ಪ್ರಾಮಾಣಿಕ ಬದುಕಿಗೆ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ: ಪಟ್ಟಣಕುಡೆ
ಹಾವೇರಿ:ನ. ಸಮಾಜದಲ್ಲಿ ಪ್ರಾಮಾಣಿಕವಾಗಿ ಬದುಕಲು ಮಕ್ಕಳಿಗೆ ಆರಂಭದಲ್ಲೇ ಉತ್ತಮ ಸಂಸ್ಕಾರ ನೀಡಬೇಕು ಎಂದು ಭ್ರಷ್ಟಾಚಾರ ನಿಗ್ರಹ ದಳದ ನಿರೀಕ್ಷಕ ಸುದರ್ಶನ ಕೆ.ಪಟ್ಟಣಶೆಟ್ಟಿ ಅವರು ಹೇಳಿದರು.
ಗುರುವಾರ ನಗರದ ಪ್ರಧಾನ ಅಂಚೆ ಇಲಾಖೆಯಲ್ಲಿ ಆಯೋಜಿಸಲಾದ ಜಾಗತಿ ಅರಿವು ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಭ್ರಷ್ಟಾಚಾರ ನಿಮರ್ೂಲನೆಯಲ್ಲಿ ಸಮಾಜದ ಪಾತ್ರ ಪ್ರಮುಖವಾಗಿದೆ. ಲಂಚ ತೆಗೆದುಕೊಳ್ಳುವುದಷ್ಟೇ ಅಪರಾಧವಲ್ಲ ಕೊಡುವುದೂ ಸಹ ಅಪರಾಧವಾಗಿದೆ. ಸಾರ್ವಜನಿಕರು ಭ್ರಷ್ಟಾಚಾರದ ವಿರುದ್ಧ ಧ್ವನಿಯತ್ತಿ ಭ್ರಷ್ಟಾಚಾರಿಗಳ ಅವಿರುದ್ಧ ದೂರು ಸಲ್ಲಿಸಲು ಮುಂದಾಗದಿರುವುದು ವಿಷಾದದ ಸಂಗತಿ ಎಂದು ಹೇಳಿದರು.
ಪ್ರಧಾನ ಅಂಚೆ ಕಚೇರಿ ಅಂಚೆ ಪಾಲಕ ಎಸ್.ಎನ್.ಕೊಪ್ಪಳ ಅವರು ಮಾತನಾಡಿ, ನಾಗಾಲೋಟದ ಜೀವನದಲ್ಲಿ ಸಾರ್ವಜನಿಕರು ಸಂದರ್ಭದ ಕೈಗೊಂಬೆಯಾಗಿ ಲಂಚ ಕೊಡುವ ಪ್ರವೃತ್ತಿಯನ್ನು ಅನಿವಾರ್ಯವಾಗಿ ಬೆಳೆಸಿಕೊಂಡಿದ್ದು ಇದು ಹಾಗೆಯೇ ಮುಂದುವರೆದರೆ ಸಮಾಜಕ್ಕೆ ಮಾರಕವಾಗಿ ಪರಿಣಮಿಸುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಹಾಯಕ ಅಂಚೆ ಅಧೀಕ್ಷಕ ನಿಂಗನಗೌಡ ಬಂಗಿಗೌಡ್ರ ಅವರು ಭ್ರಷ್ಟಾಚಾರ ನಿಮರ್ೂಲನೆಯಲ್ಲಿ ಅಂಚೆ ಇಲಾಖೆಯ ಪಾತ್ರದ ಕುರಿತು ಮಾತನಾಡಿ, ಅಂಚೆ ಇಲಾಖೆಯಲ್ಲಿ ತಪ್ಪು ಮಾಡಿದವರ ಮೇಲೆ ನಿದರ್ಾಕ್ಷಿಣ್ಯವಾಗಿ ಇಲಾಖಾ ನಿಯಮಾವಳಿನುಸಾರವಾಗಿ ಕ್ರಮ ಜರುಗಿಸಲಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿವಿಧ ಸಿಬ್ಬಂದಿಗಳು ಉಪಸ್ಥಿತರಿದ್ದರು. ದೀಪಾ ಗೋನಾಳ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 