ದೇವರ ಆಟ ಕಿರುಚಿತ್ರ ಶೀಘ್ರ ಬಿಡುಗಡೆ
God's Game short film to be released soon
ಲೋಕದರ್ಶನ ವರದಿ
ಮೈಸೂರು 07 : ಸಾಮಾಜಿಕ ಪ್ರಪಂಚದಲ್ಲಿ ನಡೆಯುವತಂದೆ-ಮಗನ ಸಂಬಂಧದ ಬಗ್ಗೆ , ಬಾಂಧವ್ಯವನ್ನು ಹಾಗೂ ಈಗಿನ ಕಾಲಘಟ್ಟಕ್ಕೆ ತಂದೆ-ಮಕ್ಕಳು ಯಾವ ರೀತಿ ಇರಬೇಕೆಂದು ‘ದೇವರ ಆಟ’ ಕಿರುಚಿತ್ರದ ಮೂಲಕ ಮನಮುಟ್ಟುವ ರೀತಿಯಲ್ಲಿ ಮೈಸೂರು ಸೋಮು ಹೇಳಹೊರಟಿದ್ದಾರೆ. ನಲವತ್ತು ನಿಮಿಷಗಳ ಕಿರುಚಿತ್ರವನ್ನು ಮನೆಮಂದಿಯೆಲ್ಲಾ ವೀಕ್ಷಿಸಬಹುದು. ಚಿತ್ರವನ್ನು ಕೆಲವು ಸ್ಪರ್ಧೆಗಳಿಗೆ ಕಳಿಸಲಾಗುತ್ತಿದೆ. ಹೀಗಾಗಿ ಚಿತ್ರವನ್ನು ಸಾಧ್ಯವಿದ್ದಷ್ಟು ಯಾವುದೇ ಕೊರತೆಯಾಗದಂತೆ ಎಲ್ಲ ರೀತಿಯಲ್ಲಿ ರಿಚ್ ಬರುವಂತೆ ಮಾಡುತ್ತಿದ್ದೇವೆ. ಚಿತ್ರವನ್ನು ನೋಡಿದ ಪ್ರೇಕ್ಷಕರು ಸಣ್ಣ ಬದಲಾವಣೆಯನ್ನಂತೂ ತಮ್ಮ ಮನೆಗಳಲ್ಲಿ-ಮನಗಳಲ್ಲಿ ತಂದುಕೊಳ್ಳುವರು. ಚಿತ್ರದ ಎಲ್ಲಾ ತಾಂತ್ರಿಕ ಕೆಲಸ ಮುಗಿದಿದ್ದು ಅತಿ ಶೀಘ್ರದಲ್ಲೇ ಬಿಡುಗಡೆ ಮಾಡಲಾಗುತ್ತದೆ.
ನಾನು ಛಾಯಾಗ್ರಾಹಕನಾಗಿ ಇನ್ನೂ ಬೆಳೆಯಬೇಕಾಗಿದೆ ಅದಕ್ಕೆ ಚಿತ್ರರಂಗದವರ ಜೊತೆಗೆ ಮಾಧ್ಯಮದವರ ಪ್ರೋತ್ಸಾಹ ಕೂಡ ಬೇಕು ಎಂದು ಸುಮಾರು ಇಪ್ಪತ್ತೈದು ಕಿರು ಚಿತ್ರಗಳಿಗೆ ಛಾಯಾಗ್ರಹಣ, ಎಂಟು ಸಿನಿಮಾಗಳಿಗೆ ಛಾಯಾಗ್ರಾಹಕನಾಗಿ ಕೆಲಸ ಮಾಡಿ ಅನುಭವವಿರುವ ನಿರ್ದೇಶಕ ಮೈಸೂರು ಸೋಮು ಹೇಳಿದ್ದಾರೆ. ಮೈಸೂರು ಸುತ್ತಮುತ್ತ ಚಿತ್ರೀಕರಣ ನಡೆಸಿರುವ ಈ ಚಿತ್ರದಲ್ಲಿ ನಾಯಕ ನಟನಾಗಿ ಕಾರ್ತಿಕ್ ಜಯರಾಜ್ ಅಭಿನಯಿಸಿದ್ದು ಉಳಿದಂತೆ ಮಂಡ್ಯ ಸತ್ಯ, ಆನಂದ ಬಾಬು, ಅಜಯ್ ಆರ್ ಎಸ್, ಲೋಕೇಶ್ , ಗೀರೀಶ್ ಮಳವಳ್ಳಿ , ವಿಶ್ವ ಮಳವಳ್ಳಿ ಹಾಗೂ ಹಳ್ಳಿಯ ಗ್ರಾಮೀಣ ಕಲಾವಿದರು ಅಭಿನಯಿಸಿದ್ದಾರೆ.
ಖಾತೆ ಮುಟ್ಟುಗೋಲಾದರೂ ಶಿವಂ ಸಂಸ್ಥೆಗೆ ಜನರಿಂದ ಇನ್ನೂ ದುಡ್ಡು ಠೇವಣಿ : ವಂಚನೆ ಜಾಲದಿಂದ ದೂರ ಇರಿ, ಜನರಿಗೆ ಸಿಐಡಿ ಡಿಐಜಿಪಿ ಗುಳೇದ್ ಮನವಿ
ಬಹುಕೋಟಿ ಹಣ ವಂಚನೆ : ಆದಿತ್ಯರಾಜ್ ಕೇಸು ಸಿಐಡಿಗೆ, ಸಿಇಓ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ಏರ್ಪೋರ್ಟ್ ಗಳಿಗೆ ಮಾಹಿತಿ ರವಾನೆ
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ 