ಪ್ರೊ. ಉಮೇಶ ಹುನಗುಂದರಿಗೆ ಪಿಹೆಚ್ಡಿ ಪದವಿ: ಉಳವಿಚನ್ನಬಸವೇಶ್ವರರ ಪ್ರತಿಮೆಯ ಸಮ್ಮುಖದಲ್ಲಿ ಸನ್ಮಾನ
Prof. Umesh Hunagundari conferred with PhD degree: felicitated in the presence of the statue of Ulav
ಬೈಲಹೊಂಗಲ 07 : ಇಲ್ಲಿಯ ಕಿತ್ತೂರು ರಾಣಿ ಚೆನ್ನಮ್ಮ ಶಿಕ್ಷಣ ಸಂಸ್ಥೆಯ ಮಹಾವಿದ್ಯಾಲಯದ ಪ್ರೊ. ಉಮೇಶ ಹುನಗುಂದ ಇವರು ಡಿಸೈನ ಸಿಂಥೆಸಿಸ್ ಕ್ಯಾರೆಕ್ಟರೈಜೇಶನ್ ಮತ್ತು ಆಪ್ಟೋ ಎಲೆಕ್ಟ್ರಾನಿಕ್ ಸ್ಟಡೀಸ ಆಫ್ ನಾವೆಲ ಕ್ಯುಮಿರಿನ ಡೆರಿವೆಟಿವ್ಸ ವಿಷಯದ ಕುರಿತು ಮಂಡಿಸಿದ ಸಂಶೋಧನಾ ಮಹಾಪ್ರಬಂಧಕ್ಕೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿಹೆಚ್ಡಿ ಪದವಿ ಪ್ರಕಟಿಸಲಾಗಿದೆ. ಇವರಿಗೆ ಡಾ. ಲೋಕೇಶ ಎ. ಶಾಸ್ತ್ರಿ ಮಾರ್ಗದರ್ಶನ ಮಾಡಿದ್ದಾರೆ. ಇವರಿಗೆ ವಾಯುವಿಹಾರದ ಗೆಳೆಯರ ಬಳಗದಿಂದ ರವಿವಾರದಂದು ಮುಂಜಾನೆ ಬೈಲಹೊಂಗಲದ ದೊಡ್ಡ ಕೆರೆಯ ಉದ್ಯಾನವನದಲ್ಲಿ ಅವಿರಳ ಜ್ಞಾನಿ ಉಳವಿಚನ್ನಬಸವೇಶ್ವರರ ಪ್ರತಿಮೆಯ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಹೇಶ ಕೂಟಗಿ, ಬಸವರಾಜ ಬಡಿಗೇರ, ಅನ್ವರಹುಸೇನ ಪಾಟೀಲ, ಚಂದ್ರಶೇಖರ ಕೊಪ್ಪದ, ರಮೇಶ ಸುತಾರ, ವಿರೂಪಾಕ್ಷಿ ಗಣಾಚಾರಿ,ಎಸ್ ಎಂ ಮಾಳಯ್ಯನವರ, ಕಲ್ಮೇಶ ಶರಣ್ಣವರ, ಎಂ ಜಿ ನಾಗನೂರ,ಸಂಜೀವ ಕುಪ್ಪುಸಗೌಡರ, ನಿಂಗಪ್ಪ ಸತ್ತಿಗೇರಿ, ವಿನಾಯಕ ಇಂಚಲ, ಹಾಗೂ ಇನ್ನುಳಿದ ಗೆಳೆಯರು ಭಾಗವಹಿಸಿದ್ದರು.
ಒಬ್ಬರಿಗೆ ಒಂದೇ ಹುದ್ದೆ ಕಾಂಗ್ರೆಸ್ ಪಕ್ಷದ ನಿಯಮದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ : ಸಚಿವ ಸತೀಶ ಜಾರಕಿಹೊಳಿ
ಖಾತೆ ಮುಟ್ಟುಗೋಲಾದರೂ ಶಿವಂ ಸಂಸ್ಥೆಗೆ ಜನರಿಂದ ಇನ್ನೂ ದುಡ್ಡು ಠೇವಣಿ : ವಂಚನೆ ಜಾಲದಿಂದ ದೂರ ಇರಿ, ಜನರಿಗೆ ಸಿಐಡಿ ಡಿಐಜಿಪಿ ಗುಳೇದ್ ಮನವಿ
ಬಹುಕೋಟಿ ಹಣ ವಂಚನೆ : ಆದಿತ್ಯರಾಜ್ ಕೇಸು ಸಿಐಡಿಗೆ, ಸಿಇಓ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ಏರ್ಪೋರ್ಟ್ ಗಳಿಗೆ ಮಾಹಿತಿ ರವಾನೆ
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ 