ರಾಜ್ಯ ಕಾರ್ಯದರ್ಶಿಯಾಗಿ ಗುರುವಿನ ರವೀಂದ್ರ
ಹೂವಿನಹಡಗಲಿ 11: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಕಾರ್ಯದರ್ಶಿಯಾಗಿ ಪಟ್ಟಣದ ಗುರುವಿನ ರವೀಂದ್ರ (ರಾಜು) ವಕೀಲರು ಇವರನ್ನು ನೇಮಿಸಿ ಕೆಪಿಸಿಸಿ ರಾಜ್ಯಾಧ್ಯಕ್ಷರಾದ ಡಿ.ಕೆ.ಶಿವಕುಮಾರ ಆದೇಶ ನೀಡಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಕಾರ್ಯದರ್ಶಿಯನ್ನಾಗಿ ನೇಮಿಸಿ ಆದೇಶ ನೀಡಿದ ಪಕ್ಷದ ರಾಜ್ಯಾಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೆ ಓಬಿಸಿ ಘಟಕದ ರಾಜ್ಯಾಧ್ಯಕ್ಷರಾದ ಮಧು ಬಂಗಾರ್ಪನವರಿಗೆ ಹಾಗೂ ನಮ್ಮ ಕ್ಷೇತ್ರದ ಜನಪ್ರಿಯ ಶಾಸಕರಾದ ಪಿ.ಟಿ.ಪರಮೇಶ್ವರನಾಯ್ಕರವರಿಗೆ, ಜಿಲ್ಲಾ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷರಾದ ಬಿ.ವಿ. ಶಿವಯೋಗಿ ಹಾಗೂ ಓಬಿಸಿ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ ಹಾಗೂ ಹಡಗಲಿ ಇಟ್ಟಿಗಿ ಬ್ಲಾಕ್ ಅಧ್ಯಕ್ಷರಾದ ಎಂ.ಪರಮೇಶ್ವರ್ಪ, ಐಗೋಳ್ ಚಿದಾನಂದ, ತಾ.ಪಂ. ಮಾಜಿ ಅಧ್ಯಕ್ಷರಾದ ಎಸ್.ಹಾಲೇಶ್ ಹಾಗೂ ಪಕ್ಷದ ಮುಖಂಡರಿಗೆ ಓಬಿಸಿ ಘಟಕದ ನೂತನ ರಾಜ್ಯ ಕಾರ್ಯದರ್ಶಿಯಾದ ಗುರುವಿನ ರವೀಂದ್ರ (ರಾಜು) ಧನ್ಯವಾದಗಳನ್ನು ತಿಳಿಸಿದ್ದಾರೆ.