ಗೋಕರ್ಣ: ಪಟ್ಟೆವಿನಾಯಕ ದೇವರ ಕಾತರ್ಿಕದೀಪೋತ್ಸವ
ಲೋಕದರ್ಶನ ವರದಿ
ಗೋಕರ್ಣ,28: ಇಲ್ಲಿನ ಕೋಟಿತೀರ್ಥಕಟ್ಟೆಯಲ್ಲಿರುವ ಪಟ್ಟೆವಿನಾಯಕ ದೇವರ ಕಾತರ್ಿಕದೀಪೋತ್ಸವ ಮಂಗಳವಾರ ಸಂಜೆ ವಿಜೃಂಭಣೆಯಿಂದ ನಡೆಯಿತು. ಮುಂಜಾನೆ ದೇವಾಲಯದಲ್ಲಿ ವಿವಿಧ ಧಾಮರ್ಿಕ ಕಾರ್ಯಕ್ರಮ ವಿಶೇಷ ಪೂಜೆ ನಡೆಯಿತು. ನಂತರ ದೇವಾಲಯ ಉತ್ಸವ ಕೋಟಿತೀರ್ಥಮಾರ್ಗವಾಗಿ ಮಹಾಬಲೇಶ್ವರ ಮಂದಿರಕ್ಕೆ ತೆರಳಿ ಸಂಜೆ ದೇವಾಲಯಕ್ಕೆ ಮರಳಿತು. ನಂತರ ದೀಪೋತ್ಸವ
ನಡೆಯಿತು.
ದೇವರಿಗೆ ಅಷ್ಟಾವಧಾನ ಸೇವೆ ಮಹಾ ಮಂಗಳಾರತಿಯೊಂದಿಗೆ ಉತ್ಸವ ಕೊನೆಗೊಂಡಿತು. ದೇವಾಲಯದ ಪೂಜಾ ಕೈಂಕರ್ಯ ಮತ್ತು ಉತ್ಸವವನ್ನು ಕೊಡಗಿ ಶಾಸ್ತ್ರಿ ಕುಟುಂಬದವರು ನೆರವೇರಿಸಿದರು. ಇದರ ಪ್ರಯುಕ್ತ ಸಂಪೊರ್ಣ ಕೋಟಿತೀರ್ಥ ಕಟ್ಟೆಯನ್ನು ಹಣತೆಯಿಂದ ಬೆಳಗಲಾಯಿತು. ಇದರ ಜೊತೆ ಮಾರ್ಗದುದ್ದಕ್ಕೂ ವಿದ್ಯತ್ತ ದೀಪದ ವಿಶಾಷಾಲಂಕಾರ, ಸಿಡಿಮದ್ದು ಪ್ರದರ್ಶನ ಭಕ್ತರನ್ನು ಆಕಷರ್ಿಸಿತು. ರಾತ್ರಿ ನಡೆದ ಚಿತ್ರಾಕ್ಷಿಕಲ್ಯಾಣ ಯಕ್ಷಗಾನ ಪ್ರದರ್ಶನ ಭಕ್ತರ ಮನಸೂರೆಗೊಂಡಿತು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 