ಪ್ರಯತ್ನಪಟ್ಟವನು ಎಂದಿಗೂ ಸೋಲಲ್ಲ: ಗೆಜ್ಜಿ

ಪ್ರಯತ್ನಪಟ್ಟವನು ಎಂದಿಗೂ ಸೋಲಲ್ಲ: ಗೆಜ್ಜಿ He who tries is never a failure: Gezzi

ದೇವರಹಿಪ್ಪರಗಿ 12: ಪ್ರಯತ್ನಂ ಸರ್ವ ಸಿದ್ದಿ ಸಾಧನಂ ಎನ್ನುವಂತೆ ಪ್ರಯತ್ನಪಟ್ಟವನು ಎಂದಿಗೂ ಸೋಲಲ್ಲ, ಆಗಲ್ಲ ಎಂದು ಹಿಂಜರಿದವನು ಎಂದಿಗೂ ಗೆಲ್ಲುವುದಿಲ್ಲ ಎಂದು ವಿಜಯಪುರದ ಗೆಜ್ಜಿ ಕೆರಿಯರ್ ಅಕಾಡೆಮಿಯ ಸಂಸ್ಥಾಪಕ ಅಧ್ಯಕ್ಷ ಸುರೇಶ ಗೆಜ್ಜಿ ಇವರು ಹೇಳಿದರು. ತಾಲೂಕಿನ ಮುಳಸಾವಳಗಿ ಗ್ರಾಮದ ಕಾಯಕ ದಾಸೋಹ ಪ್ರತಿಷ್ಠಾನದ 16 ನೇ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸ್ಪರ್ಧಾತ್ಮಕತೆ ಹಾಗೂ ವ್ಯಕ್ತಿತ್ವ ವಿಕಸನದ ಕುರಿತು ವಿದ್ಯಾರ್ಥಿಗಳಿಗೆ ಉಪನ್ಯಾಸವನ್ನು ನೀಡುತ್ತಾ ಅವರು ಮಾತನಾಡಿದರು.ಜ್ಯೋತಿ ಬೆಳಗಿಸುವದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.ಎಸ್‌.ಎಸ್‌.ಎಲ್‌.ಸಿ ಹಾಗೂ ಪಿಯುಸಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ, ವಿವಿಧ ವಸತಿ ಶಾಲೆಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರತಿಷ್ಟಾನದ ವತಿಯಿಂದ ಸನ್ಮಾನಿಸಲಾಯಿತು.

ಸ್ಥಳೀಯ  ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಎ.ಎಸ್‌.ವಾಲೀಕಾರ ಇವರು ಬರೆದ ಎ ಥಿಯರಿ ಆಫ್ ಟೆಂಪರೇಚರ್ ಕೃತಿಯನ್ನು ಲೋಕಾರೆ​‍್ಣಗೊಳಿಸಲಾಯಿತು.ಅರವಿಂದ.ಎಮ್‌.ಬಿರಾದಾರ ಇವರಿಗೆ ದಾಸೋಹ ರತ್ನ ಹಾಗೂ ಶಂಕರಗೌಡ.ಶ.ಬಿರಾದಾರ ಇವರಿಗೆ ದಾಸೋಹ ರೈತರತ್ನ ಪ್ರಶಸ್ತಿಯನ್ನು ಈ ಸಂದರ್ಭದಲ್ಲಿ ಪ್ರತಿಷ್ಟಾನದ ವತಿಯಿಂದ ಪ್ರದಾನ ಮಾಡಲಾಯಿತು. ಶೇಕಡಾ ನೂರರಷ್ಟು ಫಲಿತಾಂಶ ಬರಲು ಕಾರಣರಾದ ಸ್ಥಳೀಯ ಪ್ರೌಢಶಾಲೆಯ ಶಿಕ್ಷಕರುಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಸಾನಿಧ್ಯವನ್ನು ದೇವರಹಿಪ್ಪರಗಿಯ ಸೋಮಶೇಖರ ಹಿರೇಮಠ ವಹಿಸಿದ್ದರು.ಇದೇ ಸಂದರ್ಭದಲ್ಲಿ ಪ್ರತಿಷ್ಟಾನದ ಅಧ್ಯಕ್ಷ ಎನ್‌.ಬಿ.ರೋಡಗಿ,ಪಿಕೆಪಿಎಸ್ ಅಧ್ಯಕ್ಷ ಸಂಗನಗೌಡ ಬಿರಾದಾರ,ಯುವ ಮುಖಂಡರಾದ ಸಾಯಬಣ್ಣ ಸೊನ್ನಳ್ಳಿ,ಗುರುರಾಜ ಆಕಳವಾಡಿ,ಎ.ಎಸ್‌.ವಾಲೀಕಾರ ಮಾತನಾಡಿದರು.

ಜೈಭವಾನಿ ಮೆಲೋಡಿಸ್ ವತಿಯಿಂದ ಸಂಗೀತ ರಸಮಂಜರಿ ನಡೆಯಿತು. ವಿಜಯಪುರದ ಅನುಗ್ರಹ ಆಸ್ಪತ್ರೆಯ ಸುನೀಲಗೌಡ ಪಾಟೀಲ,ಶರಣಯ್ಯ ಮಂಗಲಗಿ,ಶರಣಗೌಡ ಪಾಟೀಲ,ಈರಣ್ಣ ನರೂಣಿ, ಮಲಕು ಸುರಗಿಹಳ್ಳಿ, ಸುನಂದಾ ಸೊನ್ನಳ್ಳಿ, ಸಾಹೇಬಗೌಡ ಮೂಲಿಮನಿ, ಸಾಹೇಬಗೌಡ ಪಟ್ಟಣ, ಜಿ.ಪಿ.ಬಿರಾದಾರ, ದಾವಲಸಾಬ ಗಂಗೂರ, ಬಸವರಾಜ ಕಲ್ಲೂರ,ನಬಿರಸೂಲ್ ಮುಲ್ಲಾ,ಮನೋಹರ ಪೂಜಾರಿ, ಅರವಿಂದ ನಾಯ್ಕೋಡಿ, ಬಸವರಾಜ ನಾಟೀಕಾರ, ಸುರೇಶ ಉಕುಮನಾಳ, ವಿಜಯಕುಮಾರ ತಳವಾರ ಸೇರಿದಂತೆ ಗ್ರಾಮಸ್ಥರು ಹಾಗೂ ಕಾಯಕ ದಾಸೋಹ ಪ್ರತಿಷ್ಟಾನದ ಪದಾಧಿಕಾರಿಗಳು ಉಪಸ್ಥಿತರಿದ್ದರು.