯಮೂರ್ತಿಗಳ ಗಮನಕ್ಕೆ ತಂದರು. ವಕೀಲರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವದಾಗಿ ಮುಖ್ಯ ನ್ಯಾಯಮೂರ್ತಿಗಳು ನುಡಿದರುನ್ಯಾಯಮೂರ್ತಿ ಅನು ಶಿವರಾಮನ್ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಧಾರವಾಡ ಪೀಠದ ಹಿರಿಯ ನ್ಯಾಯಮೂರ್ತಿ ಎಸ್.ಸುನೀಲ ದತ್ ಯಾದವ್ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ಸಂತೋಷ ಮಲಗೌಡರ್ ಸ್ವಾಗತಿಸಿದರು, ದೀಪಾ ದೊಡ್ಡಟ್ಟಿ ವಂದಿಸಿದರು, ಪ್ರಧಾನ ಕಾರ್ಯದರ್ಶಿ ಆನಂದ್ ಕೊಳ್ಳಿ ಸೇರಿದಂತೆ ಪದಾಧಿಕಾರಿಗಳಾದ ಶಿವರಾಜ್ ಬೆಳ್ಳಕ್ಕಿ, ವಿಜಯ್ ಚಿನಿವಾರ, ಕೆ.ಎಸ್. ಕೋರಿಶೆಟ್ಟರ್, ಮಹಾಂತೇಶ್ ಹಿರೇಮಠ್, ಗಾಯತ್ರಿ ಎಸ್. ಆರ್. ಮನೋಜ್ ಬಿಕ್ಕಣ್ಣವರ ಹಾಜರಿದ್ದರುಮಾನಸಿ ನಿರೂಪಿಸಿದರು.
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ 