ಹೂವಿನ ಹಡಗಲಿ

ಒತ್ತಡ ಬದುಕಿನಲ್ಲಿ ಆರೋಗ್ಯ ಶಿಬಿರ ಅವಶ್ಯ

ಒತ್ತಡ ಬದುಕಿನಲ್ಲಿ ಆರೋಗ್ಯ ಶಿಬಿರ ಅವಶ್ಯ

ಲೋಕದರ್ಶನ ವರದಿ  

ಹೂವಿನಹಡಗಲಿ 9:  ಪಟ್ಟಣದ ಸೊಪ್ಪಿನ ಕಾಳಮ್ಮನವರಬಾಲಕಿಯರ ಸರ್ಕಾರಿ ಪಿಯು ಕಾಲೇಜಿನಲ್ಲಿ ಮಿಡಿತ ಹೆಲ್ತ್‌ ಕೇರ್ಫೌಂಡೇಶನ್ ಸಹಯೋಗದಲ್ಲಿ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಿಗೆ ಹೃದಯ ರೋಗ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.ಶಿಬಿರ ಉದ್ಘಾಟಿಸಿ ಮಾತನಾಡಿದ ಸಿಂಡಿಕೇಟ್ ಸದಸ್ಯ ಜಿಬಿಆರ್ ಕಾಲೇಜ್ ಪ್ರಾಚಾರ್ಯ ಎಸ್‌.ಎಸ್ ಪಾಟೀಲ್, ಇಂದಿನ ಒತ್ತಡದ ಬದುಕಿನಲ್ಲಿ ಪ್ರತಿಯೊಬ್ಬರೂ ಆರೋಗ್ಯ ಕುರಿತು ಕಾಳಜಿ ವಹಿಸುವುದು ಮುಖ್ಯ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯಎ. ಕೊಟ್ರಗೌಡ, ಮಿಡಿತ ಸಂಸ್ಥೆ ಮದಲಘಟ್ಟಿಯ ಮೊರಾರ್ಜಿ ಶಾಲೆಯ ಹಳೆ ವಿದ್ಯಾರ್ಥಿಗಳು, ಕತ್ತೆಬೆನ್ನೂರಿನ ಚನ್ನಬಸಪ್ಪ ಹಾಗೂ ಭರತ್ ಇವರ ಕಾಳಜಿ ಮೆಚ್ಚಬೇಕು ಎಂದರು.ಉಪನ್ಯಾಸಕರ ಸಂಘದ ಅಧ್ಯಕ್ಷ ಬಸೆಟ್ಟಿ ಪ್ರಕಾಶ್ ಮಾತನಾಡಿದರು. 

ಕಾರ್ಯದರ್ಶಿ ಬಿ. ವಿರೂಪಾಕ್ಷಪ್ಪ ಉಪ ಪ್ರಾಚಾರ್ಯ ಬಿ ರವೀಂದ್ರನಾಥ್, ಮಿಡಿತ ಸಂಸ್ಥೆಯ ಭರತ್, ಉಪನ್ಯಾಸಕರಾದ ಶಿವಕುಮಾರ್, ದುಷ್ಯಂತ, ಶ್ರೀಕಾಂತ್, ವೀರೇಶ್, ಮಂಜುನಾಥ್, ಪರಂಜ್ಯೋತಿ, ಆರತಿ, ಶಂಕರ್, ಪರಶುರಾಮ ನಾಗೋಜಿ, ಉಮಾ, ರಡ್ಡಿ, ಇತರರು ಉಪಸ್ಥಿತರಿದ್ದರು. ಉಪನ್ಯಾಸಕ ನಟರಾಜ್ ಪಾಟೀಲ್ ನಿರ್ವಹಿಸಿದರು. 


ಸುದ್ದಿ ಓದಿ