ಲಕ್ಷ್ಮೇಶ್ವರ ತಾಲೂಕಿನಲ್ಲಿ ಉತ್ತಮ ಮಳೆ ಚುರುಕುಗೊಂಡ ಕೃಷಿ ಚಟುವಟಿಕೆ

ಲಕ್ಷ್ಮೇಶ್ವರ ತಾಲೂಕಿನಲ್ಲಿ ಉತ್ತಮ ಮಳೆ ಚುರುಕುಗೊಂಡ ಕೃಷಿ ಚಟುವಟಿಕೆ  Good rains boost agricultural activities in Lakshmeshwar taluk

ಲಕ್ಷ್ಮೇಶ್ವರ  06:  ತಾಲೂಕಿನಲ್ಲಿ ಉತ್ತಮ ಮಳೆ ಯಾಗುತ್ತಿದ್ದು ರೈತರಲ್ಲಿ ಹರುಷ ತಂದಿದೆ ಇದರಿಂದ ಕೃಷಿ ಚಟವಟಿಕೆಗಳು ಚುರುಕು ಗೊಂಡಿದ್ದು ಮುಂಗಾರು ಬಿತ್ತನೆಯ ಬೆಳೆಗಳಾದ ಹೆಸರು ಗೋವಿನ ಜೋಳ ಬಿಟಿ ಹತ್ತಿ ಬೆಳೆಗಳ ಬಿತ್ತನೆಯ ಕಾರ್ಯ ಚುರುಕು ಗೊಂಡಿವೆ ಅದರಂತೆ ತಾಲೂಕಿನ ಬಟ್ಟೂರು ಗ್ರಾಮದ ರೈತರು ತಮ್ಮ ಜಮೀನಿನಲ್ಲಿ ಬಿಟಿ ಹತ್ತಿ ಬೀಜ ಬಿತ್ತನೆಗೆ ಎತ್ತಿನ ಅಭಾವ ಹಿನ್ನೆಲೆ ತಾವೇ ಕುಂಟಿ ಕಟ್ಟಿಕೊಂಡು ಸಾಲುಗಳನ್ನು ಮಾಡುತ್ತಿದ್ದರೆ ಹಿಂದೆ ಮಹಿಳೆಯರು ಬಿಟಿ ಹತ್ತಿಕಾಳುಗಳನ್ನು ಓರುತ್ತಿರುವುದು ಕಂಡುಬಂದಿತುಇಂಥಾ ಮುಂಗಾರು ಬಿತ್ತನೆಯ ಸಮಯದಲ್ಲಿ ಸರಕಾರ ರೈತರಿಗೆ ಸಮರ​‍್ಕವಾಗಿ ಬೀಜ ಗೊಬ್ಬರ ಪೂರೈಸಲು ಮುಂದಾಗಬೇಕು ವಿನಾಕಾರಣ ತಾಸುಗಂಟಲೆ ಗೊಬ್ಬರಕ್ಕಾಗಿ ಗೊಬ್ಬರದ ಅಂಗಡಿ ಮುಂದೆ ನಿಂತಿಕೊಳ್ಳುವುದನ್ನು ತಪ್ಪಿಸಬೇಕು ಎಂದು ರೈತರು ಸರ್ಕಾರವನ್ನು ಒತ್ತಾಯಿಸಿದ್ದಾರೆ,